- ಭಾರತ ಭಾವನಾತ್ಮಕ ಸಂಬಂಧವಿರುವ ರಾಷ್ಟ್ರ – ಎಸ್. ಅಂಗಾರ
- ಸ್ವದೇಶಿ ವಸ್ತುಗಳನ್ನು ಬಳಕೆ ಮಾಡಿ ಚೈನಾ ಹಾಗೂ ವಿದೇಶಿ ವಸ್ತುಗಳನ್ನು ಬಹಿಷ್ಕಾರಿಸಿ – ಧರ್ಮಪಾಲ ರಾವ್ ಕಜೆ
ಆಲಂಕಾರು: ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವತಿಯಿಂದ ಆಲಂಕಾರು, ರಾಮಕುಂಜ, ಕೊಯಿಲ, ಹಳೇನೆರೆಂಕಿ, ಪೆರಾಬೆ, ಕುಂತೂರು ಗ್ರಾಮಗಳ ಒಟ್ಟು 21 ಮಂದಿ ಆಶಾಕಾರ್ಯಕರ್ತೆಯರಿಗೆ ಮೂರು ಸಾವಿರದಂತೆ ಒಟ್ಟು 63ಸಾವಿರ ರೂಪಾಯಿಗಳ ಚೆಕ್ ನ್ನು ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಭಾಭವನದಲ್ಲಿ ವಿತರಿಸಿ ಮಾತನಾಡಿದ ಸುಳ್ಯ ವಿಧಾನ ಸಭಾಕ್ಷೇತ್ರದ ಶಾಸಕರಾದ ಎಸ್. ಅಂಗಾರ ಭಾರತ ಭಾವನಾತ್ಮಕ ಸಂಬಂಧವಿರುವ ರಾಷ್ಟ್ರ, ಕೋರೊನ ಮಹಾಮಾರಿ ಸಂಧರ್ಭದಲ್ಲೂ ಜಗತ್ತಿಗೆ ಔಷದೋಪಚಾರ ನೀಡುವ ಮೂಲಕ ಜಗತ್ತೆ ಮೆಚ್ಚಿಕೊಳ್ಳವ ಕಾರ್ಯವನ್ನು ಭಾರತ ಮಾಡಿದೆ. ಪ್ರಧಾನಿ ನರೇಂದ್ರ ಮೋದಿಯವರು ಕೋರೊನಾದ ವಿರುದ್ದ ಹೋರಾಟ ಮಾಡುತ್ತಿರುವ ಎಲ್ಲರಿಗೂ ಬೆಂಬಲ ವಾಗಿ ಅನೇಕ ಕಾರ್ಯಕ್ರಮಗಳನ್ನು ಅಯೋಜನೆ ಮಾಡಿದ್ದರು ಅದಕ್ಕೆ ಜನ ಜಾತಿ, ಮತ ಪಂಥಗಳ ಭೇಧ ಭಾವ ಬಿಟ್ಟು ಭಾವನಾತ್ಮಕವಾಗಿ ಬೆಂಬಲ ನೀಡಿದ್ದಾರೆ, ಸರಕಾರ ಕೂಡ ಸಮಸ್ಯೆಯಲ್ಲಿ ಸಿಲುಕಿರುವವರಿಗೆ ಉತ್ತಮ ಸ್ಪಂದನೆ ನೀಡುವ ಮೂಲಕ ಉತ್ತಮ ಕೆಲಸ ಕಾರ್ಯವನ್ನು ಮಾಡಿದೆ. ಸಹಕಾರಿ ರಂಗದಿಂದಲ್ಲೂ ಆಶಾಕಾರ್ಯಕರ್ತೆಯರಿಗೆ ಗೌರವ ನೀಡಬೇಕೆನ್ನುವ ಉದ್ದೇಶದಿಂದ ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಿಂದಲ್ಲೂ ಆಶಾಕಾರ್ಯಕರ್ತೆಯರಿಗೆ ಗೌರವ ಸಲ್ಲಿಸುವುದಾಗಿ ತಿಳಿಸಿ ಸಹಕರಿಸಿದ ಅಡಳಿತ ಮಂಡಳಿಗೆ, ಕೋರೊನಾ ಸಂಧರ್ಭದಲ್ಲಿ ಸೇವೆ ಸಲ್ಲಿಸುತ್ತಿರುವ ಎಲ್ಲಾ ಇಲಾಖಾಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿದರು. ಸಭಾಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಧರ್ಮಪಾಲ ರಾವ್ ಕಜೆ ಮಾತನಾಡಿ ನಾವು ಸ್ವದೇಶಿ ವಸ್ತುಗಳನ್ನು ಬಳಕೆ ಮಾಡಿ ಸ್ವಾವಲಂಬಿ ಭಾರತದ ಕನಸನ್ನು ಸಾಕಾರಗೊಳಿಸಬೇಕು, ಚೈನಾ ಹಾಗೂ ವಿದೇಶಿ ವಸ್ತುಗಳನ್ನು ಬಹಿಷ್ಕರಿಸಬೇಕು ಈ ಬಗ್ಗೆ ಮನೆ ಮನೆಗಳಲ್ಲಿ ಜಾಗೃತಿಯನ್ನು ಮಾಡಬೇಕೆಂದು ತಿಳಿಸಿ ಕೋರೊನಾ ಸಂಧರ್ಭದಲ್ಲಿ ಸೇವೆ ಸಲ್ಲಿಸುತ್ತಿರುವ ಆಶಾಕಾರ್ಯಕರ್ತೆಯರಿಗೆ ಸಂಘದ ವತಿಯಿಂದ ಅಭಿನಂದನೆ ಸಲ್ಲಿಸಿದರು.
ಇದೇ ಸಂಧರ್ಭದಲ್ಲಿ ಲಡಾಖ್ ಕಣಿವೆಯಲ್ಲಿ ಹುತಾತ್ಮರಾದ ಸೈನಿಕರಿಗೆ ಒಂದು ನಿಮಿಷ ಮೌನ ಪ್ರಾರ್ಥನೆ ಸಲ್ಲಿಸಲಾಯಿತು. ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಪ್ರಶಾಂತ ರೈ ಮನವಳಿಕೆ ಪ್ರಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು, ಸಹಾಯಕ ಕಾರ್ಯನಿರ್ವಹಣಾದಿಕಾರಿ ಪದ್ಮಪ್ಪಗೌಡ ಆಶಾಕಾರ್ಯಕರ್ತೆಯರ ಪಟ್ಟಿಯನ್ನು ವಾಚಿಸಿದರು, ಸಂಘದ ಸಿಬ್ಬಂದಿ ಲೋಕನಾಥ ರೈ ಕೇಲ್ಕ ಕಾರ್ಯಕ್ರಮ ನಿರೂಪಿಸಿ, ಸಂಘದ ಉಪಾದ್ಯಕ್ಷ ಪ್ರದೀಪ್ ರೈ ಮನವಳಿಕೆ ಧನ್ಯವಾದ ಸಮರ್ಪಿಸಿದರು.
ವೇದಿಕೆಯಲ್ಲಿ ಅರಂತೂಡು ಜಿ.ಪಂ ಸದಸ್ಯ ಹರೀಶ್ ಕಂಜಿಪಿಲಿ, ಸಹಕಾರಿ ದುರೀಣ ಎ.ವಿ ತೀರ್ಥರಾಮ, ಸಂಘದ ನಿರ್ದೇಶಕರಾದ ಜಿ.ಪಿ ಶೇಷಪತಿ ರೈ ಗುತ್ತುಪಾಲು, ಈಶ್ವರ ಗೌಡ ಪಜ್ಜಡ್ಕ, ಮೋನಪ್ಪ ಕುಲಾಲ್ ಬೊಳ್ಳರೋಡಿ, ರಾಮಚಂದ್ರ ನಾಯ್ಕ, ಸಂತೋಷ್ ಕುಮಾರ್, ಸುಧಾಕರ ಪೂಜಾರಿ ಕಲ್ಲೇರಿ, ಅಣ್ಣುನಾಯ್ಕ, ಅಶಾತಿಮ್ಮಪ್ಪ ಗೌಡ, ನಳಿನಿ, ಮಿಣ್ಣು ಉಪಸ್ಥಿತರಿದ್ದರು. ಸಂಘದ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಸಹಕರಿಸಿದರು.