HomePage_Banner
HomePage_Banner
HomePage_Banner
HomePage_Banner

ಜೂ.25ರಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆ : ಶಿಕ್ಷಣ ಇಲಾಖೆಯಿಂದ ಸಕಲ ಸಿದ್ಧತೆ | ಈ ಬಾರಿ ಪರೀಕ್ಷೆ ಬರೆಯಲಿದ್ದಾರೆ 5007 ವಿದ್ಯಾರ್ಥಿಗಳು

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ೧೨ ಪರೀಕ್ಷಾ ಕೇಂದ್ರ
  • ೩೫೬ ಸಿಬ್ಬಂದಿಗಳು
  • ೧ ಉಪಕೇಂದ್ರ, ೩ ಹೆಚ್ಚುವರಿ ಕೇಂದ್ರ
  • ಕೇಂದ್ರದ ಸುತ್ತ ೧೪೪ ಸೆಕ್ಷನ್
  • ವಿದ್ಯಾರ್ಥಿಯ ಖಾತ್ರಿಗೆ ನೋಡೆಲ್ ಶಿಕ್ಷಕರು

 

ಪುತ್ತೂರು:ಕೊರೋನಾ ಲಾಕ್‌ಡೌನ್‌ನಿಂದಾಗಿ ಮುಂದೂಡಲ್ಪಟ್ಟ ೨೦೧೯-೨೦ನೇ ಶೈಕ್ಷಣಿಕ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯು ಜೂ.೨೫ರಿಂದ ನಡೆಯಲಿದ್ದು ಶಿಕ್ಷಣ ಇಲಾಖೆ ಸಕಲ ಸಿದ್ದತೆಗಳನ್ನು ಮಾಡಿಕೊಂಡಿದೆ. ಈ ಬಾರಿ ತಾಲೂಕಿನಲ್ಲಿ ಒಟ್ಟು ೫೦೦೭ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಒಟ್ಟು ೧೨ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಸಿ. ಮಾಹಿತಿ ನೀಡಿದ್ದಾರೆ.

ಪರೀಕ್ಷೆಯು ಪ್ರತಿ ದಿನ ಬೆಳಿಗ್ಗೆ ೧೦.೩೦ಕ್ಕೆ ಪ್ರಾರಂಭಗೊಳ್ಳಲಿದೆ. ಪರೀಕ್ಷೆ ಪ್ರಾರಂಭವಾಗುವ ಕನಿಷ್ಠ ೨ ಗಂಟೆಗೆ ಮುಂಚಿತವಾಗಿ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಗಳಲ್ಲಿ ಹಾಜರಿರಬೇಕು. ಪ್ರತಿ ವಿದ್ಯಾರ್ಥಿಗಳು ಮಾಸ್ಕ್ ಧರಿಸಿಯೇ ಪರೀಕ್ಷಾ ಕೇಂದ್ರಗಳಿಗೆ ಆಗಮಿಸಬೇಕು. ಇದಕ್ಕಾಗಿ ಪ್ರತಿ ವಿದ್ಯಾರ್ಥಿಗಳಿಗೆ ೩ ಸೆಟ್ ಮಾಸ್ಕ್‌ಗಳನ್ನು ವಿತರಿಸಲಾಗಿದೆ. ಪ್ರತಿ ಕೇಂದ್ರಗಳಿಗೂ ೨೦೦ ವಿದ್ಯಾರ್ಥಿಗಳಿಗೆ ೧ರಂತೆ ಥರ್ಮಲ್ ಸ್ಕ್ರೀನಿಂಗ್ ಒದಗಿಸಲಾಗುವುದು. ವಿದ್ಯಾರ್ಥಿಗಳನ್ನು ಥರ್ಮಲ್ ಸ್ಕ್ರೀನಿಂಗ್ ಬಳಿಕವೇ ಕೇಂದ್ರದ ಒಳಗೆ ಕಳುಹಿಸಿಕೊಡಲಾಗುವುದು. ಅಲ್ಲದೆ ಪರೀಕ್ಷೆ ಂಡುಹೋಗಲು ಅವಕಾಶವಿದೆ. ಪ್ರತಿ ಕೊಠಡಿಗಳಿಗೂ ಪ್ರತ್ಯೇಕ ಸ್ಯಾನಿಟೈಸರ್ ಒದಗಿಸಲಾಗುವುದು. ಪರೀಕ್ಷಾ ಕೇಂದ್ರ ಹಾಗೂ ಪ್ರತಿ ಕೊಠಡಿಯಲ್ಲೂ ಸಿಸಿ ಕ್ಯಾಮರಾ ಕಣ್ಗಾವಲು ಇರಿಸಲಾಗಿದೆ. ಪ್ರತಿ ದಿನ ಧ್ವನಿ ವರ್ಧಕದ ಮುಖಾಂತರ ಎಲ್ಲಾ ಕೇಂದ್ರಗಳಲ್ಲಿಯೂ ವಿದ್ಯಾರ್ಥಿಗಳಿಗೆ ಮುನ್ನೆಚ್ಚರಿಕಾ ಕ್ರಮಗಳನ್ನು ನೀಡಲಾಗುವುದು ಎಂದು ಲೋಕೇಶ್ ಸಿ. ತಿಳಿಸಿದ್ದಾರೆ.

ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ಆವರಣದಲ್ಲಿ ಸಾಮಾಜಿಕ ಅಂತರಕ್ಕೆ ಮಾರ್ಕ್ ಮಾಡಿರುವುದು.

೧೨ ಕೇಂದ್ರಗಳು: ಕೊಂಬೆಟ್ಟು ಸರಕಾರಿ ಪದವಿ ಪೂರ್ವ ಕಾಲೇಜು, ಸಂತ ಫಿಲೋಮಿನಾ ಪ್ರೌಢ ಶಾಲೆ ದರ್ಬೆ, ಸರಕಾರಿ ಪದವಿ ಪೂರ್ವ ಕಾಲೇಜು ಉಪ್ಪಿನಂಗಡಿ, ಸೈಂಟ್ ವಿಕ್ಟರ್‍ಸ್ ಪುತ್ತೂರು, ಸರಕಾರಿ ಪ್ರೌಢ ಶಾಲೆ ಕಡಬ, ಸೈಂಟ್ ಜಾರ್ಜ್ ಪ್ರೌಢ ಶಾಲೆ ನೆಲ್ಯಾಡಿ, ರಾಮಕುಂಜೇಶ್ವರ ಪ್ರೌಢ ಶಾಲೆ ರಾಮಕುಂಜ, ಕರ್ನಾಟಕ ಪಬ್ಲಿಕ್ ಸ್ಕೂಲ್ ಕುಂಬ್ರ, ಕ್ನಾನಾಯ ಜ್ಯೋತಿ ಆಂಗ್ಲ ಮಾಧ್ಯಮ ಶಾಲೆ ಕಡಬ, ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ತೆಂಕಿಲ, ವಿದ್ಯಾರಶ್ಮಿ ಆಂಗ್ಲ ಮಾಧ್ಯಮ ಶಾಲೆ ಸವಣೂರು, ಶ್ರೀ ಗಜಾನನ ಆಂಗ್ಲ ಮಾಧ್ಯಮ ಶಾಲೆ ಈಶ್ವರಮಂಗಲ ಪರೀಕ್ಷಾ ಕೇಂದ್ರಗಳನ್ನಾಗಿ ಮಾಡಲಾಗಿದ್ದು ಇಲ್ಲಿ ಪರೀಕ್ಷೆ ನಡೆಯಲಿದೆ. ಇದರ ಜೊತೆಗೆ ಉಪ್ಪಿನಂಗಡಿ ಸೈಂಟ್ ಮೇರಿಸ್ ಆಂಗ್ಲ ಮಾಧ್ಯಮ ಶಾಲೆಯನ್ನು ಉಪಕೇಂದ್ರ ಹಾಗೂ ಸುದಾನ ವಸತಿಯುತ ಶಾಲೆ ನೆಹರುನಗರ, ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ತೆಂಕಿಲ ಹಾಗೂ ಕಡಬ ಸೈಂಟ್ ಆನ್ಸ್ ಆಂಗ್ಲ ಮಾಧ್ಯಮ ಶಾಲೆಯನ್ನು ಹೆಚ್ಚುವರಿ ಕೇಂದ್ರಗಳಾಗಿ ಕಾಯ್ದಿರಿಸಲಾಗಿದೆ. ಪ್ರತಿ ಪರೀಕ್ಷಾ ಕೇಂದ್ರಗಳಲ್ಲಿಯೂ ಒಂದು ವಿಶ್ರಾಂತಿ ಕೊಠಡಿ ಇರಲಿದೆ. ಶಾರೀರಿಕ ತೊಂದರೆಗೆ ಒಳಗಾದ ವಿದ್ಯಾರ್ಥಿಗಳಿಗೆ ಆವಶ್ಯ ಬಿದ್ದರೆ ಪ್ರತ್ಯೇಕವಾಗಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗುವುದು ಎಂದು ತಿಳಿಸಿದ್ದಾರೆ.

೫೦೦೭ ವಿದ್ಯಾರ್ಥಿಗಳು: ಈ ಭಾರಿಯ ಪರೀಕ್ಷೆಯಲ್ಲಿ ತಾಲೂಕಿನಲ್ಲಿ ಒಟ್ಟು ೫೦೦೭ ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯಲಿದ್ದಾರೆ. ಈ ಪೈಕಿ ೨೫೨ ವಿದ್ಯಾರ್ಥಿಗಳು ಹೊರ ತಾಲೂಕುಗಳಲ್ಲಿ ಹಾಗೂ ಹೊರ ತಾಲೂಕುಗಳ ೩೭ ವಿದ್ಯಾರ್ಥಿಗಳು ಈ ತಾಲೂಕಿನಲ್ಲಿ ಪರೀಕ್ಷೆ ಬರೆಯಲಿದ್ದಾರೆ. ಗಡಿ ಭಾಗದಲ್ಲಿರುವ ೧೨ ಶಾಲೆಗಳ ೭೦ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಒಂದು ಕೊಠಡಿಯಲ್ಲಿ ಗರಿಷ್ಟ ೨೦ ವಿದ್ಯಾರ್ಥಿಗಳಂತೆ ತಾಲೂಕಿನಲ್ಲಿ ಒಟ್ಟು ೨೫೩ ಕೊಠಡಿಗಳಲ್ಲಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯುವ ಸಿದ್ಧತೆ ಮಾಡಲಾಗಿದೆ.

೩೫೬ ಸಿಬಂದಿಗಳು: ಪರೀಕ್ಷೆಗೆ ಸಂಬಂಧಿಸಿದಂತೆ ೧೨ ಮುಖ್ಯ ಅಧೀಕ್ಷಕರು, ೧ ಬ್ಲಾಕ್ ಅಧೀಕ್ಷಕ, ೧೨ ಉಪಮುಖ್ಯ ಅಧೀಕ್ಷಕ, ೧೩ ಸ್ಥಾನಿಕ ಜಾಗೃತದಳ ಅಧಿಕಾರಿ, ೧೩ ಮಂದಿ ಮೊಬೈಲ್ ಸ್ವಾಧೀನ ಅಧಿಕಾರಿ, ೧೨ ಪ್ರಶ್ನೆ ಪತ್ರಿಕೆ ಕಸ್ಟೋಡಿಯನ್, ೨೮೨ ಮಂದಿ ಕೊಠಡಿ ಮೇಲ್ವಿಚಾರಕರು, ೫ ಮಂದಿ ಮಾರ್ಗದರ್ಶಿ ಅಧಿಕಾರಿ, ೪ ಮಂದಿ ಶಾಲಾ ಕೋ ಆರ್ಡಿನೇಟರ್, ಓರ್ವ ನೋಡೆಲ್ ಅಧಿಕಾರಿ ಹಾಗೂ ಓರ್ವ ಸಹಾಯವಾಣಿ ನೋಡೆಲ್ ಅಧಿಕಾರಿಯವರು ಸೇರಿದಂತೆ ಒಟ್ಟು ೩೫೬ ಮಂದಿ ಸಿಬಂದಿಗಳು ಕರ್ತವ್ಯ ನಿರ್ವಹಿಸಲಿದ್ದಾರೆ.

ಕೇಂದ್ರದ ಸುತ್ತ ಸೆಕ್ಷನ್ ಜಾರಿ: ಪರೀಕ್ಷೆಯನ್ನು ಸುಸೂತ್ರವಾಗಿ ನಡೆಸುವ ನಿಟ್ಟಿನಲ್ಲಿ ಪರೀಕ್ಷಾ ಕೇಂದ್ರದ ೨೦೦ ಮೀಟರ್ ಆವರಣದಲ್ಲಿ ೧೪೪ ಸೆಕ್ಷನ್ ಜಾರಿಯಲ್ಲಿರಲಿದೆ. ೨೦೦ಮೀಟರ್ ವ್ಯಾಪ್ತಿಯಲ್ಲಿ ಜೆರಾಕ್ಸ್ ಅಂಗಡಿಗಳನ್ನು ಬಂದ್ ಮಾಡಿಸಲಾಗುವುದು. ಪೊಲೀಸ್ ಇಲಾಖೆ ಬ್ಯಾರಿಕೇಡ್ ಅಳವಡಿಸಿ ಭದ್ರತೆ ಒದಗಿಸಲಿದ್ದಾರೆ. ಆರೋಗ್ಯ ಇಲಾಖೆ, ಸ್ಕೌಟ್ಸ್ ಮತ್ತು ಗೈಡ್ಸ್‌ನವರು ಶಿಕ್ಷಣ ಇಲಾಖೆಯೊಂದಿಗೆ ಸಹಕರಿಸಲಿದ್ದಾರೆ.

ಪ್ರತಿ ವಿದ್ಯಾರ್ಥಿಯ ಖಾತ್ರಿ: ಎಲ್ಲಾ ಪರೀಕ್ಷಾ ಕೇಂದ್ರಗಳಿಗೆ ಆಗಮಿಸುವ ವಿದ್ಯಾರ್ಥಿಗಳ ಬಗ್ಗೆ ಖಾತ್ರಿ ಪಡಿಸಿಕೊಳ್ಳಲು ನೋಡೆಲ್ ಶಿಕ್ಷಕರನ್ನು ನೇಮಕ ಮಾಡಲಾಗಿದೆ. ಎಲ್ಲಾ ರೂಟ್‌ಗಳಲ್ಲಿಯೂ ನೋಡೆಲ್ ಶಿಕ್ಷಕರನ್ನು ನಿಯೋಜಿಸಲಾಗುವುದು. ವಿದ್ಯಾರ್ಥಿಗಳು ಆಗಮಿಸಿರುವ ಕುರಿತು ಖಾತ್ರಿ ಪಡಿಸುವುದು ಹಾಗೂ ಪರೀಕ್ಷಾ ಕೇಂದ್ರಗಳಿಗೆ ಆಗಮಿಸಲು ಯಾವುದೇ ಸೌಲಭ್ಯಗಳು ಇಲ್ಲದೆ ಇದ್ದಲ್ಲಿ ನೋಡೆಲ್ ಶಿಕ್ಷಕರ ಮೂಲಕ ಸೌಲಭ್ಯ ಕಲ್ಪಿಸಲಾಗುವುದು. ಇದಕ್ಕಾಗಿ ೩ ಜೀಪು ಹಾಗೂ ೨ ಬಸ್‌ಗಳನ್ನು ಬಳಸಿಕೊಳ್ಳಲಾಗುವುದು.

ವೇಳಾ ಪಟ್ಟಿ: ಜೂ.೨೫ರಿಂದ ಪರೀಕ್ಷೆ ಪ್ರಾರಂಭಗೊಳ್ಳಲಿದ್ದು ಪ್ರಾರಂಭ ದಿನವಾದ ಜೂ.೨೫ರಂದು ದ್ವಿತೀಯ ಭಾಷೆ ಇಂಗ್ಲಿಷ್/ಕನ್ನಡ, ಜೂ.೨೭ರಂದು ಗಣಿತ, ಜೂ.೨೯ರಂದು ವಿಜ್ಞಾನ, ಜು.೧ ಸಮಾಜ ವಿಜ್ಞಾನ, ಜು.೨ ಪ್ರಥಮ ಭಾಷೆ ಕನ್ನಡ/ಸಂಸ್ಕೃತ/ ಹಾಗೂ ಜು.೩ರಂದು ತೃತೀಯ ಭಾಷೆ ಹಿಂದಿ/ಕನ್ನಡ/ ಇಂಗ್ಲಿಷ್ ಪರೀಕ್ಷೆಗಳು ನಡೆಯಲಿದೆ.

ಸಾಮಾಜಿಕ ಅಂತರಕ್ಕೆ ಆದ್ಯತೆ ನೀಡಿ
ಕೊರೋನಾ ವೈರಸ್‌ನಿಂದ ರಕ್ಷಿಸಿಕೊಳ್ಳುವ ನಿಟ್ಟಿನಲ್ಲಿ ಎಲ್ಲಾ ಕೇಂದ್ರದಲ್ಲೂ ಪ್ರತಿಯೊಬ್ಬ ವಿದ್ಯಾರ್ಥಿಗಳು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲು ಪ್ರಥಮ ಆದ್ಯತೆ ನೀಡಬೇಕು. ವಿದ್ಯಾರ್ಥಿಗಳು ಮಾಸ್ಕ್ ಧರಿಸಿಯೇ ಪರೀಕ್ಷಾ ಕೇಂದ್ರಗಳಿಗೆ ಆಗಮಿಸಬೇಕು. ಸ್ಯಾನಿಟೈಸರ್ ಬಳಕೆ ಮಾಡಿಕೊಳ್ಳಬೇಕು. ಸಾಮಾಜಿಕ ಅಂತರ ಕಾಪಾಡಿಕೊಳ್ಳವುದು ಪ್ರಧಾನವಾಗಿದ್ದು ಇದರ ಕುರಿತು ಪೋಷಕರು ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವಂತೆ ಶಿಕ್ಷಣಾಧಿಕಾರಿಗಳು ಮನವಿ ಮಾಡಿದ್ದಾರೆ.

ಆತಂಕ ಬೇಡ- ಧೈರ್ಯದಿಂದಿರಿ
ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ಸುಸೂತ್ರವಾಗಿ ನಡೆಸುವ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ಸಾಕಷ್ಟು ಮುಂಜಾಗ್ರತ ಕ್ರಮಗಳನ್ನು ಕೈಗೊಂಡಿದೆ. ಜನಪ್ರತಿನಿಧಿಗಳು, ಇಲಾಖೆ ಮೇಲಾಧಿಕಾರಿಗಳ ನಿರ್ದೇಶನ ಪಡೆದುಕೊಳ್ಳಲಾಗಿದೆ. ವಿದ್ಯಾರ್ಥಿಗಳು ಹಾಗೂ ಪೋಷಕರು ಯಾವುದೇ ರೀತಿಯ ಒತ್ತಡ ಆತಂಕಗಳಿಗೆ ಒಳಗಾಗಬೇಡಿ. ಆತ್ಮ ವಿಶ್ವಾಸದಿಂದಿರಿ. ಪ್ರತಿಯೊಬ್ಬ ವಿದ್ಯಾರ್ಥಿಗಳು ದೈರ್ಯದಿಂದ ಪರೀಕ್ಷೆ ಬರೆಯಲು ತಯಾರಾಗಿ. ಯಾವುದೇ ಗೊಂದಲ, ಸಮಸ್ಯೆ, ಸಲಹೆಗಳು ಬೇಕಾಗಿದ್ದಲ್ಲಿ ಸಹಾಯವಾಣಿ ನಂಬರ್(೨೩೦೮೨೭)ಗೆ ಕರೆಮಾಡಿ ಪರಿಹರಿಸಿಕೊಳ್ಳಬಹುದು ಲೋಕೇಶ್ ಕ್ಷೇತ್ರ ಶಿಕ್ಷಣಾಧಿಕಾರಿ

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.