ಪುತ್ತೂರು:ಪತ್ನಿಗೆ ದೈಹಿಕ, ಮಾನಸಿಕ ಹಿಂಸೆ ನೀಡಿರುವ ಆರೋಪ ಹೊತ್ತಿರುವ ಪುತ್ತೂರು ಸಂಚಾರ ಪೊಲೀಸ್ ಠಾಣೆಯ ಕಾನ್ಸ್ಟೇಬಲ್ ಶಾಂತ ಕುಮಾರ್ ಪ್ರಕರಣ ದಾಖಲಾದ ಮರು ದಿನದಿಂದ ಕರ್ತವ್ಯಕ್ಕೆ ಗೈರಾಗಿರುವುದಾಗಿ ಮಾಹಿತಿ ಲಭಿಸಿದೆ.
5 ತಿಂಗಳ ಹಿಂದೆಯಷ್ಟೆ ಸಬ್ರಿಜಿಸ್ಟರ್ ಕಚೇರಿಯಲ್ಲಿ ಪುತ್ತೂರು ಸಂಚಾರ ಪೊಲೀಸ್ ಠಾಣೆಯ ಕಾನ್ಸ್ಟೇಬಲ್ ಶಾಂತಕುಮಾರ್ ಮತ್ತು ಅಶ್ವಿನಿ ಶಾರದಾ ಅವರ ವಿವಾಹ ನೋಂದಾವಣೆಯಾಗಿತ್ತು.ಬಳಿಕದ ಬೆಳವಣಿಗೆಯಲ್ಲಿ, ಜೂ.16ರಂದು ಪತಿಯಿಂದ ಹಲ್ಲೆಗೊಳಗಾಗಿರುವುದಾಗಿ ಹೇಳಿಕೊಂಡು ಅಶ್ವಿನಿಶಾರದಾ ಅವರು ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿ ಸಂಪ್ಯ ಪೊಲೀಸರಿಗೆ ದೂರು ನೀಡಿದ್ದರು.ಶಾಂತಕುಮಾರ್ ಅವರ ವಿರುದ್ಧ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ಪ್ರಕರಣ ದಾಖಲಾದ ಬಳಿಕ ಶಾಂತ ಕುಮಾರ್ ಅವರು ಸಂಚಾರ ಪೊಲೀಸ್ ಠಾಣೆಗೆ ಕರ್ತವ್ಯಕ್ಕೆ ಗೈರಾಗಿದ್ದಾರೆ ಎಂದು ತಿಳಿದು ಬಂದಿದೆ.