ಹೋಮ್ ಪ್ರೋಡಕ್ಟ್‌ಗಳು ಸ್ಕೂಲ್ ಪ್ರೋಡಾಕ್ಟ್ ಆದಾಗ… ಪುತ್ತೂರಿನ ಅಂಬಿಕಾ ವಿದ್ಯಾಸಂಸ್ಥೆಯಲ್ಲಿ ತೆರೆದುಕೊಂಡ ಆಹಾರ ಉದ್ಯಮ

Puttur_Advt_NewsUnder_1
Puttur_Advt_NewsUnder_1

ಪುತ್ತೂರು : ಮಕ್ಕಳಿಗೆ ಉತ್ತಮ ಶಿಕ್ಷಣ ಕೊಟ್ಟು ಅವರನ್ನು ಸಮಾಜಮುಖಿಯಾಗಿ ಬೆಳೆಸುವ ವಿದ್ಯಾಸಂಸ್ಥೆಗಳು ಇವತ್ತು ಕೊರೋನಾದಿಂದಾಗಿ ಸದ್ಯಕ್ಕಂತು ತೆರೆಯುವುದಿಲ್ಲ. ಯಾವಾಗ ತೆರೆಯುತ್ತದೆ ಗೊತ್ತಿಲ್ಲ. ಇಂತಹ ಸಂದರ್ಭದಲ್ಲಿ ಪುತ್ತೂರಿನ ಅಂಬಿಕಾ ವಿದ್ಯಾಸಂಸ್ಥೆಯೊಂದು ಪಾಠಶಾಲೆಯಿಂದ ಸದ್ಯದ ಮಟ್ಟಿಗೆ ಪಾಕಶಾಲೆಯಾಗಿ ತೆರೆದು ಕೊಂಡು ಕೊರೋನಾ ಸಂಕಷ್ಟಕ್ಕೆ ದಿಟ್ಟ ಉತ್ತರ ನೀಡಲು ಸಂಸ್ಥೆಯ ಬೋಧಕ ಹಾಗೂ ಬೋಧಕೇತರ ವರ್ಗ ಸಜ್ಜಾಗಿದ್ದು, ಹೋಮ್ ಪ್ರೋಡಕ್ಟ್‌ಗಳು ಸ್ಕೂಲ್ ಪ್ರೋಡಾಕ್ಟ್ ಆಗಿ ಮಾರ್ಪಟ್ಟಿವೆ.

ರಾಜ್ಯದಲ್ಲಿ ಕೊರೋನಾ ಫಾಸಿಟಿವ್ ಪ್ರಕರಣಗಳು ಹಾಗೂ ಸಾವಿನ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದೂ ಕೂಡ ಆತಂಕಕ್ಕೆ ಕಾರಣವಾಗಿದೆ. ಶಿಕ್ಷಣ ವ್ಯವಸ್ಥೆಯಲ್ಲಾಗಿರುವ ಅಲ್ಲೋಲ ಕಲ್ಲೋಲ ಸ್ಥಿತಿ ಖಾಸಗಿ ವಿದ್ಯಾಸಂಸ್ಥೆಗಳಿಗೆ ಬಿಸಿತುಪ್ಪದಂತಾಗಿದೆ. ವರ್ಷಂಪ್ರತಿ ನಡೆಯುವ ಮಕ್ಕಳ ದಾಖಲಾತಿಯೂ ಈ ಬಾರಿ ನಡೆಯದಿರುವುದೂ ಖಾಸಗಿ ಶಾಲೆಗಳಿಗೆ ಆರ್ಥಿಕ ಸಂಕಷ್ಡವನ್ನೂ ತಂದೊಡ್ಡಿದೆ. ಇದು ಅನುದಾನರಹಿತ ಶಾಲಾ ಶಿಕ್ಷಕರ ಮಾಸಿಕ ವೇತನಕ್ಕೂ ಅಗತ್ಯ ಕತ್ತರಿ ಹಾಕಬೇಕಾದ ಸ್ಥಿತಿ ತಂದೊಡ್ಡಿದೆ. ಕೆಲವು ಖಾಸಗಿ ವಿದ್ಯಾಸಂಸ್ಥೆಗಳಂತೂ ಶೇ.10 ರಷ್ಟು ಶಿಕ್ಷಕರನ್ನೂ ಕೈ ಬಿಟ್ಟಿದ್ದಾರೆ. ಇಂತಹಾ ಆತಂಕದ ಸನ್ನಿವೇಶದ ನಡುವೆ ಪುತ್ತೂರಿನ ಅಂಬಿಕಾ ವಿದ್ಯಾಲಯದಲ್ಲಿ ಬೋಧಕ ಹಾಗೂ ಬೋಧಕೇತರ ವರ್ಗದ ಸಮಾನ ಮನಸ್ಕರ ಗುಂಪೊಂದು”ಶಿವಂ ಫುಡ್ ಫ್ರಾಡಕ್ಟ್” ಆರಂಭಿಸಿದ್ದಾರೆ.

ಅಂಬಿಕಾ ಕಾಲೇಜಿನಲ್ಲಿ ಉಪನ್ಯಾಸಕರಾಗಿರುವ ಸತೀಶ್ ರವರ ನೇತೃತ್ವದಲ್ಲಿ ಒಗ್ಗೂಡಿರುವ ಉಪನ್ಯಾಸಕರು ಸಣ್ಣಪ್ರಮಾಣದಲ್ಲಿ ಆಹಾರ ಉದ್ಯಮವನ್ನು ಆರಂಭಿಸಿದ್ದಾರೆ. ಮೊದಲ ದಿನವಾದ ಜೂ.22ರಂದು ಹಲಸಿನ ಸೋಳೆಯ ಚಿಪ್ಸ್ ಹಾಗೂ ಹಲಸಿನ ಬೀಜದ ಲಡ್ಡು ತಯಾರಿಸಿದ್ದಾರೆ.

  

ಶಾಲಾ ಕೊಠಡಿಯೇ ಆಹಾರ ಉತ್ಪನ್ನದ ತಯಾರಿಕಾ ಘಟಕ:
ಆಹಾರ ಉತ್ಪನ್ನಗಳ ತಯಾರಿಗೆ ಶಾಲೆಯ ಕೊಠಡಿಯನ್ನೇ ಬಳಸಲಾಗಿದ್ದು, ತಯಾರಿ ಕಾರ್ಯದಲ್ಲಿ ವಿದ್ಯಾ ಸಂಸ್ಥೆಯ ಬಹುತೇಕ ಉಪನ್ಯಾಸಕರು, ಶಿಕ್ಷಕರು ಹಾಗೂ ಬೋಧಕೇತರ ಸಿಬ್ಬಂದಿಗಳ ಸಮೂಹ ತೊಡಗಿಸಿಕೊಂಡಿದ್ದರು. ಶುಚಿತ್ವಕ್ಕಾಗಿ ಮಾಸ್ಕ್, ತಲೆಗವಸು ಹಾಗೂ ಕೈ ಕವಚಗಳನ್ನು ಧರಿಸಿ ಶುಚಿಯ ಜೊತೆಗೆ ರುಚಿಕರ ಉತ್ಪನ್ನಗಳನ್ನು ತಯಾರಿಸುತ್ತಿದ್ದಾರೆ. ಕೊರೋನಾ ಒಂದೆಡೆ ಸಂಕಷ್ಟ ತಂದಿದ್ದರೆ, ಮತ್ತೊಂದೆಡೆ ಬದುಕಿನ ಪಾಠ ಹೇಳಿಕೊಟ್ಟಿದೆ ಎನ್ನುವ ವಾದಕ್ಕೆ ಅಂಬಿಕಾ ವಿದ್ಯಾಲಯದ ಈ ಬಳಗದ ಈ ಪ್ರಯತ್ನವೇ ಸಾಕ್ಷಿಯಾಗಿದೆ. ಅಂಬಿಕಾ ವಿದ್ಯಾಲಯದ ಬಹುತೇಕ ಉದ್ಯೋಗಿಗಳು ಇಲ್ಲಿ ತೊಡಗಿಸಿಕೊಂಡಿದ್ದು, ಬಂದ ಆದಾಯವನ್ನು ತಮ್ಮೊಳಗೆ ಹಂಚಿಕೊಳ್ಳುವ ಬಗ್ಗೆಯೂ ನಿರ್ಧರಿಸಿಕೊಂಡಿದ್ದಾರೆ. ಅಂಬಿಕಾ ವಿದ್ಯಾಸಂಸ್ಥೆ ಯ ಆಡಳಿತ ಮಂಡಳಿಯಿಂದ ಅಗತ್ಯದ ನೆರವನ್ನೂ ಒದಗಿಸಲಾಗಿದ್ದು, ಸಂಸ್ಥೆಯ ಅಧ್ಯಕ್ಷರಾದ ಸುಬ್ರಹ್ಮಣ್ಯ ನಟ್ಟೋಜ ಹಾಗೂ ಪ್ರಾಂಶುಪಾಲೆ ರಾಜಶ್ರೀ ನಟ್ಟೋಜ ರವರೂ ಪೂರ್ಣ ಬೆಂಬಲ ನೀಡುತ್ತಿದ್ದಾರೆ.

 

ಚಾಲನೆ ನೀಡಲಾಗಿದೆ:
ಅಂಬಿಕಾ ವಿದ್ಯಾ ಸಂಸ್ಥೆಯ ಬೋಧಕ ಮತ್ತು ಬೋಧಕೇತರ ವರ್ಗದ ಈ ವಿಶಿಷ್ಟ ಪ್ರಯತ್ನಕ್ಕೆ ಸಂಸ್ಥೆಯ ಅಧ್ಯಕ್ಷ ಸುಬ್ರಹಣ್ಯ ನಟ್ಟೋಜ ಮತ್ತು ಪ್ರಾಂಶುಪಾಲೆ ರಾಜಶ್ರೀ ನಟ್ಟೋಜ ಅವರು ಪೂರ್ಣ ಬೆಂಬಲ ನೀಡಿದ್ದಾರೆ. ಜೂ. ೨೨ರಂದು ಸಂಸ್ಥೆಯ ಅಧ್ಯಕ್ಷರು ಉದ್ಯಮಕ್ಕೆ ಚಾಲನೆ ನೀಡಿದ್ದಾರೆ ಎಂದು ಸಂಸ್ಥೆಯ ಉಪನ್ಯಾಸಕ ಸತೀಶ್ ಕೆ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಈ ಸಂದರ್ಭದಲ್ಲಿ ಅಂಬಿಕಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಶಂಕರನಾರಾಯಣ ಭಟ್ ಉಪಸ್ಥಿತರಿದ್ದರು.

ಆರೋಗ್ಯಕ್ಕೆ ಪುಷ್ಠಿ ನೀಡುವ ಉತ್ಪನ್ನ:

ಆರೋಗ್ಯಕ್ಕೆ ಪುಷ್ಠಿ ನೀಡುವ ಉತ್ನನ್ನಕ್ಕೆ ಆದ್ಯತೆ ನೀಡಲಾಗಿದೆ. ಈಗಾಗಲೇ ಹಲಸಿನ ಕಾಯಿ ಸೋಂಟೆ, ಹಲಸಿನ ಬೀಜದ ಉಂಡೆ, ಲಾಡು ತಯಾರಿಸಲಾಗಿದೆ. ಮುಂದೆ ವಿವಿಧ ರೀತಿಯ ತಿಂಡಿ ತಯಾರಿಕೆ ಮಾಡಲಾಗುತ್ತದೆ – ಮಾಲತಿ ಡಿ, ಉಪಪ್ರಾಂಶುಪಾಲೆ ಅಂಬಿಕಾ ಬಾಲವಿದ್ಯಾಲಯ

ಆರಂಭಿಕ ಹಂತದಲ್ಲಿ ಮಕ್ಕಳ ಪೋಷಕರೇ ಗ್ರಾಹಕರು..
ಶಿಕ್ಷಕರು ನಿರುದ್ಯೋಗಿಗಳಾಗದೆ, ಆರ್ಥಿಕ ಸಂಕಷ್ಟ ದೂರಮಾಡಲು ದಾರಿ ಕಂಡುಕೊಳ್ಳಬೇಕೆಂಬ ಉದ್ದೇಶಕ್ಕೆ ಆರಂಭವಾದ ಈ ಯೋಜನೆಗೆ ಆರಂಭಿಕ ಹಂತದಲ್ಲಿ ವಿದ್ಯಾಲಯದ ಮಕ್ಕಳ ಪೋಷಕರೇ ಗ್ರಾಹಕರಾಗಲಿದ್ದಾರೆ. ಬೇಡಿಕೆಯನ್ನು ಅನುಸರಿಸಿ, ವಿವಿಧ ತರಹದ ತಿಂಡಿಗಳ ಮೂಲಕ ಮತ್ತಷ್ಟು ವಿಸ್ತಾರಗೊಳಿಸುವ ಯೋಚನೆ ಇದೆ. ಶಾಲೆ ಆರಂಭವಾಗುವವರೆಗೆ ನಿರಂತರವಾಗಿ ಶಿವಂ ಫುಡ್ ಪ್ರಾಡಕ್ಟ್ ಮುಂದುವರಿಯುತ್ತದೆ. ಬೇಡಿಕೆ ಇದ್ದಲ್ಲಿ ನಂತರವೂ ಮುನ್ನಡೆಸುವ ಇರಾದೆ ಇದೆ. ಜೊತೆಗೆ ಹೋಮ್‌ಡೆಲಿವರಿ ಮುಂದೆ ಆನ್‌ಲೈನ್ ಮೂಲಕವೂ ಖರೀದಿ ವ್ಯವಸ್ಥೆ ಮಾಡಲಾಗುತ್ತದೆ – ಸತೀಶ್ ಕೆ ಉಪನ್ಯಾಸಕರು ಅಂಬಿಕಾ ಪದವಿಪೂರ್ವ ವಿದ್ಯಾಸಂಸ್ಥೆ

ನಮ್ಮನ್ನು ನಂಬಿಕೊಂಡು ಬಂದವರಿಗೆ ಅನ್ಯಾಯ ಆಗಬಾರದು ಎಂಬ ನೆಲೆಯಲ್ಲಿ ಅವರಿಗೆ ನ್ಯಾಯ ಕೊಡುವ ಕೆಲಸವನ್ನು ಮಾಡುತ್ತಿದ್ದೇವೆ. ಹಣಕಾಸಿನ ಸಂಕಷ್ಟದಿಂದಾಗಿ ಇಡಿ ದೇಶವೇ ಒದ್ದಾಡುತ್ತಿದೆ. ಇಂತಹ ಸಂದರ್ಭದಲ್ಲಿ ಅಂಬಿಕಾ ಸಮೂಹ ವಿದ್ಯಾಸಂಸ್ಥೆಯಲ್ಲಿ ಸುಮಾರು 90  ಮಂದಿ ಶಿಕ್ಷಕರಿದ್ದಾರೆ. ಪ್ರತಿ ತಿಂಗಳು ಅವರಿಗೆ ಸಂಬಳ ಕೊಡಲು ಸಾಧ್ಯವಿಲ್ಲ. ನಮ್ಮ ಪೋಷಕರು ಕೂಡಾ ಶಾಲೆ ಅರಂಭ ಆಗುತ್ತೋ ಇಲ್ಲವೂ ಎಂಬ ಚಿಂತೆಯಿಂದಿದ್ದಾರೆ. ಇಂತಹ ಸಂದರ್ಭದಲ್ಲಿ ಸಂಸ್ಥೆಯನ್ನು ನಡೆಸುವ ದೊಡ್ಡ ಜವಾಬ್ದಾರಿ ನಮ್ಮ ಮೇಲಿದೆ. ನಮ್ಮನ್ನು ನಂಬಿ ಬಂದವರು. ಅಂಬಿಕಾ ಆಶಯದಲ್ಲಿ ಇರುವವರನನು ಕೈ ಬಿಡುವ ಪ್ರಶ್ನೆ ಇಲ್ಲ. ಅವರಿಗೆ ನ್ಯಾಯ ಕೊಡುವ ಕೆಲಸ ಮಾಡುತ್ತಿದ್ದೇವೆ. ಈ ನಿಟ್ಟಿನಲ್ಲಿ ಇಡೀಯ ಅಂಬಿಕಾ ಪರಿವಾರಗಳು ಅವರ ಜೀವನದ ನಡೆಸುವ ಹಣಕಾಸಿನ ವ್ಯವಸ್ಥೆಗಾಗಿ ಹೋಮ್ ಪ್ರೊಡಕ್ಟ್ ಆರಂಭಿಸಲಾಗಿದೆ. ಇದರಿಂದ ಪಾಠ ಶಾಲೆಯೊಂದು ಪಾಕ ಶಾಲೆಯಾಗಿ ಪರಿವರ್ತನೆ ಆಗಿದೆ. ಯಾವಾಗ ಶಾಲೆ ಆರಂಭ ಆಗುತ್ತದೆ ಎಂಬುದು ಗೊತ್ತಿಲ್ಲ. ಹಾಗಾಗಿ ಹೋಮ್ ಪ್ರೋಡಕ್ಟ್‌ಗೆ ಹಿಂದಿನಿಂದ ಪೂರಕ ವ್ಯವಸ್ಥೆ ನಾವು ಕೊಡುತ್ತೇವೆ. ಸಂಸ್ಥೆಯಲ್ಲಿ ಅಗಾದ ಸಂಪನ್ಮೂಲ ವ್ಯವಸ್ಥೆ ಇದೆ. ಈಗಾಗಲೇ ನಮ್ಮ ಟ್ರಸ್ಟ್ ಮೂಲಕ ರೂ. 50ಸಾವಿರ ನೀಡಿದ್ದೇವೆ. ಸುಮಾರು 35 ಸಿಬಂದಿಗಳು ಸೇರಿಕೊಂಡು ಈ ಯೋಜನೆ ರೂಪಿಸಿರುವುದು ಸಂತೋಷದ ವಿಚಾರ. ಅಂಬಿಕಾ ವಿದ್ಯಾಲಯ ಈ ಸ್ವಾವಲಂಬಿ ಯೋಜನೆಗೆ ಪೂರ್ಣ ಬೆಂಬಲನೀಡುತ್ತಿದೆ – ಸುಬ್ರಹ್ಮಣ್ಯ ನಟ್ಟೋಜ ಅಧ್ಯಕ್ಷರು, ಅಂಬಿಕಾ ವಿದ್ಯಾಲಯ, ಪುತ್ತೂರು.

 

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.