HomePage_Banner
HomePage_Banner
HomePage_Banner
Breaking News

ಆರ್ಥಿಕ ಸಂಕಷ್ಟಕ್ಕೆ ಒಳಗಾಗಿ‌ ಮಾನಸಿಕವಾಗಿ‌ ನೊಂದ ವಕೀಲರಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿ: ಸರಕಾರಕ್ಕೆ ಪುತ್ತೂರು ವಕೀಲರ ಸಂಘದಿಂದ ಮನವಿ

Puttur_Advt_NewsUnder_1
Puttur_Advt_NewsUnder_1

ಪುತ್ತೂರು : ಕೋವಿಡ್- 19 ನಿಂದಾಗಿ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿ ಮಾನಸಿಕವಾಗಿ ನೊಂದ ವಕೀಲರುಗಳಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡುವಂತೆ ಆಗ್ರಹಿಸಿ ಪುತ್ತೂರು ವಕೀಲರ ಸಂಘದಿಂದ ಜೂ.22ರಂದು ತಹಸೀಲ್ದಾರ್ ಮತ್ತು ಸಹಾಯಕ ಕಮೀಷನರ್ ಕಚೇರಿ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.

ರಾಜ್ಯಾದ್ಯಂತ ವಕೀಲರು ಪ್ರತಿಭಟನೆ ನಡೆಸುತ್ತಿದ್ದಂತೆ ಪುತ್ತೂರಿನಲ್ಲೂ ಬೆಳಿಗ್ಗೆ ವಕೀಲರು ನ್ಯಾಯಾಲಯದ ಆವರಣದಲ್ಲಿ ಪ್ರತಿಭಟನೆ ನಡೆಸಿದರು.  ಯುವ ವಕೀಲರಿಗೆ 6ತಿಂಗಳಿಗೆ ರೂ.5 ಸಾವಿರದಂತೆ ಮಾಶಾಸನ ನೀಡುವುದು, ನ್ಯಾಯವಾದಿಗಳ ಮಕ್ಕಳ ಶಾಲಾ ಶುಲ್ಕದಲ್ಲಿ ರಿಯಾಯಿತಿ ಮಾಡುವುದು, ರೂ.5 ಲಕ್ಷದಷ್ಟು ಬಡ್ಡಿ ರಹಿತ ಅಥವಾ ಕನಿಷ್ಠ ಬಡ್ಡಿಯಲ್ಲಿ ಸಾಲ ನೀಡುವುದು, ವಾಹನ ಸಾಲಗಳ ಮೂರು ತಿಂಗಳ ಬಡ್ಡಿ ವಿನಾಯಿತಿ ಮಾಡುವುದು ಸೇರಿದಂತೆ ಸುಮಾರು 9 ವಿಶೇಷ ಪ್ಯಾಕೇಜ್ ಘೋಷಣೆ ಮಾಡುವಂತೆ ಮನವಿಯಲ್ಲಿ ವಿನಂತಿಸಲಾಗಿದೆ.

ಈ ಸಂದರ್ಭದಲ್ಲಿ ವಕೀಲರ ಸಂಘದ ಅಧ್ಯಕ್ಷ ಮನೋಹರ್ ಕೆ.ವಿ, ಪ್ರಧಾನ ಕಾರ್ಯದರ್ಶಿ ಮಂಜುನಾಥ ಎನ್.ಎಸ್, ಉಪಾಧ್ಯಕ್ಷ ಸುರೇಶ್ ರೈ ಪಡ್ಡಂಬೈಲು, ಕೋಶಾಧಿಕಾರಿ ದಿವ್ಯರಾಜ್ ಹೆಗ್ಡೆ, ಜತೆಕಾರ್ಯದರ್ಶಿ ಮಮತಾ, ನ್ಯಾಯವಾದಿಗಳಾದ ನೂರುದ್ದೀನ್ ಸಾಲ್ಮರ, ಜಯಾನಂದ ಕೆ, ಸೂರ್ಯನಾರಾಯಣ, ಕುಮಾರನಾಥ ಎಸ್, ಜಯರಾಮ ರೈ, ತೀರ್ಥಪ್ರಸಾದ್ ಮುಂಗ್ಲಿಮನೆ, ಸಂತೋಷ್ ರೈ ಸೇರುದಂತೆ ಹಲವಾರು ಮಂದಿ ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.