HomePage_Banner
HomePage_Banner
HomePage_Banner

ಇರ್ದೆ ಬೆಟ್ಟಂಪಾಡಿ ಪ್ರಾ.ಕೃ.ಪ.ಸ.ಸಂಘದ ವತಿಯಿಂದ ಕೊರೋನಾ ವಾರಿಯರ್ಸ್ ಗಳಿಗೆ ಧನ ಸಹಾಯ

Puttur_Advt_NewsUnder_1
Puttur_Advt_NewsUnder_1
  • ಕೊರೋನಾ ವಾರಿಯರ್ಸ್ ಗಳ ಸೇವೆ ಶ್ಲಾಘನೀಯ- ಶಶಿಕುಮಾರ್ ರೈ ಬಾಲ್ಯೊಟ್ಟು
ನಿಡ್ಪಳ್ಳಿ: ಇಡೀ ಜಗತ್ತನ್ನೇ ತಲ್ಲಣಗೊಳಿಸಿದ ಮಾಹಾಮಾರಿ ಕೊರೋನಾ ತಡೆಗಟ್ಟಲು ನಿರಂತರವಾಗಿ ಹೋರಾಟ ನಡೆಸುತ್ತಿರುವ ಕೊರೋನಾ ವಾರಿಯರ್ಸ್ ಗಳ ಸೇವೆ ಶ್ಲಾಘನೀಯ ಎಂದು ಡಿ ಸಿ ಸಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು ಹೇಳಿದರು.
ಅವರು ಇರ್ದೆ ಬೆಟ್ಟಂಪಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವತಿಯಿಂದ ಕೊರೋನಾ ವಾರಿಯರ್ಸ್ ಗಳಿಗೆ ನೀಡಿದ ಧನ ಸಹಾಯ ಹಸ್ತಾಂತರ ಕಾರ್ಯಕ್ರಮದಲ್ಲಿ  ಮಾತನಾಡಿ ಕೊರೋನಾ ಸೋಂಕು ನಮ್ಮಲ್ಲಿಗೆ ಬರದಂತೆ ತಡೆಗಟ್ಟಲು  ಕಳೆದ ಮೂರು ತಿಂಗಳುಗಳಿಂದ ನಿರಂತರವಾಗಿ ಮನೆ ಮನೆಗೆ ಭೇಟಿ ನೀಡಿ ಶ್ರಮಿಸುತ್ತಿರುವ ಆಶಾ ಕಾರ್ಯಕರ್ತೆಯರು ಹಾಗೂ ಅರೋಗ್ಯ ಸಹಾಯಕಿಯರು ತಮ್ಮ ಜೀವದ ಹಂಗು ತೊರೆದು ಸೇವೆ ನೀಡುತ್ತಿದ್ದಾರೆ.ಅಲ್ಲದೆ ಗ್ರಾಮದಲ್ಲಿ ಅತೀ ಹೆಚ್ಚು ಜನರನ್ನು ಭಾದಿಸಿದ ಡೆಂಗ್ಯೂ ಜ್ವರದ ಬಗ್ಗೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು ಕೆಲಸ ಮಾಡಿದ ಇವರನ್ನು ಗುರುತಿಸಿ ಗೌರವಿಸುವುದು ನಮ್ಮ ಕರ್ತವ್ಯವಾಗಿದ್ದು ಮುಂದೆಯೂ ಅವರ ಸೇವೆ ಅಗತ್ಯ ಇದೆ ಎಂದು ನುಡಿದರು.
ಇರ್ದೆ ಬೆಟ್ಟಂಪಾಡಿ ಗ್ರಾಮ ವ್ಯಾಪ್ತಿಯ ಏಳು ಮಂದಿ ಆಶಾ ಕಾರ್ಯಕರ್ತೆಯರಿಗೆ ಹಾಗೂ ಎರಡು ಮಂದಿ ಕಿರಿಯ ಅರೋಗ್ಯ ಸಹಾಯಕಿಯರಿಗೆ ತಲಾ ಮೂರು ಸಾವಿರದಂತೆ ಧನ ಸಹಾಯ ನೀಡಿ ಶಾಲು ಹೊದಿಸಿ. ಗೌರವಿಸಲಾಯಿತು.
ಪಾಣಾಜೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಜ್ಯೋತಿಷ್ ಗೋಪಿನಾಥ್, ಸಂಘದ ನಿರ್ದೇಶಕರುಗಳಾದ ಕರುಣಾಕರ ರೈ ಕೊಮ್ಮಂಡ, ಚಂದ್ರನ್ ತಲೆಪ್ಪಾಡಿ, ಶೇಷಪ್ಪ ರೈ ಮೂರ್ಕಾಜೆ, ಸದಾಶಿವ ರೈ ಗುಮ್ಮಟೆಗದ್ದೆ, ನಾಗರಾಜ ಕಜೆ, ದೇವಪ್ಪ ನಾಯ್ಕ ಕಟೀಲ್ತಡ್ಕ, ದೀಪಿಕಾ.ಪಿ ರೈ, ಹರೀಶ್ ಗೌಡ ಜಿ ಉಪಸ್ಥಿತರಿದ್ದರು.ಸಂಘದ ಅಧ್ಯಕ್ಷ ರಂಗನಾಥ ರೈ ಗುತ್ತು ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಮಯ್ಯ ರೈ ಸ್ವಾಗತಿಸಿ, ಉಪಾಧ್ಯಕ್ಷ ಗಿರೀಶ್ವರ ಭಟ್ ವಂದಿಸಿದರು. ಸಹಾಯಕ ಕಾರ್ಯನಿರ್ವಹಣಾಧಿಕಾರಿ ಲಿಂಗಪ್ಪ ಗೌಡ ಕಾರ್ಯಕ್ರಮ ನಿರೂಪಿಸಿದರು. ಸಂಘದ ಸಿಬ್ಬಂದಿಗಳಾದ ಅರ್.ಬಿ.ಸುವರ್ಣ, ಮಹಮ್ಮದ್ ಕುಂಞ, ಗಂಗಾ.ಸಿ, ಸ್ವಾತಿ.ಎಂ,  ಬಾಲಕೃಷ್ಣ ನಾಯ್ಕ, ರವಿ.ಜಿ, ಕು.ನವ್ಯ ಸಹಕರಿಸಿದರು.
    
ದೇವಕಾನ ಸುಬ್ರಹ್ಮಣ್ಯ ಭಟ್ಟರಿಂದ ತಲಾ ಒಂದು ಸಾವಿರ ವೈಯಕ್ತಿಕ ಧನಸಹಾಯ:
ಈ ಕಾರ್ಯಕ್ರಮಕ್ಕೆ ಆಗಮಿಸಿದ ಪ್ರಗತಿಪರ ಕೃಷಿಕ ದೇವಕಾನ ಸುಬ್ರಹ್ಮಣ್ಯ ಭಟ್ ಅವರು ಮಾತನಾಡಿ ಕೊರೋನಾ ವಾರಿಯರ್ಸ್ ಗಳ ಸೇವೆ ಮೆಚ್ಚುವಂತದ್ದು. ಅವರ ಶ್ರಮವನ್ನು ಗುರುತಿಸಿ ನನ್ನ ವೈಯಕ್ತಿಕ ನೆಲೆಯಲ್ಲಿ ತಲಾ ಒಂದು ಸಾವಿರದಂತೆ ಧನಸಹಾಯ ನೀಡುವುದಾಗಿ ಘೋಷಿಸಿ ನೀಡಿದರು. ಎಲ್ಲರೂ ಇವರ ಕೊಡುಗೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.