Home_Page_Advt
Home_Page_Advt
Home_Page_Advt

ಎಸ್‌ಎಸ್‌ಎಲ್ ಸಿ ಪರೀಕ್ಷೆ ವಿದ್ಯಾರ್ಥಿಗಳಿಗೆ ಶಾಸಕರಿಂದ 10ಸಾವಿರ ಮಾಸ್ಕ್‌ಗಳು

Puttur_Advt_NewsUnder_1
Puttur_Advt_NewsUnder_1
  • ಶಾಲಾ ಕೊಠಡಿಗಳಿಗೆ ಸ್ಯಾನಿಟೈಸರ್ ನಿಗಾ – ಶಿಕ್ಷಕರೇ ಜವಾಬ್ದಾರಿ

ಪುತ್ತೂರು: ಎಸ್.ಎಸ್.ಎಲ್.ಸಿ ಪರೀಕ್ಷಾ ಕೊಠಡಿಗಳಿಗೆ ಸ್ಯಾನಿಟೈಸರ್ ಸ್ಪ್ರೇ ವ್ಯವಸ್ಥೆ ಮಾಡಲಾಗಿದೆ. ಆದರೆ ಈ ಕುರಿತು ಶಿಕ್ಷಕರು ನಿಗಾ ವಹಿಸಬೇಕು. ಯಾಕೆಂದರೆ ನಾಳಿನ ದಿನ ಏನಾದರೂ ಹೆಚ್ಚು ಕಡಿಮೆ ಆದರೆ ಶಿಕ್ಷಕರೇ ಜವಾಬ್ದಾರಾಗುತ್ತೀರಿ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.

ಜೂ.25ರಿಂದ ಆರಂಭಗೊಳ್ಳುವ ಎಸ್.ಎಸ್.ಎಲ್.ಸಿ ಪರೀಕ್ಷೆಗೆ ಸಂಬಂಧಿಸಿ ಜೂ. 23ರಂದು ತಾ.ಪಂ ಸಭಾಂಗಣದಲ್ಲಿ ನಡೆದ ವಿದ್ಯಾರ್ಥಿಗಳಿಗೆ ಮಾಸ್ಕ್ ವಿತರಣಾ ಕಾರ್ಯಕ್ರಮದಲ್ಲಿ ತನ್ನ ಮೂಲಕ 10 ಸಾವಿರ ಮಾಸ್ಕ್‌ಗಳನ್ನು ಆಯಾ ಶಾಲೆಯ ಮುಖ್ಯಶಿಕ್ಷಕರಿಗೆ ಹಸ್ತಾಂತರಿಸಿ ಮಾತನಾಡಿದರು. ತಾಲೂಕಿನಲ್ಲಿ 5007 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. 32 ವಿದ್ಯಾರ್ಥಿಗಳು ಇನ್ ಮೈ ಗ್ರೇಟೆಡ್ ಆಗಿದ್ದಾರೆ. ವಿದ್ಯಾರ್ಥಿಗಳು ಯಾವುದೇ ರೀತಿಯ ಭಯದ ವಾತಾವರಣ ಇಲ್ಲದೆ ಪರೀಕ್ಷೆ ಬರೆಯಲಿದ್ದಾರೆ. ಮಳೆಗಾಲದಲ್ಲಿ ಈ ಪರೀಕ್ಷೆ ನಡೆಯಲಿರುವುದರಿಮದ ತೋಡು, ನದಿ ದಾಟಿ ಬರುವ ಮತ್ತು ಕೇರಳದ ಗಡಿ ಭಾಗದಿಂದ ಬರುವ ಮಕ್ಕಳಿಗೆ ಯಾವುದೇ ಸಮಸ್ಯೆ ಆಗದ ರೀತಿಯಲ್ಲಿ ಮುಂಜಾಗರುಕತೆ ವಹಿಸಬೇಕು. ಜೊತೆಗೆ ಕೋವಿಡ್ ಹಿನ್ನೆಲೆಯಲ್ಲಿ ಪರೀಕ್ಷಾ ಕೇಂದ್ರಗಳಿಗೆ ಸ್ಯಾನಿಟೈಸರ್ ಸ್ಪ್ರೇ ಮಾಡಲಾಗುತ್ತದೆ. ಇಂತಹ ಸಂದರ್ಭದಲ್ಲಿ ಶಿಕ್ಷಕರು ನಿಗಾ ವಹಿಸಬೇಕು. ಮುಂದೆ ಅಲ್ಲಿ ಏನಾದರೂ ಹೆಚ್ಚು ಕಡಿಮೆ ಆದರೆ ಅದಕ್ಕೆ ನಿವೇ ರೆಸ್ಪಾನ್ಸ್ ಎಂದು ಎಚ್ಚರಿಕೆ ನೀಡಿದರು. 

ಆರೋಗ್ಯ ಇಲಾಖೆ ಸಹಕಾರ ಪಡೆಯಿರಿ:
ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಲ್ಲಿ ಶೀತ, ನೆಗಡಿಯ ಲಕ್ಷಣ ಅಥವಾ ಡೆಂಗ್ಯೂ ಸಾಧ್ಯತೆ ಇರುತ್ತದೆ. ಆದರೆ ಈ ವಿದ್ಯಾರ್ಥಿಗಳನ್ನು ಸಂಶಯದ ದೃಷ್ಟಿಯಿಂದ ನೋಡುವ ಸಾಧ್ಯತೆಯೂ ಬಹಳಷ್ಟು ಇದೆ. ಹಾಗಾಗಿ ಆರೋಗ್ಯ ಇಲಾಖೆಯ ವೈದ್ಯಾಧಿಕಾರಿಗಳು, ಸ್ಟಾಪ್ ನರ್ಸ್‌ಗಳ ಸಹಕಾರ ಪಡೆಯುವಂತೆ ಶಾಸಕರು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚಿಸಿದರು.


ಕೊರೋನಾ ಮುಕ್ತ ಪರೀಕ್ಷೆ ಆಗಬೇಕು:
ಕೊರೋನಾದಿಂದಾಗ ವಿದ್ಯಾರ್ಥಿಗಳ ಜೊತೆ ಪೋಷಕರು ಆತಂಕದಲ್ಲಿ ಇರುವುದು ಸಹಜ. ಪರೀಕ್ಷಾ ಕೇಂದ್ರಗಳಲ್ಲಿ 144ಸೆಕ್ಷನ್ ಇರುವ ಸಂದರ್ಭ ವಿದ್ಯಾರ್ಥಿಗಳ ಹೆತ್ತವರು ಬಂದು ಜನದಟ್ಟನೆ, ವಾಹನ ದಟ್ಟನೆ ಆಗುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಅಲ್ಲಿ ಹೆಚ್ಚುವರಿ ಪೊಲೀಸ್ ವ್ಯವಸ್ಥೆ ಇರಬೇಕು. ಆದರೆ ಪೊಷಕರಿಗೆ ತೊಂದರೆ ಆಗದಂತೆ ಅವರಿಗೆ ಬೇರೆ ಸ್ಥಳ ಗುರುತಿಸಬೇಕು ಮತ್ತು ಅಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ಯಾವ ಯಾವ ರೂಟ್‌ನಲ್ಲಿ ಎಷ್ಟೆಷ್ಟು ಮಕ್ಕಳು ಬರುತ್ತಾರೆ ಎಂಬ ಕುರಿತು ನಿಗಾ ವಹಿಸಬೇಕು. ಪರೀಕ್ಷಾ ಕೊಠಡಿ ಮಳೆ ನೀರು ಸೋರದಂತೆ ದುರಸ್ಥಿ ಕಾರ್ಯ ನಡೆದಿರಬೇಕು. ತಾಲೂಕಿನಲ್ಲಿ 5007 ವಿದ್ಯಾರ್ಥಿಗಳೆಲ್ಲರೂ ಪರೀಕ್ಷೆಗೆ ಹಾಜರಾಗಬೇಕು. ನೂರಕ್ಕೆ ನೂರು ಮಂದಿ ಉತ್ತೀರ್ಣ ಆಗಬೇಕು. ಅದೇ ರೀತಿ ಕೊರೋನಾ ಮುಕ್ತ ಪರೀಕ್ಷೆ ನಡೆಯಬೇಕೆಂದು ಶಾಸಕ ಸಂಜೀವ ಮಠಂದೂರು ಹೇಳಿದರು. ಜಿ.ಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ತಾ.ಪಂ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ಸ್ಥಾಯಿ ಸಮಿತಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ನವೀನ್ ಕುಮಾರ್ ಭಂಡಾರಿ, ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಸಿ, ಎಪಿಎಂಸಿ ಅಧ್ಯಕ್ಷ ದಿನೇಶ್‌ ಮೆದು ವೇದಿಕೆಯಲ್ಲಿ ಉಪಸ್ಥಿತರಿದ್ದರು. ತಾ.ಪಂ ಸದಸ್ಯರಾದ ಮುಕುಂದ, ಮೀನಾಕ್ಷಿ ಮಂಜುನಾಥ್ ಮತ್ತು ಶಾಲಾ ಮುಖ್ಯಶಿಕ್ಷಕರು, ಪರಿವೀಕ್ಷಕರು ಉಪಸ್ಥಿತರಿದ್ದರು. ಎಸ್ ಎಸ್ ಎಲ್ ಸಿ ಪರೀಕ್ಷೆ ನೋಡೆಲ್ ಅಧಿಕಾರಿ ಜಯರಾಮ ರೈ ಸ್ವಾಗತಿಸಿದರು. ದೈಹಿಕ ಶಿಕ್ಷಣ ಪರಿವೀಕ್ಷಕ ಸುಂದರ ಗೌಡ ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.