ಪುತ್ತೂರು: ಸಹಕಾರ ಸಂಘದಲ್ಲಿ ಉನ್ನತ ಅಧಿಕಾರಿಗಳಿಗೆ ಲಂಚ ಕೊಡಲು ಅನಧಿಕೃತ ಹಣ ಸಂಗ್ರಹ ಮಾಡುತ್ತಿದ್ದಾರೆ. ರೈತರಿಗೆ ಸಹಾಯ ಮಾಡುವ ಕಾನೂನು ನೆಪ ಹೇಳಿ ಜಾರಿಕೊಳ್ಳುತ್ತಿದ್ದಾರೆ. ಜೂ. 30ರೊಳಗೆ ಜಿಲ್ಲಾಡಳಿತ ಸ್ಪಷ್ಟನೆ ಕೊಡದಿದ್ದರೆ ಸಹಕಾರಿ ಸಂಘ ಉನ್ನತ ಕಛೇರಿ ಎದುರು ಪ್ರತಿಭಟನೆ ಮಾಡುತ್ತೇವೆ ಎಂದು ಮಲೆನಾಡು ಜನಹಿತ ರಕ್ಷಣಾ ವೇದಿಕೆ ಜಿಲ್ಲಾ ಸಂಚಾಲಕ ಕಿಶೋರ್ ಶಿರಾಡಿ ಅವರು ಪತ್ರಿಕಾಗೋಷ್ಠಿ ಮೂಲಕ ಎಚ್ಚರಿಕೆ ನೀಡಿದ್ದಾರೆ.
ರೈತರಿಗೆ ಮೌಕಿಕ ರಿಲ್ಯಾಕ್ಸ್ ಬೇಡ. ಅಧಿಕೃತ ರಿಲ್ಯಾಕ್ಸ್ ಬೇಕು ಎಂದ ಅವರು ರೈತರಿಗೆ ಕೃಷಿ ನಾಶಕ್ಕೆ ಪರಿಹಾರ ಸಿಕ್ಕಿಲ್ಲ ಸಾಲ ಮನ್ನಾ ಆಗಿ 3 ವರ್ಷ ಆದರೂ ಶೇ.50ಜನರಿಗೆ ಬರಲಿಲ್ಲ. ರೈತರ ಸಮಸ್ಯೆಯನ್ನು ಬಗೆಹರಿಸುವವರಿಲ್ಲ. ಸಹಕಾರ ಸಂಘದದಲ್ಲಿ ಲಂಚಕ್ಕಾಗಿ ಹಣ ಸಂಗ್ರಹ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಈ ನಡುವೆ ರೈತರ ಅಲ್ಪಾವಧಿ, ದೀರ್ಘವಾಧಿ ಬೆಳೆ ಸಾಲ ಕೃಷಿಗೆ ಸಂಬಂಧಿಸಿದ ಇನ್ನಿತರ ಸಾಲಗಳ ಬಗ್ಗೆ ಸಹಕಾರಿ ಸಂಘ, ಸಹಕಾರಿ ಬ್ಯಾಂಕ್ ಮತ್ತು ರಾಷ್ಟ್ರೀಕೃತ ಬ್ಯಾಂಕಿನಲ್ಲಿ ಇರುವ ಬೆಳೆ ಸಾಲರಗಳನ್ನು ಜೂ.30ಕ್ಕೆ ಕಂತು ಕಟ್ಟಲು ಇದ್ದ ಅವಧಿಯನ್ನು ಆಗೋಸ್ತು 31ರ ತನಕ ಅವಧಿಯನ್ನು ವಿಸ್ತರಣೆ ಮಾಡಿತ್ತು. ಆರ್.ಬಿ.ಐ ಈ ಕುರಿತು ಸುತ್ತೋಲೆಯನ್ನು ಪ್ರತಿ ಬ್ಯಾಂಕ್ಗೆ, ಸಹಕಾರಿ ಸಂಘಗಳಿಗೆ ಕಳುಹಿಸಿತ್ತು. ಆದರೆ ಇದನ್ನು ಯಾವುದೇ ಬ್ಯಾಂಕಿನ ಅಧಿಕಾರಿಗಳು ನೊಟೀಸ್ ಬೋರ್ಡ್ನಲ್ಲಿ ಹಾಕದೆ ರೈತರ ಸಾಲಕ್ಕೆ ನಿಂತ ಜಮೀನುದಾರರ ಮೂಲಕ ರೈತರಿಗೆ ಬಾಕಿ ಕಂತು ಕಟ್ಟಲು ಒತ್ತಡ ಹಾಕುತ್ತಿದ್ದಾರೆ. ಕೊರೋನಾ ಸೋಂದು ದೈಹಿಕ ಹಿಂಸೆಯಾದರೆ ಬ್ಯಾಂಕಿನವರಿಂದ ಮಾನಸಿಕ ಹಿಂಸೆ ಆಗಿದೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ರೈತರ ಸಮಸ್ಯೆಗಳಿಗೆ ಸ್ಪಷ್ಟನೆ ನೀಡಬೇಕು ಎಂದು ಅವರು ಆಗ್ರಹಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಲೆನಾಡು ಜನಹಿತ ರಕ್ಷಣಾ ವೇದಿಕೆ ಜಿಲ್ಲಾ ಸಮಿತಿ ಸದಸ್ಯರಾದ ಡಿ.ಆರ್ ಬಾಲಕೃಷ್ಣ ಶಿರಾಡಿ, ಕೆ.ಪಿ.ವಿಜಯ ಶೀರಾಡಿ ಉಪಸ್ಥಿತರಿದ್ದರು.