ಡೈಲಿ ಫ್ರೆಶ್ ವೆಜಿಟೇಬಲ್ಸ್, ಫ್ರುಟ್ಸ್ ಬೃಹತ್ ಮಳಿಗೆ ಸೆಂಟ್ರಲ್ ಮಾರ್ಕೆಟ್ ಪುತ್ತೂರು ಶುಭಾರಂಭ

Puttur_Advt_NewsUnder_1
Puttur_Advt_NewsUnder_1

-ಸಾವಯವ ತರಕಾರಿಗಳ ಬೃಹತ್ ಸಂಗ್ರಹ
-ತಾಜಾ ತರಕಾರಿ ಮತ್ತು ಹಣ್ಣು ಹಂಪಲುಗಳು ಒಂದೇ ಸೂರಿನಡಿಯಲ್ಲಿ
-ಊರಿನ ತರಕಾರಿ, ಬಾಳೆಹಣ್ಣು, ತೆಂಗಿನಕಾಯಿ ಖರೀದಿ ಮತ್ತು ಮಾರಾಟ
-ಮದುವೆ, ಇನ್ನಿತರ ಸಭೆ-ಸಮಾರಂಭಗಳಿಗೆ ಬೇಕಾದ ಊರಿನ ತರಕಾರಿ ಮತ್ತು ಹಣ್ಣುಹಂಪಲುಗಳನ್ನು ರಖಂ ದರದಲ್ಲಿ ಪೂರೈಸಲಾಗುವುದು
-ಪಾರ್ಕಿಂಗ್ ವ್ಯವಸ್ಥೆ ಲಭ್ಯವಿದೆ

ಪುತ್ತೂರು: ಉದ್ಯಮಿಗಳಾದ ಲತೀಫ್ ದರ್ಬೆ, ಅಬ್ದುಲ್ ರಝಾಕ್ ಬಿ.ಎಚ್ ಹಾಗೂ ಖಾದರ್ ಬಿ.ಎಂರವರ ಪಾಲುದಾರಿಕೆಯಲ್ಲಿ ಸಾವಯವ ತರಕಾರಿಗಳ ಬೃಹತ್ ಸಂಗ್ರಹ, ಬಾಳೆಹಣ್ಣು, ತೆಂಗಿನಕಾಯಿ ಖರೀದಿ ಮತ್ತು ಮಾರಾಟ(ರಖಂ ಹಾಗೂ ಚಿಲ್ಲರೆ ವ್ಯಾಪಾರಸ್ಥರು)ವನ್ನೊಳಗೊಂಡ ಡೈಲಿ ಫ್ರೆಶ್ ವೆಜಿಟೇಬಲ್ಸ್ ಮತ್ತು ಫ್ರುಟ್ಸ್ ಮಳಿಗೆ `ಸೆಂಟ್ರಲ್ ಮಾರ್ಕೆಟ್ ಪುತ್ತೂರು’ ಇದರ ಶುಭಾರಂಭ ಕಾರ್ಯಕ್ರಮವು ಜೂ.22 ರಂದು ಪುತ್ತೂರಿನ ಮುಖ್ಯರಸ್ತೆ ಸಿಟಿಗೋಲ್ಡ್ ಎದುರುಗಡೆ ಇರುವ ವಿಸ್ತಾರವಾದ ಜಾಗದಲ್ಲಿ ಶುಭಾರಂಭಗೊಂಡಿತು.

ಪುತ್ತೂರು ಶಾಸಕರಾದ ಸಂಜೀವ ಮಠಂದೂರುರವರು ರಿಬ್ಬನ್ ಕತ್ತರಿಸಿ, ಉದ್ಘಾಟಿಸಿ ಮಾತನಾಡಿ, ಜನರಿಗೆ ಜೀವನಕ್ಕೆ ಬೇಕಾಗುವ ತಾಜಾ ತರಕಾರಿ ಹಾಗೂ ಹಣ್ಣು ಹಂಪಲುವನ್ನೊಳಗೊಂಡ ಮೂಲಭೂತ ಸೌಕರ್ಯಗಳನ್ನು ಒಂದೇ ಸೂರಿನಡಿ ಒದಗಿಸುವ ನಿಟ್ಟಿನಲ್ಲಿ ಇಲ್ಲಿ ಸೆಂಟ್ರಲ್ ಮಾರ್ಕೆಟ್ ಶುಭಾರಂಭಗೊಂಡಿದೆ. ಮಾರಣಾಂತಿಕ ಕೋವಿಡ್‌ನಿಂದಾಗಿ ಕಳೆದ ಮೂರ್‍ನಾಲ್ಕು ತಿಂಗಳಿನಿಂದ ಜನರು ಜೀವ ಹಾಗೂ ಆರೋಗ್ಯವನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಹೋರಾಡುತ್ತಿದ್ದಾರೆ. ಪ್ರಸ್ತುತ ವಾತಾವರಣದಲ್ಲಿ ವ್ಯವಹಾರವು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವ ವಾತಾವರಣವನ್ನು ನಿರ್ಮಿಸಬೇಕಾಗಿದೆ. ದಿನಸಿ ಸಾಮಾಗ್ರಿಗಳಿಗೆ ಬೇರೆ ಬೇರೆ ಅಂಗಡಿಗಳನ್ನು ಭೇಟಿ ಮಾಡುವ ಬದಲಾಗಿ ಒಂದೇ ಕಡೆ ಸಿಕ್ಕರೆ ಬಹಳ ಒಳಿತು ಎನ್ನುವ ನಿಟ್ಟಿನಲ್ಲಿ ಈ ಭಾಗದಲ್ಲಿ ಮಳಿಗೆಯು ಆರಂಭವಾಗಿ ಶುಭಾರಂಭಗೊಂಡಿದೆ ಎಂದು ಹೇಳಿ ಶುಭಹಾರೈಸಿದರು.

ಪುತ್ತೂರು ಮಾಜಿ ಶಾಸಕಿ ಶಕುಂತಳಾ ಟಿ.ಶೆಟ್ಟಿಯವರು ಮಾತನಾಡಿ, ಜನರಿಗೆ ನಿತ್ಯ ಅಡುಗೆಗೆ ಬೇಕಾಗುವಂತಹ ಮೂಲಭೂತ ಸೌಕರ್ಯಗಳನ್ನು ವ್ಯವಸ್ಥಿತ ರೀತಿಯಲ್ಲಿ ಒಂದೇ ಕಡೆ ಸಿಗುವ ರೀತಿಯಲ್ಲಿ ಇಲ್ಲಿನ ವ್ಯವಸ್ಥಾಪಕರು ಸಜ್ಜುಗೊಳಿಸಿರುವುದು ಪ್ರಶಂಸನೀಯ. ಅದರಲ್ಲೂ ಪ್ರಸ್ತುತ ಸೈನಿಕರು ಎದುರಿಸುವಂತಹ ಸಂದಿಗ್ಧ ಸಮಾಜದಲ್ಲಿ ಅವರ ಕಷ್ಟವನ್ನು ಅರಿತು ಅವರ ಕುಟುಂಬಕ್ಕೆ ಈ ಸಂಸ್ಥೆಯು ನೆರವಿನ ಹಸ್ತವನ್ನು ಚಾಚುತ್ತಿರುವುದು ಶ್ಲಾಘನೀಯ. ದೇಶದ ಬಗ್ಗೆ ಯಾರಿಗೆ ಚಿಂತನೆ, ಅಭಿಮಾನ, ಗೌರವವಿದೆಯೋ ಅವರು ಜೀವನದಲ್ಲಿ ಮುಂದೆ ಬರುತ್ತಾರೆ. ಅದರಂತೆ ಇಂದಿಲ್ಲಿ ಉದ್ಘಾಟನೆಗೊಂಡ ಈ ಸೆಂಟ್ರಲ್ ಮಾರ್ಕೆಟ್ ರಾಜ್ಯಕ್ಕೆ ಮಾದರಿಯಾಗಲಿ ಎಂದು ಹೇಳಿ ಶುಭಹಾರೈಸಿದರು.

ಬನ್ನೂರು ಸಂತ ಅಂತೋನಿ ಚರ್ಚ್‌ನ ಪ್ರಧಾನ ಧರ್ಮಗುರು ವಂ|ಪ್ರಶಾಂತ್ ಫೆರ್ನಾಂಡೀಸ್‌ರವರು ಮಾತನಾಡಿ, ಪುತ್ತೂರಿನ ಹೃದಯಭಾಗದಲ್ಲಿ ಡೈಲಿ ಫ್ರೆಶ್ ವೆಜಿಟೇಬಲ್ಸ್ ಮತ್ತು ಫ್ರುಟ್ಸ್ ಮಳಿಗೆಯು ಉದ್ಘಾಟನೆಗೊಂಡಿರುವುದು ಬೆಳೆಯುವ ಪುತ್ತೂರು ನಗರಕ್ಕೆ ಮುಕುಟಪ್ರಾಯವೆನಿಸಿದೆ. ಜೀವನದಲ್ಲಿ ಯಾರು ಒಳ್ಳೆಯ ಮನಸ್ಸಿನಿಂದ, ನಿಷ್ಠೆ ಹಾಗೂ ಪ್ರಾಮಾಣಿಕತೆಯಿಂದ ಕಠಿಣ ಪರಿಶ್ರಮ ಪಡುತ್ತಾರೋ ಅವರಿಗೆ ದೇವರ ಆಶೀರ್ವಾದ ಖಂಡಿತಾ ಇರುತ್ತದೆ. ಇಂದಿಲ್ಲಿ ಉದ್ಘಾಟನೆಗೊಂಡ ಮಳಿಗೆಯಲ್ಲಿನ ವಸ್ತುಗಳನ್ನು ಕೊಂಡುಕೊಳ್ಳುವವರಿಗೆ ಜೀವನದಲ್ಲಿ ಫ್ರೆಶ್‌ತನವನ್ನು ತರಲಿ ಎಂದು ಹೇಳಿ ಶುಭಹಾರೈಸಿದರು.

ಬಪ್ಪಳಿಗೆ ಮಸೀದಿಯ ಖತೀಬರಾದ ನಯೀಂ ಫೈಝಿ, ಮಾಜಿ ಖತೀಬರಾದ ಸಿರಾಜುದ್ಧೀನ್ ಫೈಝಿ, ಕಲ್ಲೇಗ ಮಸೀದಿಯ ಖತೀಬರಾದ ಅಬೂಬಕ್ಕರ್ ಸಿಧ್ದೀಕ್ ಜಲಾಲಿರವರು ದುಆ ನೆರವೇರಿಸಿದರು. ಬದ್ರಿಯಾ ಜುಮಾ ಮಸೀದಿಯ ಅಧ್ಯಕ್ಷ ಎಲ್.ಟಿ ಅಬ್ದುಲ್ ರಝಾಕ್ ಹಾಜಿ, ಬಪ್ಪಳಿಗೆ ಜುಮಾ ಮಸೀದಿ ಅಧ್ಯಕ್ಷ ಬಿ.ಎಚ್ ಮೊಹಮ್ಮದ್ ಹಾಜಿ, ನಗರಸಭಾ ಸದಸ್ಯರಾದ ಪಿ.ಜಿ ಜಗನ್ನೀವಾಸ್ ರಾವ್, ಮಾಜಿ ನಗರಸಭಾ ಸದಸ್ಯರಾದ ಎನ್.ಕೆ ಜಗನ್ನೀವಾಸ್ ರಾವ್, ಎಚ್.ಮಹಮ್ಮದ್ ಆಲಿ, ರಾಜೇಶ್ ಬನ್ನೂರು, ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಬಡಗನ್ನೂರು, ಪ್ರಮುಖರಾದ ಅಬ್ದುಲ್ ರಶೀದ್ ಹಾಜಿ ಪರ್ಲಡ್ಕ, ಆಕರ್ಷಣ್ ಇಂಡಸ್ಟ್ರೀಸ್‌ನ ಕೆ.ಪಿ ಅಹ್ಮದ್ ಹಾಜಿ, ಜಿಲ್ಲಾ ವಕ್ಫ್ ಸದಸ್ಯ ಯಾಕೂಬ್ ಹಾಜಿ ದರ್ಬೆ, ಪುತ್ತೂರು ಮುಹಮ್ಮದೀಯ ಜುಮಾ ಮಸೀದಿಯ ಅಧ್ಯಕ್ಷ ಹಾಜಿ ಅಬ್ದುಲ್ ರಹಿಮಾನ್ ಅಜಾದ್, ಪುತ್ತೂರು ಜ್ಯುವೆಲ್ ಚಾಸ್‌ನ ಹಂಝ ಮರೀಲು, ಮಹಮ್ಮದ್ ಶರೀಪ್ ರಾಜ್‌ಕಮಾಲ್, ಮೊದೀನ್ ಕಾಂಪ್ಲೆಕ್ಸ್‌ನ ಬಶೀರ್ ದರ್ಬೆ, ಪುತ್ತೂರು ಯುವ ಕಾಂಗ್ರೆಸ್ ಸಮಿತಿಯ ಮಾಜಿ ಅಧ್ಯಕ್ಷ ಮೊದೀನ್ ಆರ್ಶದ್ ದರ್ಬೆ, ಕಬಕ ಎಂ.ಕೆ ಫ್ಲೈವುಡ್ಸ್‌ನ ಸಲೀಂ ಕೊಡಿಪ್ಪಾಡಿ, ಪುತ್ತೂರು ಚಾಸ್ ಸೆಂಟರ್‌ನ ಇಬ್ರಾಹಿಂ ಮರೀಲ್, ಪುತ್ತೂರು ಬೊನಿಟಾ ಫ್ಯಾನ್ಸಿಯ ಜಮಾಲ್ ಮರೀಲ್, ಪುತ್ತೂರು ಹೈಝಾ ಗೋಲ್ಡ್‌ನ ಹೈದರ್ ಮರೀಲು, ಸ್ಪೋರ್ಟ್ಸ್ ವನ್ ಬೆಳ್ತಂಗಡಿಯ ನಸರ್ ಯು.ಎಂ, ತೌಸಿಫ್ ಯು.ಎಂ, ಸ್ಪೋರ್ಟ್ಸ್ ವನ್ ಸುಳ್ಯದ ಅಬ್ದುಲ್ ರಝಾಕ್ ಜೈ ಭಾರತ್, ದರ್ಬೆ ಅಕ್ಕ ಬಜಾರ್‌ನ ಅಬ್ದುಲ್ ರಹಿಮಾನ್ ಪರ್ಪುಂಜ, ಸಲಾಂಮುದ್ಧೀನ್, ಮುಸ್ತಫಾ, ಜಸ್ವೀರ್, ಖಲಂದರ್, ಫಿಲೋಮಿನಾ ಕಾಲೇಜು ಕ್ಯಾಂಟೀನ್‌ನ ಆನಂದ ಶೆಟ್ಟಿ, ಸ್ಪೋರ್ರ್‍ಟ್ ವರ್ಲ್ಡ್‌ನ ನೂರುದ್ಧೀನ್, ದಿನೇಶ್ ಶೆಟ್ಟಿ ದರ್ಬೆ, ಸಾಯಿ ಫ್ಲವರ್ಸ್ ನ ಸಚಿನ್ ದರ್ಬೆ, ದರ್ಬೆ ಮುಹಾದ್ ಬುರ್ಖಾ ಹೌಸ್‌ನ ಶಾಫಿ ಗಡಿಪ್ಪಿಲ, ಹುರೈಸ್ ಬಪ್ಪಳಿಗೆ, ಧರೇಶ್ ಹೊಳ್ಳ ಕೊಂಬೆಟ್ಟು, ದುಬೈ ಮಾರ್ಕೆಟ್‌ನ ಅಶ್ಪಕ್ ಬಪ್ಪಳಿಗೆ, ಸೆಂಟ್ರಲ್ ಮಾರ್ಕೆಟ್‌ನ ಅಮ್ಮಿ, ಇಬ್ರಾಹಿಂ, ಜಬ್ಬಾರ್, ಮುಸ್ತಫಾ ಸಹಿತ ಹಲವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು ಶುಭಹಾರೈಸಿದರು.


ಕಾರ್ಯಕ್ರಮದ ಆರಂಭಕ್ಕೆ ಮಳಿಗೆಯ ಹೊರಗಡೆ ಸ್ಯಾನಿಟೈಸರ್ ಅನ್ನು ಇಡಲಾಗಿತ್ತು. ಬಂದಂತಹ ಅತಿಥಿಗಳಿಗೆ ಉಚಿತವಾಗಿ ಮಾಸ್ಕ್‌ನ್ನು ನೀಡಲಾಗಿತ್ತು. ಪಾಲುದಾರರಲ್ಲಿ ಓರ್ವರಾದ ರಝಾಕ್ ಬಿ.ಎಚ್ ಸ್ವಾಗತಿಸಿ, ರೋಟರಿ ಸೆಂಟ್ರಲ್ ಕಾರ್ಯದರ್ಶಿ ರಫೀಕ್ ರೋಯಲ್ ವಂದಿಸಿದರು.

ಕಾರ್ಯನಿರತ ಯೋಧರಿಗೆ ತಿಂಗಳ ದಿನಸಿ ಸಾಮಾಗ್ರಿ ಉಚಿತ…
ಭಾರತ ದೇಶದ ಗಡಿಯಲ್ಲಿ ಪ್ರಸ್ತುತ ಕಾರ್ಯನಿರತರಾಗಿರುವ ನಮ್ಮ ಹೆಮ್ಮೆಯ ಗಡಿನಾಡ ಯೋಧರಿಗೆ ಮತ್ತು ಅವರ ಕುಟುಂಬಕ್ಕೆ ಜೂ.೨೨ ರಿಂದ ಆರಂಭವಾಗಿ ಸರಿಯಾಗಿ ಒಂದು ತಿಂಗಳು ಪೂರೈಸುವವರೆಗೆ ಸೆಂಟ್ರಲ್ ಮಾರ್ಕೆಟ್‌ನಲ್ಲಿರುವ ಯಾವುದೇ ದಿನಸಿ ಸಾಮಾಗ್ರಿಗಳು ಉಚಿತವಾಗಿ ದೊರೆಯಲಿದೆ. ನಮಗೋಸ್ಕರ ಗಡಿಯಲ್ಲಿ ಹೋರಾಡುವ ನಮ್ಮ ಹೆಮ್ಮೆಯ ಯೋಧರಿಗೆ ಮತ್ತು ಅವರ ಕುಟುಂಬಕ್ಕೆ ನಮ್ಮ ಮಳಿಗೆಯ ಉದ್ಘಾಟನೆ ಪ್ರಯುಕ್ತ ಒಂದು ತಿಂಗಳ ದಿನಸಿ ಸಾಮಾಗ್ರಿಗಳನ್ನು ಉಚಿತವಾಗಿ ನೀಡುವುದರಿಂದ ನಾವು ನಿಮ್ಮೊಂದಿಗೆ ಇದ್ದೇವೆ ಎಂಬಂತೆ ನಮ್ಮ ಯೋಧರ ಮನೋಸ್ಥೈರ್ಯವನ್ನು ಹೆಚ್ಚಿಸುವುದು ನಮ್ಮೆಲ್ಲರ ಕಾಳಜಿಯಾಗಿದೆ. ಕಾರ್ಯನಿರತ ಯೋಧರು ಮತ್ತು ಅವರ ಕುಟುಂಬದವರು ಈ ಒಂದು ತಿಂಗಳಿನ ಯಾವುದೇ ಸಮಯದಲ್ಲಿ ಬಂದು ದಿನಸಿ ಸಾಮಾಗ್ರಿ(ಉಚಿತ)ಗಳನ್ನು ತೆಗೆದುಕೊಂಡರೆ ನಾವುಗಳು ಅವರಿಗೆ ನೀಡುವ ಮಹಾನ್ ಕಾಣಿಕೆಯಾಗಿದೆ ರಝಾಕ್ ಬಿ.ಎಚ್, ಪಾಲುದಾರರು, ಸೆಂಟ್ರಲ್ ಮಾರ್ಕೆಟ್ ಪುತ್ತೂರು

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.