ನೆಲ್ಯಾಡಿ: ಎಸ್‌ಡಿಪಿಐ ಸಂಸ್ಥಾಪನಾ ದಿನದ ಪ್ರಯುಕ್ತ ಧ್ವಜಾರೋಹಣ

Puttur_Advt_NewsUnder_1
Puttur_Advt_NewsUnder_1

ನೆಲ್ಯಾಡಿ: ಎಸ್‌ಡಿಪಿಐ ಸಂಸ್ಥಾಪನಾ ದಿನದ ಪ್ರಯುಕ್ತ ನೆಲ್ಯಾಡಿ ಪೇಟೆಯಲ್ಲಿ ಎಸ್‌ಡಿಪಿಐ ಧ್ವಜಾರೋಹಣ ನೆರವೇರಿಸಿ ಸಂಸ್ಥಾಪನಾ ದಿನ ಆಚರಿಸಲಾಯಿತು.


ಎಸ್‌ಡಿಪಿಐ ಕಡಬ ತಾಲೂಕು ಪ್ರಧಾನ ಕಾರ್ಯದರ್ಶಿ ರಫೀಕ್ ಬೈಲು ನೆಲ್ಯಾಡಿ ಇವರು ಧ್ವಜಾರೋಹಣ ನೆರವೇರಿಸಿ ಮಾತನಾಡಿ, ೨೦೦೯ರ ಜೂನ್ ೨೧ ರಂದು ದೇಶದ ಜನತೆಯ ಆಶಾಕಿರಣವಾಗಿ ಸಮರ್ಪಿಸಲ್ಪಟ್ಟ ಸೋಶಿಯಲ್ ಡೆಮೊಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ತನ್ನ ಹೋರಾಟದ ರಾಜಕೀಯದ ಮೂಲಕ ಜನ ಮನ್ನಣೆಗಳಿಸಿದೆ. ೧೧ ವರ್ಷಗಳನ್ನು ಪೂರೈಸಿ ೧೨ನೇ ವರ್ಷಕ್ಕೆ ಪಾದಾರ್ಪಣೆಗೈಯುತ್ತಿರುವ ಈ ಸಂಧರ್ಭದಲ್ಲಿ ಪಕ್ಷವು ಪ್ರತಿ ವರ್ಷದಂತೆ ಈ ವರ್ಷವೂ ಜೂನ್ ೨೧ರಂದು ದೇಶಾದ್ಯಂತ ತನ್ನ “ಸಂಸ್ಥಾಪನಾ ದಿನ” ವನ್ನು ಆಚರಿಸುತ್ತಿದೆ. ಪಕ್ಷದ ರಾಜ್ಯಾಧ್ಯಕ್ಷರು ನೀಡಿರುವ ಕರೆಯ ಮೇರೆಗೆ ಸ್ಥಳೀಯ ನಾಯಕರು ಹಾಗೂ ಕಾರ್ಯಕರ್ತರೊಂದಿಗೆ ನೆಲ್ಯಾಡಿಯಲ್ಲಿ ಸಂಸ್ಥಾಪನಾ ದಿನ ಆಚರಿಸಲಾಗುತ್ತಿದೆ ಎಂದು ತಿಳಿಸಿ ಪ್ರಸ್ತುತ ರಾಜಕೀಯ ವ್ಯವಸ್ಥೆಯ ಬಗ್ಗೆ ವಿಸ್ತಾರವಾಗಿ ಹೇಳಿದರು. ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಇದರ ಜಿಲ್ಲಾ ಸಮಿತಿ ಸದಸ್ಯರಾದ ಸಾದಿಕ್ ಅತ್ತಾಜೆಯವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ನೆಲ್ಯಾಡಿ ಡಿವಿಸನ್ ಅಧ್ಯಕ್ಷ ಸಿದ್ದಿಕ್ ಎಮ್, ಕೌಕ್ರಡಿ ಬ್ರಾಂಚ್ ಅಧ್ಯಕ್ಷ ಟಿಪ್ಪು ಸುಲ್ತಾನ್, ಗೋಳಿತೊಟ್ಟು ಬ್ರಾಂಚ್ ಕಾರ್ಯದರ್ಶಿ ಸಾದಿಕ್ ಗೋಳಿತೊಟ್ಟು ಹಾಗು ಪಕ್ಷದ ಕಾರ್ಯಕರ್ತರು, ಹಿತೈಷಿಗಳು ಉಪಸ್ಥಿತರಿದ್ದರು. ಸಿದ್ದೀಕ್ ನೆಲ್ಯಾಡಿ ಸ್ವಾಗತಿಸಿದರು. ರಿಜ್ವಾನ್ ಗೋಳಿತೊಟ್ಟು ನಿರೂಪಿಸಿ ವಂದಿಸಿದರು. ಕೊನೆಗೆ ಸಿಹಿ ತಿಂಡಿ ಹಂಚಲಾಯಿತು. ದೇಶದ ಗಡಿಯಲ್ಲಿ ಚೀನಾದ ಸೈನಿಕರ ಜೊತೆ ನಡೆದ ಸಂಘರ್ಷದಲ್ಲಿ ಹುತಾತ್ಮರಾದ ಭಾರತೀಯ ಯೋಧರಿಗೆ ಮೌನ ಪ್ರಾರ್ಥನೆಯೊಂದಿಗೆ ಗೌರವ ಸಲ್ಲಿಸಲಾಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.