Home_Page_Advt
Home_Page_Advt
Home_Page_Advt

ಪೆರಾಬೆ: ಸ್ಕೂಟಿ, ಹಿರೋ ಹೋಂಡಾ ಡಿಕ್ಕಿ| ಸ್ಕೂಟಿ ಸವಾರನಿಗೆ ಗಂಭೀರ ಗಾಯ

Puttur_Advt_NewsUnder_1
Puttur_Advt_NewsUnder_1

ಪೆರಾಬೆ: ಉಪ್ಪಿನಂಗಡಿ-ಕಡಬ ರಾಜ್ಯ ಹೆದ್ದಾರಿಯ ಪೆರಾಬೆ ಗ್ರಾಮ ಪಂಚಾಯಿತಿ ಬಳಿ ಸ್ಕೂಟಿ ಹಾಗೂ ಹಿರೋ ಹೊಂಡಾ ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ಸ್ಕೂಟಿ ಸವಾರ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಜೂ.19ರಂದು ರಾತ್ರಿ ನಡೆದಿದೆ.


ಸ್ಕೂಟಿ ಸವಾರ, ಪೆರಾಬೆ ಗ್ರಾಮದ ಕೋಚಕಟ್ಟೆ ನಿವಾಸಿ ಸದಾನಂದ ಗೌಡ ಎಂಬವರು ಗಂಭೀರ ಗಾಯಗೊಂಡವರಾಗಿದ್ದು ಮಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸದಾನಂದ ಗೌಡರವರು ಕುಂತೂರಿನ ಬೇಕರಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದು ಅಲ್ಲಿ ಕೆಲಸ ಮುಗಿಸಿ ರಾತ್ರಿ ಸುಮಾರು ೭.೧೫ರ ವೇಳೆಗೆ ತನ್ನ ಸ್ಕೂಟಿಯಲ್ಲಿ ಮನೆ ಕಡೆ ಹೋಗುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ. ಸದಾನಂದ ಗೌಡರವರು ಪೆರಾಬೆ ಗ್ರಾಮ ಪಂಚಾಯಿತಿ ಕಚೇರಿ ಬಳಿ ರಾಜ್ಯ ಹೆದ್ದಾರಿಯಿಂದ ಮನೆ ಕಡೆಗೆ ತಿರುಗುತ್ತಿದ್ದ ವೇಳೆ ಉಪ್ಪಿನಂಗಡಿ ಕಡೆಯಿಂದ ಮರ್ದಾಳ ಕಲ್ಲಾಜೆ ನಿವಾಸಿ ಸುರೇಶ್ ಎಂಬವರು ಚಲಾಯಿಸಿಕೊಂಡು ಬರುತ್ತಿದ್ದ ಹಿರೋ ಹೊಂಡಾ ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಘಟನೆಯಲ್ಲಿ ಸ್ಕೂಟಿ ಸವಾರ ಸದಾನಂದ ಗೌಡರವರು ರಸ್ತೆಗೆ ಎಸೆಯಲ್ಪಟ್ಟು ಕಾಲು, ಎಡಕೈ, ತಲೆ ಹಾಗೂ ಹೊಟ್ಟೆಯ ಭಾಗಕ್ಕೆ ಗಂಭೀರ ಗಾಯವಾಗಿದೆ. ಸದಾನಂದ ಗೌಡರನ್ನು ಪುತ್ತೂರು ಸಿಟಿ ಆಸ್ಪತ್ರೆಗೆ ದಾಖಲಿಸಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಶ್ರೀನಿವಾಸ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ. ಹಿರೋ ಹೋಂಡಾ ಬೈಕ್ ಸವಾರ ಸುರೇಶ್‌ರವರಿಗೆ ಸಣ್ಣ ಪುಟ್ಟ ಗಾಯವಾಗಿದ್ದು ಪುತ್ತೂರು ಸಿಟಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸ್ಥಳೀಯ ನಿವಾಸಿಗಳಾದ ಸಿದ್ದೀಕ್ ಕೋಚಕಟ್ಟೆ ಅಂಗಡಿ, ಮುತಾಲಿ, ಅಜಾದ್, ಗಾಯಾಳು ಸದಾನಂದ ಗೌಡರವರ ಸಹೋದರ ಸುಂದರ ಗೌಡ ಮತ್ತಿತರರು ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ಯಲು ಸಹಕರಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.