ಪುತ್ತೂರು: ಕಡಬ ತಾಲೂಕಿನ ಸವಣೂರಿನ ಯುವ ಸಭಾ ಭವನದಲ್ಲಿ ಬಿಜೆಪಿ ಸುಳ್ಯ ಮಂಡಲ ಸಮಿತಿ, ಬಿಜೆಪಿ ಬೆಳಂದೂರು ಮಹಾ ಶಕ್ತಿ ಕೇಂದ್ರ ಹಾಗೂ ಸವಣೂರು ಯುವಕ ಮಂಡಲದ ಆಶ್ರಯದಲ್ಲಿ ಯೋಗಾ ದಿನಾಚರಣೆ ಜರಗಿತು. ಪುತ್ತೂರಿನ ಯೋಗ ಶಿಕ್ಷಕ ಕರುಣಾಕರ ಉಪಾಧ್ಯಾಯ ರವರು ಯೋಗ ತರಬೇತಿ ನಡೆಸಿಕೊಟ್ಟರು. ಬಿಜೆಪಿ ಸುಳ್ಯ ಮಂಡಲ ಸಮಿತಿಯ ಪ್ರಧಾನ ಕಾರ್ಯದರ್ಶಿ ರಾಕೇಶ್ ರೈ ಕೆಡೆಂಜಿ, ಸವಣೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಇಂದಿರಾ ಬಿ.ಕೆ, ರಾಮಕೃಷ್ಣ ಪ್ರಭು ಸವಣೂರು, ಪ್ರಮೀಳಾ ಪ್ರಕಾಶ್ ಕುದ್ಮಾನಮಜಲು, ಹರೀಶ್ ರೈ ಮಂಜುನಾಥನಗರ ಮತ್ತಿತರರು ಉಪಸ್ಥಿತರಿದ್ದರು.