ಉಪ್ಪಿನಂಗಡಿ: ಸಮರ್ಪಕ ವಿದ್ಯುತ್ ಪೂರೈಕೆಗೆ ಮನವಿ

Puttur_Advt_NewsUnder_1
Puttur_Advt_NewsUnder_1

ಉಪ್ಪಿನಂಗಡಿ: ಪೆರಿಯಡ್ಕ, ಕೆಮ್ಮಾರ ಹಾಗೂ ಕೊಯಿಲ ಆಸುಪಾಸಿನ ಪ್ರದೇಶಕ್ಕೆ ಸಮರ್ಪಕ ವಿದ್ಯುತ್ ಪೂರೈಕೆಗೆ ಕ್ರಮ ಕೈಗೊಳ್ಳುವಂತೆ ಹಾಗೂ ಅಧಿಕ ವಿದ್ಯುತ್ ಬಿಲ್ಲು ಬರುತ್ತಿರುವುದನ್ನು ಸರಿಪಡಿಸುವಂತೆ ಒತ್ತಾಯಿಸಿ ಎಐಎಂಡಿಎಫ್ ಪುತ್ತೂರು ತಾಲೂಕು ಸಂಘಟನೆ ಹಾಗೂ ಕೆಮ್ಮಾರ ನಾಗರಿಕ ಹಿತರಕ್ಷಣಾ ವೇದಿಕೆ ವತಿಯಿಂದ ಮೆಸ್ಕಾಂನ ಉಪ್ಪಿನಂಗಡಿ ಶಾಖಾ ಸಹಾಯಕ ಇಂಜಿನಿಯರ್ ರಾಜೇಶ್‌ರವರಿಗೆ ಮನವಿ ಸಲ್ಲಿಸಲಾಯಿತು.


ಕೆಮ್ಮಾರ ಪರಿಸರದಲ್ಲಿ ಸುಮಾರು ನಾಲ್ಕೈದು ಟ್ರಾನ್ಸ್‌ಫಾರ್ಮರ್ ಇದ್ದರೂ ನಿರಂತರವಾಗಿ ವಿದ್ಯುತ್ ವ್ಯತ್ಯಯ ಉಂಟಾಗುತ್ತಿದೆ. ಮಳೆ ಬಂದರೆ ನಾಲ್ಕೈದು ದಿನಗಳವರೆಗೆ ವಿದ್ಯುತ್ ಇರುವುದೇ ಇಲ್ಲ. ಈ ಬಗ್ಗೆ ಮೆಸ್ಕಾಂನ ಸ್ಥಳೀಯ ಸಿಬ್ಬಂದಿಗಳಿಗೆ ದೂರು ನೀಡಿದರೂ ಸಮರ್ಪಕವಾಗಿ ಸ್ಪಂದನೆ ನೀಡುತ್ತಿಲ್ಲ ಹಾಗೂ ಈ ಬಾರಿ ಜನರು ಲಾಕ್‌ಡೌನ್‌ನಿಂದ ತತ್ತರಿಸಿದ್ದರೂ ಗಾಯದ ಮೇಲೆ ಬರೆ ಹಾಕುವ ರೀತಿ ವಿದ್ಯುತ್ ಇಲಾಖೆ ದುಪ್ಪಟ್ಟು ವಿದ್ಯುತ್ ಬಿಲ್ಲು ಕೊಡುತ್ತಿದೆ. ದುಡಿಮೆ ಇಲ್ಲದೆ ಕಂಗಾಲಾಗಿರುವ ಜನರಿಗೆ ಇದನ್ನು ಭರಿಸಲು ಸಾಧ್ಯವಿಲ್ಲ. ಹಾಗಾಗಿ ಇದರ ಬಗ್ಗೆ ತನಿಖೆ ನಡೆಸಿ ಸಾರ್ವಜನಿಕರಿಗೆ ಅನುಕೂಲ ಆಗುವಂತೆ ಹೊಸ ವಿದ್ಯುತ್ ಬಿಲ್ಲು ನೀಡುವಂತೆ ಮನಯಲ್ಲಿ ಒತ್ತಾಯಿಸಲಾಗಿದೆ ಎಐಎಂಡಿಎಫ್ ಸಂಘಟನೆ ಪುತ್ತೂರು ತಾಲೂಕು ಅಧ್ಯಕ್ಷ ಅಝೀಝ್ ಬಿ.ಕೆ., ನೌಫಲ್ ಕೆಮ್ಮಾರ, ನಿಝಾಮ್, ಅಬ್ದುಲ್ ಗಫಾರ್ ಕೆಮ್ಮಾರ, ವಕೀಲರಾದ ಕಬೀರ್ ಕೆಮ್ಮಾರ, ರವೂಫ್ ಬಡಿಲ, ಅಬೂ ತಾಹಿರ್, ಹಕೀಮ್ ಕೆಮ್ಮಾರ, ಸನಾವುಲ್ಲಾ ಕೆ.ಪಿ., ಖಲಂದರ್ ಎಸ್.ಪಿ., ಭಾಷಿತ್ ಕೆಮ್ಮಾರ ಮುಂತಾದವರು ಮನವಿ ಸಲ್ಲಿಕೆ ವೇಳೆ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.