ಕೊಣಾಜೆ: ಕಡಬ ತಾಲೂಕಿನ ಕೊಣಾಜೆ ಗ್ರಾಮ ವ್ಯಾಪ್ತಿಯಲ್ಲಿ ಇರುವ ಏಕೈಕ ಬಿ.ಎಸ್.ಎನ್.ಎಲ್. ನೆಟ್ ವರ್ಕ್ ಸಮಸ್ಯೆ ಇದ್ದು ಇದರಿಂದ ಸಂಪರ್ಕ ಸಾಧ್ಯವಾಗದೆ ಗ್ರಾಮಸ್ಥರು ಕಂಗಲಾಗಿದ್ದಾರೆ. ಗ್ರಾಮದ ಪಟ್ಲ, ಬ್ರಂತೋಡು, ಮಾಲಾ, ಬೆತ್ತೋಡಿ, ಸುಳ್ಯ ಪ್ರದೇಶಗಳಲ್ಲಿ ಕಳೆದ ಒಂದು ವಾರಗಳಿಂದ ಬಿ.ಎಸ್.ಎನ್.ಎಲ್ ನೆಟ್ವರ್ಕ್ ಸಮಸ್ಯೆ ತಲೆದೋರಿದ್ದು ಇದರಿಂದ ದೂರವಾಣಿ ಸಂಪರ್ಕವಿಲ್ಲದೆ ಸಾರ್ವಜನಿಕರ ಪ್ರತಿಯೊಂದು ಕೆಲಸ ಕಾರ್ಯಗಳಿಗೆ ಅಡ್ಡಿಯಾಗಿದೆ. ಸಂಬಂಧ ಪಟ್ಟ ಅಧಿಕಾರಿಗಳು ಸಮಸ್ಯೆ ಸರಿಪಡಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಅನೇಕ ವರ್ಷಗಳಿಂದ ಇಲ್ಲಿ ನೆಟ್ವರ್ಕ್ ಸಮಸ್ಯೆಯಿಂದ ಈ ಗ್ರಾಮಪಂಚಾಯತ್ಗೆ ಬರುವ ಸಾರ್ವಜನಿಕರು ಇಲ್ಲಿನ ಕಛೇರಿಗಳಲ್ಲಿ ತಮ್ಮ ಕೆಲಸ ಕಾರ್ಯಗಳಾಗದೇ ಕಛೇರಿಗಳಿಗೆ ಅಲೆಯುತ್ತಿರುವುದು ಸಾಮಾನ್ಯವಾಗಿದೆ. ಈ ಗ್ರಾಮ ಪಂಚಯತ್ನ ವ್ಯಾಪ್ತಿಯಲ್ಲಿ ಬ್ಯಾಂಕ್, ಅಂಚೆ ಕಛೇರಿ, ಹಾಲು ಮಾರಾಟಗಾರರ ಸೊಸೈಟಿ, ಶಾಲೆ ಕಾರ್ಯನಿರ್ವಹಿಸುತ್ತಿದ್ದು ವಿದ್ಯುತ್ ಕಡಿತಗೊಂಡರೆ, ಗುಡುಗು ಬಂದರೆ ನೆಟ್ವರ್ಕ್ ಕಡಿತಗೊಳ್ಳುತ್ತದೆ.
ಸರ್ಕಾರಿ ಕಛೇರಿ ಹಾಗೂ ಬ್ಯಾಂಕ್ಗಳಲ್ಲಿ ಬಿ.ಎಸ್.ಎನ್ ಎಲ್ ನೆಟ್ವರ್ಕ್ ಸಂಪರ್ಕವಿದ್ದು ಈ ನೆಟ್ವರ್ಕ್ ಸಮಸ್ಯೆಯಿಂದ ಸಾರ್ವಜನಿಕರಿಗೆ ಸಿಗಬೇಕಾದ ಸೇವೆಗಳು ಸಕಾಲಕ್ಕೆ ದೊರೆಯುತ್ತಿಲ್ಲ ಸಾರ್ವಜನಿಕರು ತಮ್ಮ ದಿನನಿತ್ಯದ ಕೆಲಸಗಳಿಗಾಗಿ ಕಛೇರಿಗಳಿಗೆ ಪದೇ ಪದೇ ಅಲೆಯುವುದು ಇಲ್ಲಿ ಸರ್ವೆಸಾಮಾನ್ಯವಾಗಿದೆ.
ಇನ್ನೂ ಖಾಸಗಿ ಉದ್ಯೋಗಿಗಳು ಮತ್ತು ಶಾಲಾ ಮಕ್ಕಳ ಗೋಳು ಹೆಳಾತಿರದಂತಾಗಿದೆ. ಕೊರೊನಾದಿಂದಾಗಿ ಬೆಂಗಳೂರು, ಮುಂಬೈ, ಮಹಾರಾಷ್ಟ್ರ, ಹಾಗೂ ಇತರ ಪಟ್ಟಣಗಳಿಂದ ಮನೆಗೆ ಬಂದು ಕೆಲಸವನ್ನು ವರ್ಕ್ ಫ್ರಮ್ ಹೋಮ್ ರೀತಿಯಲ್ಲಿ ನಿರ್ವಹಿಸಲು ಸಾಧ್ಯವಾಗದೆ ಹಲವು ಯುವಕರು ಕೆಲಸವನ್ನು ಕಳೆದುಕೊಂಡಿರುವ ಪರಿಸ್ಥಿತಿಯು ಇದೆ. ಇನ್ನೂ ಶಾಲಾ ಕಾಲೇಜು ಮಕ್ಕಳು ತಮ್ಮ ಶಾಲಾ ಕಾಲೇಜುಗಳಲ್ಲಿ ಆನ್ಲೈನ್ ಕ್ಲಾಸ್ ನಡೆಸುತ್ತಿರುವುದರಿಂದ ನೆಟ್ವರ್ಕ್ಗಾಗಿ ಗುಡ್ಡಗಾಡುಗಳಲ್ಲಿ ಅಲೆದರು ಸಿಗುತ್ತಿಲ್ಲ ಇದರಿಂದ ಸಂಬಂಧಿಕರ ಮನೆಗೆ ತೆರಳಿ ವಾಸಿಸುವಂತಹ ಪರಿಸ್ಥಿತಿ ಬಂದೊದಗಿದೆ ಹಲವು ವರ್ಷಗಳ ಬೇಡಿಕೆ ನಂತರ ಸರಕಾರಿ ಸೌಮ್ಯದ ಬಿ.ಎಸ್.ಎನ್.ಎಲ್ ಟವರ್ ಸ್ಥಾಪನೆಗೊಂಡಿತಾದರೂ ಅದು ಹೆಸರಿಗಷ್ಟೆ ಇದೆ ಎನ್ನುವಂತಾಗಿದೆ. ಕಳೆದ ಎರಡು ವಾರಗಳ ಹಿಂದೆ 2ಜೀ ಯಿಂದ 3ಜೀ ಮೆಲ್ದರ್ಜೆಗೆ ಏರಿಸಲಾದರೂ ಅದೂ ಉಪಯೋಗಕ್ಕೆ ಬಂದಿದ್ದು ಬರೀ ಒಂದು ವಾರವಷ್ಟೆ ಮತ್ತೆ ಸ್ಥಿರ ದೂರವಾಣಿ ಇಲ್ಲದೆ ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ ಸಾರ್ವಜನಿಕರು.
ಈ ಪ್ರದೇಶಗಳಲ್ಲಿ ಬಿ.ಎಸ್.ಎನ್.ಎಲ್ ಟವರ್ ಬಿಟ್ಟರೆ ಬೇರೆ ಯಾವುದೇ ಟವರ್ಗಳಿಲ್ಲ. ಕೆಳ ತಿಂಗಳ ಹಿಂದೆ ಜಿಯೋ ಟವರ್ನ ಕೆಲಸ ಪ್ರಾರಂಭವಾಗಿದ್ದರೂ ಕೂಡ ಇನ್ನೂ ಪೂರ್ಣಗೊಂಡಿಲ್ಲ ಬೇರೆ ಯಾವುದೇ ಟವರ್ ಸ್ಥಾಪನೆಗೆ ಇಲ್ಲಿ ಇನ್ನೂ ಸಮಯ ಕೂಡಿ ಬಂದಿಲ್ಲಾ ಎಂಬುವಂತ್ತಿದೆ. ಈ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸಾವಿರಾರು ಗ್ರಾಹಕರನ್ನು ಹೊಂದಿರುವ ಬಿ.ಎಸ್.ಎನ್.ಎಲ್ ದೊರವಾಣಿ ಕೇಂದ್ರ ಪದೇ ಪದೇ ತಾಂತ್ರಿಕ ಸಮಸ್ಯೆ ಎದುರಿಸುತ್ತಿರುವುದರಿಂದ ಗ್ರಾಮಸ್ಥರು ಬೆಸತ್ತುಹೊಗಿದ್ದಾರೆ.
ಮೊಬೈಲ್ ಇದ್ದರೂ ರೇಂಜ್ ಇಲ್ಲದೆ ಬಾರಿ ಸಮಸ್ಯೆ ಎದುರಿಸುತ್ತಿರುವ ಸಾರ್ವಜನಿಕರು ಬಿ.ಎಸ್.ಎನ್.ಎಲ್ನೇ ಅವಲಂಭಿಸಿರುವುದರಿಂದ ತಕ್ಷಣ ದುರಸ್ತಿ ಪಡಿಸಿ ಸ್ಪಂದಿಸಬೇಕಾಗಿದೆ ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.