HomePage_Banner
HomePage_Banner
HomePage_Banner

ಜಿಗಾಂಟಿಕ್ ಇಂಡಸ್ಟ್ರೀಸ್‌ನ ಫುಟ್ ಆಪರೇಟೆಡ್ ಸೆನಿಟೈಸರ್ ಡಿಸ್ಪೆನ್ಸರ್ ಬಿಡುಗಡೆ

Puttur_Advt_NewsUnder_1
Puttur_Advt_NewsUnder_1

 

  • ಲೋಕಲ್-ವೋಕಲ್‌ಗೆ ಪೂರಕವಾಗಿದೆ ಪುತ್ತೂರು – ಶಾಸಕ ಸಂಜೀವ ಮಠಂದೂರು
  • ಲೋಕಲ್ -ವೋಕಲ್ ಮೂಲಕ ಇನ್ನಷ್ಟು ಅನ್ವೇಷನೆಯಾಗಲಿ – ಡಾ. ಕೃಷ್ಣ ಭಟ್
  • ಸಣ್ಣ ಉದ್ಯಮಕ್ಕೆ ಬ್ಯಾಕ್‌ಅಪ್ ಕೊಡಲು ನಾವಿದ್ದೇವೆ-ಎಸ್.ಕೆ.ಆನಂದ್
  • ಅನಿವಾರ್ಯ ಬಂದಾಗ ಅವಿಷ್ಕಾರ ಸೃಷ್ಟಿ – ಹರೀಶ್ ಪುತ್ತೂರಾಯ
  • ಆಸ್ಪತ್ರೆಗಳಿಗೆ ಬಹು ಉಪಯೋಗಿ – ಡಾ. ಅಶೋಕ್ ಕುಮಾರ್ ರೈ
  • ಉಪಕರಣ ಸಣ್ಣದು, ಮಹತ್ವ ದೊಡ್ಡದು – ಪ್ರವೀಣ್ ಆಚಾರ್ಯ
  • ಕಡಿಮೆ ದರದಲ್ಲಿ ಲಭ್ಯ – ಶಂಕರ್ ಭಟ್

ಪುತ್ತೂರು: ಚೀನಾ ದಾಳಿ, ಕೊರೋನಾ ದಾಳಿಯ ಮಧ್ಯೆ ಬದುಕು ಸಾಗುತ್ತಿದೆ. ಇಂತಹ ಸಂದರ್ಭದಲ್ಲಿ ದೇಶದ ರಕ್ಷಣೆಯ ಹೊಣೆಗಾರಿಕೆ ಹೊತ್ತಿರುವ ಪ್ರಧಾನಿ ನರೇಂದ್ರ ಮೋದಿಯವರು ಮೇಕ್ ಇನ್ ಇಂಡಿಯಾ, ಲೋಕಲ್ -ವೋಕಲ್‌ಗೆ ಸಂಬಂಧಿಸಿ ಸಂಕಲ್ಪ ತೊಟ್ಟಿದ್ದಾರೆ. ಅದಕ್ಕೆ ಪೂರಕ ಎಂಬಂತೆ ಸ್ಥಳೀಯವಾಗಿ ಉದ್ಯಮಗಳನ್ನು ಯುವಕರು ತಾಯ್ನಾಡಿನಲ್ಲಿ ಆರಂಭಿಸುತ್ತಿದ್ದು, ಪ್ರವೀಣ್ ಆಚಾರ್ಯ ಅವರು ಜಿಗಾಂಟಿಕ್ ಇಂಡಸ್ಟ್ರೀಸ್‌ನ್ ಮೂಲಕ ಫುಟ್ ಆಪರೇಟೆಡ್ ಸೆನಿಟೈಸರ್ ಸಮಾಜಕ್ಕೆ ಅರ್ಪಣೆಯಾಗಿದೆ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.

ಮುಕ್ವೆ ನರಿಮೊಗರು ಜಿಗಾಂಟಿಕ್ ಇಂಡಸ್ಟ್ರೀಸ್‌ನವರು ಆವಿಷ್ಕರಿಸಿದ ನೂತನ ಮಾದರಿಯ ಸರಳವಾಗಿ ಬಳಕೆ ಮಾಡಬಲ್ಲ ಫುಟ್ ಆಪರೇಟೆಡ್ ಸೆನಿಟೈಸರ್ ಡಿಸ್ಟೆನ್ಸರ್ ಉಪಕರಣವನ್ನು ಜೂ.22ರಂದು ನೆಹರುನಗರ ಸಚ್‌ಚಿತ್ ಕಾಂಪ್ಲೆಕ್ಸ್‌ನ ದ್ವಿತೀಯ ಮಹಡಿಯಲ್ಲಿರುವ ಪೇಸ್‌ನ ಕಚೇರಿಯಲ್ಲಿ ಬಿಡುಗಡೆಗೊಳಿಸಿ ಮಾತನಾಡಿದರು. ಕಾರ್ಯಕ್ರಮವು ಪುತ್ತೂರು ಎಸೋಸಿಯೇಶನ್ ಆಫ್ ಸಿವಿಲ್ ಇಂಜಿನಿಯರ್‍ಸ್ ಸಹಯೋಗದೊಂದಿಗೆ ನಡೆಯಿತು. ಕೊರೋನಾದಿಂದ ಜನರು ಇನ್ನೂ ಜಾಗೃತರಾಗಿಲ್ಲ. ಇಂತಹ ಸಂದರ್ಭದಲ್ಲಿ ಜನರು ಹೇಗೆ ಬದುಕಬೇಕೆಂಬ ನಿಟ್ಟಿನಲ್ಲಿ ಮಾಸ್ಕ್ ಧರಿಸಿ, ಸೆನಿಟೈಸರ್ ಬಳಸುವುದು ಅನಿವಾರ್ಯ ಎಂದ ಅವರು ಬುದಕಿಗಾಗಿ ಜನರು ವಲಸೆ ಹೋಗಬಾರದು ಎಂಬ ದೃಷ್ಟಿಯಿಂದ ಪುತ್ತೂರಿನಲ್ಲೂ ಸಣ್ಣ ಕೈಗಾರಿಕೆಗಳನ್ನು ಆರಂಭಿಸುವ ಕುರಿತು ಚಿಂತನೆ ಮಾಡಲಾಗಿದೆ. ಇದರ ಜೊತೆಗೆ ಒಂದಷ್ಟು ವೈಟ್ ಕಾಲರ್ ಜಾಬ್ ಅವಲಂಬಿಸದೆ ಸ್ವಾಭಿಮಾನದ ಉದ್ಯೋಗಗಳನ್ನು ಜಿಗಾಂಟಿಕ್ ಇಂಡಸ್ಟ್ರೀಸ್‌ನಂತೆ ಎಲ್ಲರೂ ಮಾಡಲು ಮುಂದಾಗಬೇಕು. ಸ್ಥಳೀಯ ಕೈಗಾರಿಕೆಗಳು ಉತ್ತಮ ಉತ್ಪನ್ನಗಳನ್ನು ತಯಾರಿಸುವ ಮೂಲಕ ಪ್ರಧಾನಿ ಆಶಯ ಈಡೇರಿಸಬೇಕು. ಆಗ ದ.ಕ.ಜಿಲ್ಲೆಯು ಮಾದರಿಯಾಗಲಿದೆ ಎಂದರು.

ಲೋಕಲ್ -ವೋಕಲ್ ಮೂಲಕ ಇನ್ನಷ್ಟು ಅನ್ವೇಷನೆಯಾಗಲಿ:
ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ. ಕೃಷ್ಣ ಭಟ್ ಅವರು ಮಾತನಾಡಿ ಲೋಕಲ್ ವೋಕಲ್ ಮೂಲಕ ಇಂತಹ ಹೊಸ ವಿಚಾರಗಳು ಬೆಳಕಿಗೆ ಬರುತ್ತಿವೆ. ಮುಂದೆ ಇನ್ನಷ್ಟು ಅನ್ವೇಷನೆ ಆಗಬೇಕು ಮತ್ತು ನೂತನ ಉಪಕರಣಕ್ಕೆ ಹೆಚ್ಚಿನ ಮಾರುಕಟ್ಟೆ ಲಭ್ಯವಾಗಲಿ ಎಂದು ಹೇಳಿದರು.

ಸಣ್ಣ ಉದ್ಯಮಕ್ಕೆ ಬ್ಯಾಕ್‌ಅಪ್ ಕೊಡಲು ನಾವಿದ್ದೇವೆ:
ಪುತ್ತೂರು ಎಸೋಸಿಯೇಶನ್ ಆಫ್ ಸಿವಿಲ್ ಇಂಜಿನಿಯರ್‍ಸ್‌ನ ಗೌರವಾಧ್ಯಕ್ಷ ಮಾಸ್ಟರ್ ಪ್ಲಾನರಿಯ ಎಸ್.ಕೆ.ಆನಂದ್ ಅವರು ಮಾತನಾಡಿ ಕಾಲಕ್ಕೆ ತಕ್ಕಂತೆ ಹೊಂದಾಣಿಕೆಯಾಗುವಂತೆ ಪುತ್ತೂರಿನಲ್ಲಿ ಸಣ್ಣ ಉದ್ಯಮಗಳು ಬೆಳೆಯಬೇಕು. ಅದಕ್ಕೆ ಬ್ಯಾಕ್‌ಅಪ್ ಕೊಡಲು ನಾವಿದ್ದೇವೆ ಎಂದರು.

ಅನಿವಾರ್ಯ ಬಂದಾಗ ಅವಿಷ್ಕಾರ ಸೃಷ್ಟಿ:
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪುತ್ತೂರು ಅಸೋಸಿಯೇಶನ್ ಆಫ್ ಸಿವಿಲ್ ಇಂಜಿನಿಯರ್ಸ್ ನ ಅಧ್ಯಕ್ಷ ಹರೀಶ್ ಪುತ್ತೂರಾಯ ಅವರು ಮಾತನಾಡಿ ಅನಿವಾರ್ಯ ಬಂದಾಗ ಅವಿಷ್ಕಾರ ಸೃಷ್ಟಿಯಾಗುತ್ತದೆ ಎಂಬಂತೆ ಇವತ್ತು ಕೊರೋನಾದಿಂದಾಗಿ ಹೊಸ ಆವಿಷ್ಕಾರ ಹುಟ್ಟಿದೆ. ಈ ಉಪಕರಣಕ್ಕೆ ಉತ್ತಮ ಮಾರುಕಟ್ಟೆ ಲಭ್ಯವಾಗಲಿ ಎಂದ ಅವರು ಅದೇ ರೀತಿ ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ರಾಜ್ಯದ ನಗರಸಭೆ, ಪುರಸಭೆಗಳಲ್ಲಿ ಬಂದಿರುವ ದೋಷಗಳ ಪರಿಹಾರ ಮಾಡಿದ್ದು, ಈ ಸಭೆಯಲ್ಲಿ ಪುತ್ತೂರು ಅಸೋಸಿಯೇಶನ್ ಆಫ್ ಸಿವಿಲ್ ಇಂಜಿನಿಯರ್ಸ್ ನ ಸದಸ್ಯರನ್ನು ಭಾಗವಹಿಸಲು ಅವಕಾಶ ಮಾಡಿಕೊಟ್ಟಿರುವುದು ಸಂತೋಷದ ವಿಚಾರ ಎಂದರು.

ಆಸ್ಪತ್ರೆಗಳಿಗೆ ಬಹು ಉಪಯೋಗಿ:
ತಾಲೂಕು ಆರೋಗ್ಯಾಧಿಕಾರಿ ಡಾ. ಅಶೋಕ್ ಕುಮಾರ್ ರೈ ಅವರು ಮಾತನಾಡಿ ನೂತನ ಕಡಿಮೆ ಬೆಲೆಯ ಈ ಉಪಕರಣ ಅಸ್ಪತ್ರೆಗಳಿಗೆ ಬಹು ಉಪಯೋಗಿ. ಈ ಕುರಿತು ಪ್ರಾಥಮಿಕ ಅರೋಗ್ಯ ಕೇಂದ್ರಗಳಿಗೆ ಮಾಹಿತಿ ನೀಡಲಾಗುವುದು ಎಂದು ಹೇಳಿದರು.

ಉಪಕರಣ ಸಣ್ಣದು, ಮಹತ್ವ ದೊಡ್ಡದು:
ಜಿಗಾಂಟಿಕ್ ಇಂಡಸ್ಟ್ರೀಸ್‌ನ ಮಾಲಕ ಪ್ರವೀಣ್ ಆಚಾರ್ಯ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಉಪಕರಣ ಸಣ್ಣದಾಗಿದ್ದರೂ ಇದರ ಮಹತ್ವ ಇವತ್ತಿನ ಮಟ್ಟಿಗೆ ಅಗತ್ಯ. ಈ ನಿಟ್ಟಿನಲ್ಲಿ ಇದನ್ನು ಅಭಿವೃದ್ಧಿ ಪಡಿಸಲಾಗಿದೆ. ಬಹಳ ಕಡಿಮೆ ದರ ರೂ. 1500ಕ್ಕೆ ಇದನ್ನು ನಾವು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದೇವೆ. ಅತ್ಯಂತ ಹಗುರವಾದ ಉಪಕರಣವನ್ನು ಇರಿಸಲು ಹೆಚ್ಚಿನ ಸ್ಥಳಾವಕಾಶ ಅಗತ್ಯವಿಲ್ಲ. ಅಲ್ಲದೇ, ಸೆನಿಟೈಸರ್ ಬಾಟಲಿಯಿಂದ ದ್ರಾವಣ ಸಲೀಸಾಗಿ ಹೊರ ಬರುವಂತೆ ಮೇಲಿನ ವಿನ್ಯಾಸವನ್ನು ಮಾಡಲಾಗಿದೆ. ಕಾಲಿನಿಂದ ತುಳಿದು ಇದನ್ನು ಬಳಕೆ ಮಾಡಬೇಕು. ಕಾಲಿನಿಂದ ತುಳಿಯುವ ಪೆಡಲ್ ಕೂಡಾ ಸಲೀಸಾಗಿ ಚಲಾವಣೆಗೊಳ್ಳುತ್ತದೆ. ಆಸ್ಪತ್ರೆಯ ಆಪರೇಷನ್ ಥಿಯೇಟರ್, ಆಸ್ಪತ್ರೆಗಳು, ರೆಸ್ಟೋರೆಂಟ್‌ಗಳು, ಮಾಲ್‌ಗಳು, ಶಾಲೆಗಳು, ಅಂಗಡಿಗಳು, ಆಟದ ಮೈದಾನಗಳು ಹೀಗೆ ಸಾರ್ವಜನಿಕರು ಬರುವ ಎಲ್ಲಾ ಸ್ಥಳಗಳಲ್ಲಿ ಇರಿಸಲು ಇದು ಸೂಕ್ತವಾಗಿದೆ ಎಂದು ಉಪಕರಣವನ್ನು ಪರಿಚಯಿಸಿದ ಉಪಕರಣಕ್ಕೆ ಸಂಬಂಧಿಸಿ ಡಿಸೈನ್‌ನಿಂದ ಹಿಡಿದು ಪೂರ್ಣ ರೀತಿಯಲ್ಲಿ ಸಹಕರಿಸಿದ ಪ್ರದೀಪ್, ಪ್ರಶಾಂತ್ ಆಚಾರ್ಯ, ಉಮೇಶ್ ನಾಯಕ್, ಕೆದಿಲ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ರಾಘವೇಂದ್ರ ಭಟ್, ಪೇಸ್ ಸದಸ್ಯ ಶಂಕರ್ ಭಟ್, ಶಿವಪ್ರಕಾಶ್, ಸುದೀಪ್ ಡಿ ಎನ್, ಇಂಜಿನಿಯರ್ ದಿನೇಶ್ ಭಟ್, ವಿನಯ್ ಅವರಿಗೆ ನೂತನ ಉಪಕರಣ ನೀಡಿ ಗೌರವಿಸಿದರು.

ಕಡಿಮೆ ದರದಲ್ಲಿ ಲಭ್ಯ:
ಪುತ್ತೂರು ಅಸೋಸಿಯೇಶನ್ ಆಫ್ ಸಿವಿಲ್ ಇಂಜಿನಿಯರ್ಸ್ ನ ಸದಸ್ಯ ಶಂಕರ್ ಭಟ್ ಅವರು ಮಾತನಾಡಿ ಜಿಗಾಂಟಿಕ್ ಇಂಡಸ್ಟ್ರೀಸ್‌ನ ಪ್ರವೀಣ್ ಎನ್. ಆಚಾರ್ಯ, ತಮ್ಮ ಸಂಸ್ಥೆಯು 2015ರಲ್ಲಿ ಸಿವಿಲ್ ಕಾಮಗಾರಿಗಳ ನಿರ್ವಹಣೆಯೊಂದಿಗೆ ಆರಂಭಗೊಂಡು ಬಳಿಕ ಲಘು ಭಾರದ ಇಟ್ಟಿಗೆಗಳ ನಿರ್ಮಾಣ, ಇಂಟೀರಿಯರ್ ವಿನ್ಯಾಸ ಹಾಗೂ ಈಗ ಸುಲಭ ನಿರ್ವಹಣೆಯ ಸೆನಿಟೈಸರ್ ಡಿಸ್ಪೆನ್ಸರ್ ಉಪಕರಣವನ್ನು ಮಾರುಕಟ್ಟೆಗೆ ತಂದಿದ್ದು, ನೂತನ ಉಪಕರಣ ಮಾರುಕಟ್ಟೆಯಲ್ಲಿ ಇರುವ ಇತರ ಉಪಕರಣಗಳಿಂದ ಕಡಿಮೆ ಬೆಲೆಯಲ್ಲಿ ಲಭ್ಯವಾಗಲಿದೆ ಎಂದರು. ಆದಿತ್ಯ ಪುತ್ತೂರಾಯ ಪ್ರಾರ್ಥಿಸಿದರು. ಶಂಕರ್ ಭಟ್ ವಂದಿಸಿದರು. ನಗರಸಭಾ ಸದಸ್ಯ ಪಿ.ಜಿ.ಜಗನ್ನಿವಾಸ ರಾವ್, ಪೇಸ್‌ನ ಸದಸ್ಯರಾದ ವಸಂತ್ ಭಟ್, ಎ.ವಿ.ನಾರಾಯಣ್, ಸುದೀಪ್ ಪಿ.ಎನ್, ಸೇರಿದಂತೆ ಹಲವಾರು ಮಂದಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಹೊಸ ಅವಿಷ್ಕಾರ ಉತ್ಪನ್ನದ ಸ್ಕೆಚ್ ಬಿಡುಗಡೆ
ಜಿಗಾಂಟಿಕ್ ಇಂಡಸ್ಟ್ರೀಸ್‌ನಿಂದ ಹೊಸದಾಗಿ ಫುಟ್ ಆಪರೇಟೆಡ್ ಹ್ಯಾಂಡ್ ವಾಶ್ ಮತ್ತು ಟ್ಯಾಂಕ್‌ನ್ನು ಅವಿಷ್ಕಾರಿಸಿದ್ದು, ಈ ಉತ್ಪನ್ನ ಮುಂದೆ ಶಾಲಾ, ಕಾಲೇಜು, ಸಾರ್ವಜನಿಕ ಕಾರ್ಯಕ್ರಮಕ್ಕೆ ಅಗತ್ಯವಾಗಿರುವ ಹಿನ್ನಲೆಯಲ್ಲಿ. ಅದರ ಮಾದರಿ ಸ್ಕೆಚ್‌ನ್ನು ಶಾಸಕ ಸಂಜೀವ ಮಠಂದೂರು ಬಿಡುಗಡೆಗೊಳಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.