ಜೂ.22ಕ್ಕೆ ಫುಟ್ ಆಪರೇಟೆಡ್ ಸೆನಿಟೈಸರ್ ಉಪಕರಣ ಬಿಡುಗಡೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಸರಳವಾಗಿ ಬಳಕೆ ಮಾಡಬಲ್ಲ ಫುಟ್ ಆಪರೇಟೆಡ್ ಸೆನಿಟೈಸರ್ ಡಿಸ್ಟೆನ್ಸರ್ ಉಪಕರಣವೊಂದನ್ನು ನರಿಮೊಗರು ಮುಕ್ವೆಯಲ್ಲಿರುವ ಜಿಗಾಂಟಿಕ್ ಇಂಡಸ್ಟ್ರೀಸ್‌ನವರು ಆವಿಷ್ಕರಿಸಿದ್ದು, ಈ ನೂತನ ಮಾದರಿಯ ಸೆನಿಟೈಸರ್ ಡಿಸ್ಪೆನ್ಸರ್ ಉಪಕರಣದ ಬಿಡುಗಡೆ ಸಮಾರಂಭ ಜೂ. 22ರಂದು ಪುತ್ತೂರು ಎಸೋಸಿಯೇಶನ್ ಆಫ್ ಸಿವಿಲ್ ಇಂಜಿನಿಯರ‍್ಸ್ ಸಹಾಯೋಗದೊಂದಿಗೆ ನೆಹರುನಗರ ಸಚ್‌ಚಿತ್ ಕಾಂಪ್ಲೆಕ್ಸ್‌ನ ದ್ವಿತೀಯ ಮಹಡಿಯಲ್ಲಿರುವ ಪೇಸ್‌ನ ಕಚೇರಿಯಲ್ಲಿ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ.

ಪೇಸ್ ಅಧ್ಯಕ್ಷ ಸಿವಿಲ್ ಇಂಜಿನಿಯರ್ ಹರೀಶ್ ಪುತ್ತೂರಾಯ ಅಧ್ಯಕ್ಷತೆಯಲ್ಲಿ ಪುತ್ತೂರು ಶಾಸಕ ಸಂಜೀವ ಮಠಂದೂರು ಉಪಕರಣದ ಬಿಡುಗಡೆ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ. ಕೆ.ಎಂ. ಕೃಷ್ಣ ಭಟ್, ತಾಲೂಕು ಆರೋಗ್ಯಾಧಿಕಾರಿ ಡಾ. ಅಶೋಕ್ ರೈ, ಪೇಸ್‌ನ ಗೌರವಾಧ್ಯಕ್ಷ ಇಂಜಿನಿಯರ್ ಎಸ್.ಕೆ. ಆನಂದ ಕುಮಾರ್ ಪಾಲ್ಗೊಳ್ಳಲಿದ್ದಾರೆ.
ಈ ಉಪಕರಣವನ್ನು ಕಬ್ಬಿಣದಿಂದ ತಯಾರಿಸಲಾಗಿದ್ದು ಅತ್ಯಂತ ಹಗುರವಾದ ಉಪಕರಣವನ್ನು ಇರಿಸಲು ಹೆಚ್ಚಿನ ಸ್ಥಳಾವಕಾಶ ಅಗತ್ಯವಿಲ್ಲ. ಅಲ್ಲದೇ, ಸೆನಿಟೈಸರ್ ಬಾಟಲಿಯಿಂದ ದ್ರಾವಣ ಸಲೀಸಾಗಿ ಹೊರ ಬರುವಂತೆ ಮೇಲಿನ ವಿನ್ಯಾಸವನ್ನು ಮಾಡಲಾಗಿದೆ. ಕಾಲಿನಿಂದ ತುಳಿದು ಇದನ್ನು ಬಳಕೆ ಮಾಡಬೇಕು. ಕಾಲಿನಿಂದ ತುಳಿಯುವ ಪೆಡಲ್ ಕೂಡಾ ಸಲೀಸಾಗಿ ಚಲಾವಣೆಗೊಳ್ಳುತ್ತದೆ. ಆಸ್ಪತ್ರೆಯ ಆಪರೇಷನ್ ಥಿಯೇಟರ್, ಆಸ್ಪತ್ರೆಗಳು, ರೆಸ್ಟೋರೆಂಟ್‌ಗಳು, ಮಾಲ್‌ಗಳು, ಶಾಲೆಗಳು, ಅಂಗಡಿಗಳು, ಆಟದ ಮೈದಾನಗಳು ಹೀಗೆ ಸಾರ್ವಜನಿಕರು ಬರುವ ಎಲ್ಲಾ ಸ್ಥಳಗಳಲ್ಲಿ ಇರಿಸಲು ಇದು ಸೂಕ್ತವಾಗಿದೆ ಎಂದು ಸಂಯೋಜಕರಾದ ಜಿಗಾಂಟಿಕ್ ಇಂಡಸ್ಟ್ರೀಸ್‌ನ ಪ್ರವೀಣ್ ಎನ್. ಆಚಾರ್ಯ ಮತ್ತು ಪೇಸ್‌ನ ಇಂಜಿನಿಯರ್ ಶಂಕರ ಭಟ್ ತಿಳಿಸಿದ್ದಾರೆ.


ಈ ಉಪಕರಣವನ್ನು ಕಬ್ಬಿಣದಿಂದ ತಯಾರಿಸಲಾಗಿದ್ದು ಅತ್ಯಂತ ಹಗುರವಾದ ಉಪಕರಣವನ್ನು ಇರಿಸಲು ಹೆಚ್ಚಿನ ಸ್ಥಳಾವಕಾಶ ಅಗತ್ಯವಿಲ್ಲ. ಅಲ್ಲದೇ, ಸೆನಿಟೈಸರ್ ಬಾಟಲಿಯಿಂದ ದ್ರಾವಣ ಸಲೀಸಾಗಿ ಹೊರಬರುವಂತೆ ಮೇಲಿನ ವಿನ್ಯಾಸವನ್ನು ಮಾಡಲಾಗಿದೆ. ಕಾಲಿನಿಂದ ತುಳಿದು ಇದನ್ನು ಬಳಕೆ ಮಾಡಬೇಕು. ಕಾಲಿನಿಂದ ತುಳಿಯುವ ಪೆಡಲ್ ಕೂಡಾ ಸಲೀಸಾಗಿ ಚಲಾವಣೆಗೊಳ್ಳುತ್ತದೆ. ಆಸ್ಪತ್ರೆಯ ಆಪರೇಷನ್ ಥಿಯೇಟರ್, ಆಸ್ಪತ್ರೆಗಳು, ರೆಸ್ಟೋರೆಂಟ್‌ಗಳು, ಮಾಲ್‌ಗಳು, ಶಾಲೆಗಳು, ಅಂಗಡಿಗಳು, ಆಟದ ಮೈದಾನಗಳು ಹೀಗೆ ಸಾರ್ವಜನಿಕರು ಬರುವ ಎಲ್ಲಾ ಸ್ಥಳಗಳಲ್ಲಿ ಇರಿಸಲು ಇದು ಸೂಕ್ತವಾಗಿದೆ ಎಂದು ಸಂಯೋಜಕರಾದ ಜಿಗಾಂಟಿಕ್ ಇಂಡಸ್ಟ್ರೀಸ್‌ನ ಪ್ರವೀಣ್ ಎನ್. ಆಚಾರ್ಯ ಮತ್ತು ಪೇಸ್‌ನ ಇಂಜಿನಿಯರ್ ಶಂಕರ ಭಟ್ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.