HomePage_Banner
HomePage_Banner
HomePage_Banner

ಪುತ್ತೂರು ತಾಲೂಕು ಸವಿತಾ ಸಮಾಜದ ವಾರ್ಷಿಕ ಮಹಾಸಭೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಪುತ್ತೂರು ತಾಲೂಕು ಸವಿತಾ ಸಮಾಜದ ವಾರ್ಷಿಕ ಮಹಾಸಭೆ ಜೂ. 16ರಂದು ಅಲ್ಮ ಟವರ್‍ಸ್‌ನ ಮಹಡಿಯಲ್ಲಿ ನಡೆಯಿತು. ಸವಿತಾ ಸಮಾಜದ ಅಧ್ಯಕ್ಷ ಸೆಲ್ವಂ ರಾಜ್‌ರವರು ಕಾರ್‍ಯಕ್ರಮದ ಅಧ್ಯಕ್ಷತೆ ವಹಿಸಿದರು. ಸವಿತಾ ಸಮಾಜದ ದಕ್ಷಿಣ ಕನ್ನಡ ಜಿಲ್ಲಾ ಪ್ರಧಾನ ಕಾರ್‍ಯದರ್ಶಿ ವಸಂತ ಬೆಳ್ಳೂರು, ಮೇದಿನಿಯ ನವೀನರವರು ಮಾತನಾಡಿ ಕೆಲವು ಸೂಚನೆಗಳನ್ನು ನೀಡಿದರು.
ವಾರದ ರಜೆಯನ್ನು ಮಂಗಳವಾರ ಕಡ್ಡಾಯವಾಗಿ ಮಾಡುವುದು ಹಾಗೂ ಮಂಗಳವಾರ ಸೆಲೂನ್ ಬಾಗಿಲು ತೆಗೆದರೆ ಸವಿತಾ ಸಮಾಜದ ವತಿಯಿಂದ 1 ಸಾವಿರ ದಂಡ ಹಾಕಲಾಗುವುದು ಎಂದು ತೀರ್ಮಾನಿಸಲಾಯಿತು. ಅಂಗಡಿಯಲ್ಲಿ ಬಾಗಿಲ ಬಳಿ ಸ್ಯಾನಿಟೈಸರ್, ಡೆಟಾಲ್, ಬಿಸಿನೀರು ಉಪಯೋಗಿಸಬೇಕು. ಏಪ್ರೆನ್ ಬಟ್ಟೆಯನ್ನೇ ಹಾಕಿ ಹೇರ್ ಕಟ್ಟಿಂಗ್ ಮತ್ತು ಶೇವಿಂಗ್‌ಗೆ 200ರೂ. ಹಾಗೂ ಸೆಟ್ಟಿಂಗ್ 100ರೂ. ನಗದನ್ನೇ ಪಡೆಯುವುದು ಎಂದು ತಿರ್ಮಾನಿಸಲಾಯಿತು. ಅಂಗಡಿಯ ಒಳಗೆ ಹೆಚ್ಚು ಜನರನ್ನು ನಿಲ್ಲಿಸಬಾರದು. ಅಂಗಡಿಯ ಒಳಗೆ ಸ್ವಚ್ಚವಾಗಿ ಕೊರೋನಾದ ಬಗ್ಗೆ ನಗರಸಭೆಯಿಂದ ಹೇಳಿದ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಬೆಳಿಗ್ಗೆ ಗಂಟೆ 8ರಿಂದ ರಾತ್ರಿ ಗಂಟೆ 8.30ರ ತನಕ ಅಂಗಡಿ ಓಪನ್ ಮಾಡಬೇಕು ಎಂದು ಸೂಚಿಸಲಾಯಿತು.
ಜಿಲ್ಲಾ ಪ್ರತಿನಿಧಿ ಪ್ರಶಾಂತ ನೀರುಮಾರ್ಗ, ರಮೇಶ ಭಂಡಾರಿ ಮುರ, ಗೌರವಾಧ್ಯಕ್ಷ ಬಾಲಕೃಷ್ಣ ಭಂಡಾರಿ, ಗೌರವ ಸಲಹೆಗಾರರಾದ ಸುರೇಂದ್ರ ಭಂಡಾರಿ, ನಾರಾಯಣ ಭಂಡಾರಿ, ಕೃಷ್ಣಪ್ಪ ಭಂಡಾರಿ, ಪ್ರಧಾನ ಕಾರ್‍ಯದರ್ಶಿ ಬಿ. ಜಯಕುಮಾರ್ ಭಂಡಾರಿ ಬನ್ನೂರು, ಕೋಶಾಧಿಕಾರಿ ಪ್ರವೀಣ ಭಂಡಾರಿ ಎ.ಪಿ.ಎಂ.ಸಿ, ಗಣರಾಜ ಭಂಡಾರಿ, ವೆಂಕಟೇಶ ಭಂಡಾರಿ, ಲಕ್ಷ್ಮೀಶ ಭಂಡಾರಿ, ಮಂಕೇಶ, ಕಿರಣ ಭಂಡಾರಿ, ಸಂತೋಷ ಭಂಡಾರಿ ಸಾಲ್ಮರ, ಪುರಂದರ ಭಂಡಾರಿ, ಜಗದೀಶ ಭಂಡಾರಿ, ರಾಜೇಶ ಭಂಡಾರಿ, ಹರೀಶ ಭಂಡಾರಿ ಕುಂಜೂರುಪಂಜ, ಸುಬ್ರಹ್ಮಣ್ಯ ಭಂಡಾರಿ, ಶ್ರೀಧರ ಭಂಡಾರಿ ಕೆಮ್ಮಾಯಿ, ಆನಂದ, ರಮೇಶ, ಸುರೇಶ ಬಾರ್ಬರ್ ಅಸೋಸಿಯೇಶನ್ ಶಾಹೀದ್ ಹಾಗೂ ಸವಿತಾ ಸಮಾಜದ ಸದಸ್ಯರು ಅಂತರಾಜ್ಯ ಕಾರ್ಮಿಕರು(ಹಿಂದಿ) ಸಭೆಗೆ ಆಗಮಿಸಿ ಸಲಹೆ ಸೂಚನೆಗಳನ್ನು ನೀಡಿದರು. ನೀಲಂ ಬ್ಯೂಟಿಷಿಯನ್‌ನ ಶಾಹೀದ್ ವಂದಿಸಿ, ಜಗದೀಶ ಭಂಡಾರಿ ಕಾರ್‍ಯಕ್ರಮ ನಿರೂಪಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.