Home_Page_Advt
Home_Page_Advt
Home_Page_Advt

ಸೋಶಿಯಲ್ ಡೆಮೊಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಸಂಸ್ಥಾಪನಾ ದಿನದಂಗವಾಗಿ ಮುಕ್ವೆಯಲ್ಲಿ ‌ಧ್ವಜಾರೋಹಣ, ವೀರ ಮರಣ ಹೊಂದಿದ ಯೋಧರಿಗೆ ಸಂತಾಪ

Puttur_Advt_NewsUnder_1
Puttur_Advt_NewsUnder_1

SDPi ನರಿಮೊಗರು ವಲಯ ಸಮಿತಿ ವತಿಯಿಂದ ಮುಕ್ವೆಯಲ್ಲಿ ಪಕ್ಷದ ಸಂಸ್ಥಾಪನ ದಿನದ ಧ್ವಜಾರೋಹಣ ಕಾರ್ಯಕ್ರಮ ಹಾಗೂ ಚೀನಾದ ಸೈನಿಕರೊಂದಿಗಿನ ಘರ್ಷಣೆಯಲ್ಲಿ ವೀರ ಮರಣ ಹೊಂದಿದ ನಮ್ಮ ಸೇನೆಯ ಯೋಧರಿಗೆ ಸಂತಾಪ ಸೂಚನೆ ಹಾಗೂ ಮೌನ ಪ್ರಾರ್ಥನಾ ಮಾಡಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ಹಾಗೂ ದ್ವಜಾರೋಹಣವನ್ನು ನರಿಮೊಗರು ಗ್ರಾಮ ಸಮಿತಿಯ ಅಧ್ಯಕ್ಷರಾದ ಸಿರಾಜ್ ಮಣಿಯ ನೆರವೇರಿಸಿದರು. SDPI ಪುತ್ತೂರು ವಿದಾನ ಸಭಾ ಕ್ಷೇತ್ರ ಸಮಿತಿಯ ಉಪಾಧ್ಯಕ್ಷರಾದ ಇಬ್ರಾಹಿಂ ಸಾಗರ್ ಪ್ರಾಸ್ತಾವಿಕ ಭಾಷಣ ಮಾಡಿದರು. ನಂತರ ಪಿ.ಎಫ್.ಐ. ಸಿಟಿ ಡಿವಿಝನ್ ಅದ್ಯಕ್ಷರಾದ ಉಮ್ಮರ್ ಕೆ.ಎಸ್. ಮತ್ತು ಪುತ್ತೂರು ವಿಧಾನಸಭಾ ಸಮಿತಿಯ ಜೊತೆ ಕಾರ್ಯದರ್ಶಿ ಯಹ್ಯ ಕೂರ್ನಡ್ಕ ರವರು ಅತಿಥಿ ಭಾಷಣ ಮಾಡಿದರು. ಕಾರ್ಯಕ್ರಮದಲ್ಲಿ ಪಿ.ಎಫ್.ಐ. ಯ ಸಿಟಿ ಡಿವಿಝನ್ ಕಾರ್ಯದರ್ಶಿ ಬಾತಿಷ ಬಡಕ್ಕೋಡಿ, ಪುರುಷರಕಟ್ಟೆ ಏರಿಯಾ ಅಧ್ಯಕ್ಷ ಅಬ್ದುಲ್ ಹಮೀದ್ ಕರ್ಗಳ್, ಕೂರ್ನಡ್ಕ ಏರಿಯಾ ಅಧ್ಯಕ್ಷ ರಿಯಾಝ್ ಭೂಮಿ, ಸಲೀಂಹಾಜಿ, ಅಬ್ದುಲ್ಲಾ ಹಾಜಿ ಸರಲೀಕಟ್ಟೆ, ಅಬ್ಬಾಸ್ ಖಂಡ್ಡಿಗ, ಹಿರಿಯ ಉದ್ಯಮಿ ಉಮ್ಮರ್ ಬದಿನಾರು, ರಝಾಕ್ ಸರಲೀಕಟ್ಟೆ, ಆಸೀಫ್ ಶೇಕ್, ಬಶೀರ್ ಬಡಕ್ಕೋಡಿ, ಶಾಫಿ ಮುಕ್ವೆ, ನಿಯಾಝ್ ಮಣಿಯ, ಅರ್ಶದ್ ಮಣಿಯ ಲತೀಫ್ ಮಣಿಯ, ಬಶೀರ್ ಮಣಿಯ ಹಾಗೂ ಪಕ್ಷದ ಹಲವಾರು ಕಾರ್ಯಕರ್ತರು, ಹಿತೈಷಿಗಳು  ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಆಬೀದ್ ಮುಕ್ವೆ ಕಾರ್ಯಕ್ರಮವನ್ನು ನಿರೂಪಿಸಿದರು. ಸಿಹಿ ತಿಂಡಿಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.