HomePage_Banner
HomePage_Banner
HomePage_Banner

ರೋಟರಿ ಎಲೈಟ್, ಸೆಂಟ್ರಲ್, ಸ್ವರ್ಣ, ಇನ್ನರ್‌ವೀಲ್, ವೈಎಂಸಿಎನಿಂದ ಸುದಾನದಲ್ಲಿ ಗಿಡ ನೆಡುವ ವನಮಹೋತ್ಸವ ಕಾರ್ಯಕ್ರಮ

Puttur_Advt_NewsUnder_1
Puttur_Advt_NewsUnder_1

ಚಿತ್ರ: ಸಂತೋಷ್ ಮೊಟ್ಟೆತ್ತಡ್ಕ
ಪುತ್ತೂರು: ರೋಟರಿ ಕ್ಲಬ್ ಪುತ್ತೂರು ಎಲೈಟ್, ರೋಟರಿ ಕ್ಲಬ್ ಪುತ್ತೂರು ಸೆಂಟ್ರಲ್, ರೋಟರಿ ಕ್ಲಬ್ ಪುತ್ತೂರು ಸ್ವರ್ಣ, ಇನ್ನರ್‌ವೀಲ್ ಕ್ಲಬ್ ಪುತ್ತೂರು, ವೈಎಂಸಿಎ ಘಟಕ ಪುತ್ತೂರು ಇವುಗಳ ಸಹಭಾಗಿತ್ವದಲ್ಲಿ ಇಲ್ಲಿನ ನೆಹರುನಗರದ ಸುದಾನ ವಸತಿಯುತ ಶಾಲೆಯ ಆವರಣದಲ್ಲಿ ಗಿಡ ನೆಡುವ ವನಮಹೋತ್ಸವ ಕಾರ್ಯಕ್ರಮವು ಜೂ. 20ರಂದು ಜರಗಿತು.

ಎಸಿಎಫ್ ವಿ.ಪಿ ಕಾರ್ಯಾಪ್ಪ, ಪುತ್ತೂರು ಆರ್‌ಎಫ್‌ಒ ಮೋಹನ್ ಕುಮಾರ್ ಡಿ.ಜಿ ಹಾಗೂ ರೋಟರಿ ವಲಯ ಐದರ ಅಸಿಸ್ಟೆಂಟ್ ಗವರ್ನರ್ ಸಚ್ಚಿದಾನಂದರವರು ಶಾಲೆಯ ಆವರಣದೊಳಗೆ ಗಿಡ ನೆಡುವ ಮೂಲಕ ವನಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆಯಿತ್ತರು. ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ(ಪರೀಕ್ಷಾರ್ಥಿ) ಹುಸೈನ್ ಪೆಂಡಾರಿ, ರೋಟರಿ ಕ್ಲಬ್ ಪುತ್ತೂರು ಎಲೈಟ್ ಅಧ್ಯಕ್ಷ ರೆ|ವಿಜಯ ಹಾರ್ವಿನ್, ರೋಟರಿ ಕ್ಲಬ್ ಪುತ್ತೂರು ಸೆಂಟ್ರಲ್‌ನ ಕಾರ್ಯದರ್ಶಿ ರಫೀಕ್ ರೋಯಲ್, ನಿಯೋಜಿತ ಅಧ್ಯಕ್ಷ ವೆಂಕಟ್ರಾಜ್, ನಿಯೋಜಿತ ಕಾರ್ಯದರ್ಶಿ ಅಶೋಕ್ ನಾಯ್ಕ, ಸದಸ್ಯರಾದ ಭರತ್ ಕುಮಾರ್ ಪಿ.ಟಿ, ಅಶ್ರಫ್, ರೋಟರಿ ಕ್ಲಬ್ ಪುತ್ತೂರು ಸ್ವರ್ಣದ ನಿಯೋಜಿತ ಅಧ್ಯಕ್ಷೆ ಸೆನೋರಿಟ ಆನಂದ್, ಮಾಜಿ ಅಧ್ಯಕ್ಷರಾದ ಮನೋಹರ್ ಕುಮಾರ್, ಚಂದ್ರಶೇಖರ್ ಮೂರ್ತಿ, ಸದಸ್ಯ ಸುಂದರ ಗೌಡ, ಇನ್ನರ್‌ವೀಲ್ ಕ್ಲಬ್ ಪುತ್ತೂರು ಅಧ್ಯಕ್ಷೆ ಸೀಮಾ ನಾಗಾರಾಜ್, ವೈಎಂಸಿಎ ಘಟಕ ಪುತ್ತೂರು ಇದರ ಅಧ್ಯಕ್ಷ ಆಸ್ಕರ್ ಆನಂದ್, ಸದಸ್ಯರಾದ ಹೆರಾಲ್ಡ್ ಮಾಡ್ತಾ ಮರೀಲು, ವಿಕ್ಟರ್ ಮಾರ್ಟಿಸ್, ಲಾರೆನ್ಸ್ ಗೊನ್ಸಾಲ್ವಿಸ್, ರೋಟರಿ ಕ್ಲಬ್ ಪುತ್ತೂರು ಯುವದ ಕೃಷ್ಣವೇಣಿ ಮುಳಿಯ, ನೆಹರುನಗರ ಬಿಇಎಂ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಪ್ರಶಾಂತ್ ಮುರ, ಕಾಂಟ್ರಾಕ್ಟರ್ ಯೂಸುಫ್ ಗೌಸಿಯಾ ಸಾಜ, ಸುದಾನ ಶಾಲೆಯ ಸಿಬ್ಬಂದಿ ಬಾಲನ್ನರವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಪ್ರಕೃತಿ ಚೆನ್ನಾಗಿರಬೇಕಾದರೆ ಮರಗಿಡಗಳ ಪೋಷಣೆ ಅನಿವಾರ‍್ಯ. ಮನುಷ್ಯನಿಗೆ ಉಸಿರಾಡಲು ಆಮ್ಲಜನಕ ಸಿಗಬೇಕಾದರೆ ಮರಗಳನ್ನು ನಾವು ಸಂರಕ್ಷಿಸಲೇಬೇಕಾಗಿದೆ. ಗಿಡಗಳನ್ನು ನೆಡುವುದು ಒಂದು ದಿನದ ಕಾರ್ಯಕ್ರಮವಾಗಿರದೆ ಅದು ವರ್ಷಪೂರ್ತಿ ಇರಬೇಕು. ನೆಡುವುದು ಮುಖ್ಯವಲ್ಲ, ಗಿಡಗಳ ಸಂರಕ್ಷಣೆ ಮತ್ತು ಪೋಷಣೆ ಬಹಳ ಮುಖ್ಯವಾಗಿರುತ್ತದೆ. ನಮ್ಮ ಸುತ್ತಮುತ್ತಲೂ ಮರಗಿಡಗಳಿಂದ ಕೂಡಿದ ಹಸಿರು ವಾತಾವರಣವಿದ್ದಾಗ ನೋಡಲು ಬಹಳ ಚಂದ ಜೊತೆಗೆ ಮನುಷ್ಯನ ಜೀವನವನ್ನು ಕಟ್ಟಿಕೊಳ್ಳಲು ಮರಗಿಡಗಳು ಪೂರಕವಾಗಿರುತ್ತದೆ. -ಡಾ|ಪೀಟರ್ ವಿಲ್ಸನ್ ಪ್ರಭಾಕರ್, ರೀಜನಲ್ ಚೇರ್‌ಮ್ಯಾನ್, ವೈಎಂಸಿಎ ಪುತ್ತೂರು
ರಕ್ತಚಂದನ, ಮಾಗುವಾನಿ, ಸಾಗುವಾನಿ, ಜಂಬೂ ನೇರಳೆ, ಸಂಪಿಗೆ, ಬೀಟಿ, ಕಾಯದುಪ್ಪ, ಬಾದಾಮಿ, ಕಿರಲ್‌ಬೋಗಿ, ನೆಲ್ಲಿ, ನೇರಳೆ, ಹಲಸು, ನೋರೆಕಾಯಿ, ಶ್ರೀಗಂಧ ಹೀಗೆ ಹಲವು ತಳಿಗಳ 30ಕ್ಕೂ ಗಿಡಗಳನ್ನು ಸುದಾನ ಕ್ಯಾಂಪಸ್‌ನಲ್ಲಿ ನೆಡಲಾಯಿತು. ಈ ಋತುವಿನಲ್ಲಿ ಸುಮಾರು ಸಾವಿರಕ್ಕೂ ಮಿಕ್ಕಿ ಗಿಡಗಳನ್ನು ನೆಡುವ ಕುರಿತು ಐದು ಸಂಘಟನೆಗಳು ‘ಸುದ್ದಿ’ಗೆ ತಿಳಿಸಿದ್ದಾರೆ.
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.