ಚೈತನ್ಯ ಮಿತ್ರವೃಂದದಿಂದ ವಿಶ್ವ ಯೋಗ ದಿನಾಚರಣೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಪಡೀಲು ಚೈತನ್ಯ ಮಿತ್ರ ವೃಂದದ ವತಿಯಿಂದ ವಿಶ್ವ ಯೋಗ ದಿನಾಚರಣೆಯು ಸರ್ಕಾರದ ನಿಯಮಗಳನ್ನು ಪಾಲಿಸಿಕೊಂಡು ಮನೆಯಲ್ಲಿಯೇ ನಡೆಸಲಾಯಿತು. ವಲಯ ಅರಣ್ಯ ಇಲಾಖೆಯ ನಿವೃತ್ತ ನೌಕರ ಕಿಟ್ಟಪ್ಪ ಗೌಡರವರು ದೀಪ ಬೆಳಗಿಸಿ ಉದ್ಘಾಟಿಸಿ ಶುಭಹಾರೈಸಿದರು.

ಸವಣೂರು ಸಿ.ಎ. ಬೇಂಕ್ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ ಕೇಪುಳು ಮಾತನಾಡಿ ಇಂದಿನ ಯಾಂತ್ರಿಕ ಯುಗದಲ್ಲಿ ಮಾನಸಿಕ ಒತ್ತಡ ನಿಯಂತ್ರಿಸಲು ಯೋಗ ಪರಿಣಾಮಕಾರಿ. ಯೋಗ ಜೀವನದ ಅವಿಭಾಜ್ಯ ಅಂಗ ಹಾಗಿರಲಿ ಎಂದು ಹೇಳಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಘದ ಅಧ್ಯಕ್ಷ ಪುರಂದರ ಪಿ. ಮಾತನಾಡಿ ದೇಹ, ಮನಸು ಹಾಗೂ ಉಸಿರಿನ ಸಮತೋಲನ ಕಾಪಾಡಲು ಯೋಗ ಪೂರಕ, ಉತ್ತಮ ಆರೋಗ್ಯಕ್ಕಾಗಿ ಕನಿಷ್ಠ ೧ ಗಂಟೆ ಯೋಗಕ್ಕೆ ಮೀಸಲಿಡಬೇಕೆಂದು ಹೇಳಿದರು. ಉಪಾಧ್ಯಕ್ಷ ರವೀಂದ್ರ ಪೈ ಸ್ವಾಗತಿಸಿ, ಕಾರ್ಯದರ್ಶಿ ಗಣೇಶ್ ಬಿ. ವಂದಿಸಿದರು. ಮಾಜಿ ಸಂಚಾಲಕ ಗಣೇಶ್ ಎನ್. ಕಾರ್ಯಕ್ರಮ ನಿರೂಪಿಸಿದರು. ಸಂಚಾಲಕರಾದ ಸಂಪತ್ ಕುಮಾರ್ ಜೈನ್, ಪ್ರಮುಖರಾದ ರಮೇಶ್ ಬಿ, ಮಂಜುನಾಥ ಎಂ, ಸುಂದರ ಎಚ್, ಆನಂದ್, ಸುಮತಿ ಚಂದ್ರಶೇಖರ್ ಮತಿತರರು ಉಪಸ್ಥಿತರಿದ್ದರು. ಬಳಿಕ ಸೌಮ್ಯ ಪುರಂದರ ಹಾಗೂ ರೇಖಾ ರಮೇಶ್ ರವರ ಮಾರ್ಗದರ್ಶನದಲ್ಲಿ ಯೋಗಾಭ್ಯಾಸ ನಡೆಯಿತು. ಎಲ್ಲಾ ಸದಸ್ಯರು ಯೋಗಾಭ್ಯಾಸದಲ್ಲಿ ಪಾಲ್ಗೊಂಡರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.