HomePage_Banner
HomePage_Banner
HomePage_Banner

ನಮ್ಮೂರಿನ ಜನಸ್ನೇಹಿ ಪವರ್‌ಮೆನ್ ಜಗ್ಗಣ್ಣ

Puttur_Advt_NewsUnder_1
Puttur_Advt_NewsUnder_1

✍🏻 ಚೈತ್ರಾ ಅನಂತಿ‌ಮಾರ್


ಮ್ಮ ದೇಶದಲ್ಲಿ ಜೀವದ ಹಂಗನ್ನು ತೊರೆದು ಯೋಧರು ಹೇಗೆ ಕಾರ್ಯನಿರ್ವಹಿಸುತ್ತಿದ್ದಾರೋ ಅಂತೆಯೇ ಮೆಸ್ಕಾಂನ ಪವರ್ ಮ್ಯಾನ್ ಗಳೂ ಕೂಡಾ ತಮ್ಮ ಜೀವದ ಹಂಗನ್ನು ತೊರೆದು ಭೀಕರ ಗಾಳಿ ಮಳೆಯನ್ನು ಲೆಕ್ಕಿಸದೆ ಎದೆಗುಂದದೆ ತಮ್ಮ ಕರ್ತವ್ಯವನ್ನು ಚಾಚೂ ತಪ್ಪದೆ ಪಾಲನೆ ಮಾಡುತ್ತಾರೆ. ಹೊರಗೆ ಜೋರಾದ ಗಾಳಿ-ಮಳೆ ಬರುತ್ತಿದ್ದ ಹಾಗೆ ಎಲ್ಲರೂ ಬೆಚ್ಚಗೆ ಮನೆಯಲ್ಲಿ ಕೂತರೆ, ಅದೆಂಥ ಮೆಳೆಯಿರಲಿ ಗಾಳಿಯಿರಲಿ ಯಾವುದನ್ನೂ ಲೆಕ್ಕಿಸದೆ ತಮ್ಮ ಕರ್ತವ್ಯವನ್ನು ನಿಷ್ಠೆಯಿಂದ ನಿಭಾಯಿಸುವವರು ಪವರ್ ಮ್ಯಾನ್‌ಗಳು. ಅಂತಹವರಲ್ಲಿ ಒಬ್ಬರು ಬನ್ನೂರಿನ ಪವರ್‌ಮೆನ್ ಮೆಕ್ಯಾನಿಕ್ ಜಗ್ಗಣ್ಣ ಎಂದೇ ಚಿರಪರಿಚಿತರಾದ ಜಗದೀಶ್ ಪಿ ಗೌಡರವರು ಇವರು ತನ್ನ ಸರಳತೆ, ಸಜ್ಜನಿಕೆಯಿಂದ ಊರವರ-ಪರವೂರವರ ಮನಸ್ಸನ್ನು ಗೆದ್ದಿದ್ದಾರೆ.

ಇವರು ಪ್ರಸ್ತುತ ಚಿಕ್ಕಮುಡ್ನೂರು-ಕೋಡಿಂಬಾಡಿ- ಬೆಳ್ಳಿಪ್ಪಾಡಿ ಪವರ್‌ಮೆನ್ (ಮೆಕ್ಯಾನಿಕ್) ಆಗಿ ಕಾರ್ಯನಿರ್ವಹಿಸುತ್ತಿದ್ದರೂ ಕೂಡಾ, ಮೂಡಾಯೂರು, ಕೆಮ್ಮಾಯಿ ಸೇರಿದಂತೆ ಹಲವು ಪ್ರದೇಶದ ವಿದ್ಯುತ್ ಸಮಸ್ಯೆಗೆ ಸ್ಪಂದನೆ ನೀಡುತ್ತಾರೆ. ಸೀಮಿತ ಪ್ರದೇಶಗಳಿಗೆ ಮಾತ್ರ ತಮ್ಮ ಸೇವೆಯನ್ನು ಮೀಸಲಿಡದೆ ಎಲ್ಲರ ಕಷ್ಟಕ್ಕೂ ಸ್ಪಂದನೆ ಕೊಡುತ್ತಿರುವವರು ಜಗ್ಗಣ್ಣ. ಕೆಲವೆಡೆ ಗಾಳಿ ಮಳೆಯಿಂದ ವಿದ್ಯುತ್ ಸಮಸ್ಯೆ ಕಂಡು ಬಂದಲ್ಲಿ ಸಾರ್ವಜನಿಕರು ಕೂಡಲೇ ಮೆಸ್ಕಾಂನ ಸಹಾಯವಾಣಿಗೆ ಕರೆ ಮಾಡಿದರೆ, ನಮ್ಮಲ್ಲಿ ಜಗ್ಗಣ್ಣನಿಗೆ ಮೊರೆ ಹೋಗುತ್ತಾರೆ. ಅದೆಷ್ಟೋ ಕಡೆ ಭೀಕರ ಗಾಳಿ ಮಳೆಯಿಂದ ವಾರಗಟ್ಟಲೆ ವಿದ್ಯುತ್ ಸಮಸ್ಯೆಗಳು ಕಂಡುಬರುತ್ತದೆ. ಆದರೆ ನಮ್ಮಲ್ಲಿ ಜಗ್ಗಣ್ಣ ಆದ್ಯಾವುದಕ್ಕೂ ಅವಕಾಶವನ್ನೇ ಕಲ್ಪಿಸಿಕೊಟ್ಟಿಲ್ಲ. ಒಂದೇ ಕರೆಗೆ ತಾವು ಯಾವುದೇ ಕಾರ್ಯದಲ್ಲಿದ್ದರೂ ಜನರ ಸಮಸ್ಯೆಗಳಿಗೆ ಕ್ಲಪ್ತ ಸಮಯದಲ್ಲಿ ಸ್ಪಂದನೆ ನೀಡುತ್ತಾರೆ. ರಾತ್ರಿ ಹಗಲೆನ್ನದೆ ನಾಲ್ಕೈದು ಜನರು ಮಾಡುವ ಕೆಲಸವನ್ನು ಒಬ್ಬರೇ ನಿರ್ವಹಿಸುತ್ತಾರೆ. ಸದಾ ಸಮಾಜಮುಖಿ ಚಿಂತನೆಯೊಂದಿಗೆ ಯಾವುದೇ ಸಮಸ್ಯೆಗಳಿದ್ದಾಗ ಯಾರೇ ಕರೆದರೂ ಹಗಲಿರುಳು ಎಂದು ಲೆಕ್ಕಿಸದೆ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಾ ಪವರ್‌ಮೆನ್ (ಮೆಕ್ಯಾನಿಕ್) ವೃತ್ತಿಗೊಂದು ನ್ಯಾಯ ಒದಗಿಸಿಕೊಟ್ಟಿದ್ದಾರೆ.

ಸಹೋದ್ಯೋಗಿಗಳ ಮತ್ತು ಗ್ರಾಮದ ಜನತೆಯ ಸಹಕಾರ ಮತ್ತು ಮನೆಯವರ ಹೊಂದಾಣಿಕೆ ನನಗೆ ಕೆಲಸ ಮಾಡಲು ಸಹಾಯವಾಗುತ್ತದೆ. ಕರ್ತವ್ಯವನ್ನು ಶ್ರದ್ಧೆಯಿಂದ ಮಾಡಿದಾಗ ಜನ ನಮ್ಮನ್ನು ಗುರುತಿಸುತ್ತಾರೆ. – ಜಗದೀಶ್ ಪಿ. ಗೌಡ ಪವರ್ ಮೆನ್(ಮೆಕ್ಯಾನಿಕ್)

ಜಗದೀಶ್ ರವರು ಪುತ್ತೂರು ಟೌನ್ ನಲ್ಲಿ ಹತ್ತು ವರ್ಷ, ಪುತ್ತೂರು ಗ್ರಾಮಾಂತರ II ರಲ್ಲಿ ಆರು ವರ್ಷ ಹಾಗೂ ಪುತ್ತೂರು ಗ್ರಾಮಾಂತರ III ಬನ್ನೂರಿನಲ್ಲಿ ಐದು ವರ್ಷ ಸೇವೆ ಸಲ್ಲಿಸಿದ್ದಾರೆ. ಇವರಿಗೆ ಪವರ್ ಮ್ಯಾನ್ ಗಳಾದ ಹೇಮಚಂದ್ರ, ಶೇಖರ್ ಮತ್ತು ನವಾ‌ಝ್ ರವರು ಸಾಥ್ ನೀಡುತ್ತಾರೆ. ಜಗದೀಶ್ ರವರು ಚಿಕ್ಕಮುಡ್ನೂರು ಗ್ರಾಮದ ಪಾಪುನಾರು ದಿ.ಬಾಬು ಗೌಡ ಹಾಗೂ ಬಾಲಕ್ಕರವರ ಪುತ್ರರಾಗಿದ್ದು, ಇವರಿಗೆ ಸಹೋದರರು ಹಾಗೂ ಇಬ್ಬರು ಸಹೋದರಿಯರು. ಇವರು ನವೀನಕುಮಾರಿಯವರನ್ನು ವಿವಾಹವಾಗಿದ್ದು ಶ್ರೀನಿಧಿ ಹಾಗೂ ತುಷಾರ್ ಇಬ್ಬರು ಮಕ್ಕಳೊಂದಿಗೆ ಸುಖ ಸಂಸಾರವನ್ನು ನಡೆಸುತ್ತಿದ್ದಾರೆ. ಇವರಿಗೆ ಹಲವು ಸಂಘ-ಸಂಸ್ಥೆಗಳಿಂದ, ಊರವರಿಂದ ಸನ್ಮಾನ ಹಾಗೂ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿದೆ.

ಲೈನ್ ಮ್ಯಾನ್ ಎಂಬ ಪದಕ್ಕೆ ಅರ್ಹ ವ್ಯಕ್ತಿ ಯಾರು ಅಂತ ಆಯ್ಕೆ ಮಾಡಿದ್ರೆ ಮೊದಲು ಸಿಗುವ ವ್ಯಕ್ತಿಯೇ ನಮ್ಮ ಜಗ್ಗಣ್ಣ. ಯಾವ ಸಂದರ್ಭದಲ್ಲೇ ಆಗಲಿ ಹಗಲು ಇರುಳು ಎನ್ನದೇ ನಮ್ಮ ಕರೆಗೆ ಸ್ಪಂದಿಸಿ ಲೈನ್ ಸರಿ ಮಾಡಿ ಕೊಡುತ್ತಾರೆ. ಇವರ ಮುಂದಿನ ಸೇವೆಯು ಹೀಗೆ ಇರಲಿ. – ಎಸ್.ರಾಜೇಶ್ ಆಚಾರ್ಯ ಸಿದ್ಯಾಲ

ಸರಳ, ಸಜ್ಜನಿಕೆಯ ವ್ಯಕ್ತಿಯಾದ ಜಗದೀಶ್ ಗೌಡರವರು ಯಾರೇ ಕರೆ ಮಾಡಿ ಸಮಸ್ಯೆ ಹೇಳಿಕೊಂಡರು ತಕ್ಷಣ ಸ್ಪಂದಿಸುವ ಮನೋಭಾವವುಳ್ಳವರಾಗಿದ್ದಾರೆ. ಅವರು ಈ ಸೇವೆ ಎಲ್ಲರಿಗೂ ಮಾದರಿಯಾಗಿದೆ. – ಅಣ್ಣಿ ಪೂಜಾರಿ, ಗ್ರಾ.ಪಂ. ಸದಸ್ಯರು ಬನ್ನೂರು

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.