ಮತ್ಸ್ಯ ಕ್ಷೇತ್ರ ಶಿಶಿಲೇಶ್ವರದಲ್ಲಿ ಮೀನುಗಳ ಕಳ್ಳತನ!! ಅರಸಿನಮಕ್ಕಿ ಮಸೀದಿ ಧರ್ಮಗುರು ಸಹಿತ 7 ಮಂದಿ ಸೆರೆ

Puttur_Advt_NewsUnder_1
Puttur_Advt_NewsUnder_1

ಬೆಳ್ತಂಗಡಿ: ಇಲ್ಲಿನ ಇತಿಹಾಸ ಪ್ರಸಿದ್ಧ ಮತ್ಸ್ಯ ಕ್ಷೇತ್ರ ಶಿಶಿಲೇಶ್ವರ ದೇವಸ್ಥಾನದ ದೇವರ ಮೀನುಗಳನ್ನು ಕಳ್ಳತನ ಮಾಡುತ್ತಿದ್ದ 7 ಮಂದಿಯನ್ನು ಸ್ಥಳೀಯ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ರೆಡ್ ಹ್ಯಾಂಡ್ ಆಗಿ ಹಿಡಿದ ಘಟನೆ ಜೂ.22ರಂದು ರಾತ್ರಿ ನಡೆದಿದೆ.    

ಶ್ರೀ ಶಿಶಿಲೇಶ್ವರ ದೇವಾಲಯದ ದೇವರ ಕೆರೆಯಲ್ಲಿ ಮೀನುಗಳನ್ನು ರಾತ್ರಿ ವೇಳೆ ಕದ್ದು ಕೊಂಡೊಯ್ಯಲಾಗುತ್ತಿತ್ತು. ಈ ಬಗ್ಗೆ ಸ್ಥಳೀಯ ಹಿಂದೂ ಜಾಗರಣ ವೇದಿಕೆ ಸಂಘಟನೆ ರಾತ್ರಿ ವೇಳೆ ಕಾರ್ಯಾಚರಣೆ ನಡೆಸಲು ಕಾದು ಕುಳಿತಿತ್ತು. ನಿನ್ನೆಯೂ ಜೂ.22ರಂದು  ಕಳ್ಳರು ಮೀನು ಕಳ್ಳತನಕ್ಕೆ ಬಂದಾಗ ಹಿಡಿದು ಥಳಿಸಿದ್ದಾರೆ. ಅರಸಿನಮಕ್ಕಿ ಮಸೀದಿಯ ಧರ್ಮಗುರು ಸಹಿತ 7 ಮಂದಿ ಸೆರೆಸಿಕ್ಕಿದ್ದು ಪೊಲೀಸ್ ವಶಕ್ಕೆ ಒಪ್ಪಿಸಲಾಗಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.