ಬಿಜೆಪಿ ಕಚೇರಿಯಲ್ಲಿ ಯುವ ಮೋರ್ಛಾದಿಂದ ಯೋಗ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡುವ ಕಲೆಯಾಗಿರುವ ಯೋಗ ವಿಶ್ವ ಮತ್ತು ಪ್ರಕೃತಿಯ ಜೊತೆಗೆ ಏಕತೆಯ ಅರ್ಥ ಹಾಗೂ ನಮ್ಮ ಜೀವನ ಶೈಲಿಯಲ್ಲಿ ಯೋಗವೂ ಅತೀ ಪ್ರಾಮುಖ್ಯತೆಯನ್ನು ಹೊಂದಿದೆ ಎಂದು ಬಿಜೆಪಿ ನಗರ ಮಂಡಲದ ಅಧ್ಯಕ್ಷ ಪಿ.ಜಿ.ಜಗನ್ನಿವಾಸ ರಾವ್ ಹೇಳಿದರು.

ಪುತ್ತೂರು ಬಿಜೆಪಿ ಕಚೇರಿಯಲ್ಲಿ ಜೂ.21ರಂದು ವಿಶ್ವಯೋಗ ದಿನದ ಅಂಗವಾಗಿ ಸಾಮಾಜಿಕ ಅಂತರ ಕಾಯ್ದುಕೊಂಡು ಯೋಗ ಎಟ್ ಹೋಮ್ ಆಂಡ್ ಯೋಗ ವಿತ್ ಫ್ಯಾಮಿಲಿ ಎಂಬಂತೆ ಬಿಜೆಪಿ ಯುವ ಮೋರ್ಛಾದ ನೇತೃತ್ವದಲ್ಲಿ ನಡೆದ ಯೋಗ ಕಾರ್ಯಕ್ರಮದಲ್ಲಿ ಅವರು ಮಾತನಾಡಿ ಯೋಗವು ಮನಸ್ಸು, ಚಿಂತನೆ, ಕ್ರಿಯೆ, ಸಂಯಮ, ಸಾರ್ಥಕತೆಯನ್ನು ಒಗ್ಗೂಡಿಸುತ್ತದೆ ಎಂದರು. ಬಿಜೆಪಿ ಗ್ರಾಮಾಂತರ ಮಂಡಲದ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಮುಂಗ್ಲಿಮನೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಿಜೆಪಿ ಗ್ರಾಮಾಂತರ ಮಂಡಲ ಯುವ ಮೋರ್ಛಾ ಅಧ್ಯಕ್ಷ ನವೀನ್ ಪಡ್ನೂರು ಸ್ವಾಗತಿಸಿ, ಕಾರ್ಯದರ್ಶಿ ರತನ್ ರೈ ವಂದಿಸಿದರು. ಬಳಿಕ ಯೋಗ ಗುರು ಶರಾವತಿ ಮತ್ತು ಸುಧಾ ಹೆಬ್ಬಾರ್ ಅವರ ಶಿಷ್ಯೆ ಅಂಬಿಕಾ ಪದವಿ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿನಿಯಾಗಿರುವ ವೈಷ್ಣವಿ ಜೆ ರಾವ್ ಅವರ ಮಾರ್ಗದರ್ಶನದಲ್ಲಿ ಯೋಗ ಕಾರ್ಯಕ್ರಮ ನಡೆಯಿತು. ಬಿಜೆಪಿ ಯುವ ಮೋರ್ಛಾದ ಶರಣ್ ವಿಟ್ಲ, ಮೇಘರಾಜ್ ನಾರಾಯಣ ಪಡ್ನೂರು, ಕೃಷ್ಣಪ್ರಸಾದ್ ಪಡ್ನೂರು, ಮೋಹನ್‌ದಾಸ ರಾಮನಗರ, ರಂಜನ್ ಪೊಟಗುಳಿ ಪಡ್ನೂರು, ತೀರ್ಥಪ್ರಸಾದ್ ಮುಂಡಾಜೆ ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.