HomePage_Banner
HomePage_Banner
HomePage_Banner

ಬನ್ನೂರು ಪತ್ನಿಯ ಮನೆಗೆ ಬಂದಾತನಿಗೆ ಕೊರೋನಾ ದೃಢ! ನಗರಸಭೆ ವ್ಯಾಪ್ತಿಯಲ್ಲಿ 2ನೇ ಪ್ರಕರಣ ದಾಖಲು

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಮೂಲತಃ ಬನ್ನೂರು ನಿವಾಸಿಯಾಗಿದ್ದು ಕಂಬಳಬೆಟ್ಟುವಿನಲ್ಲಿ ವಾಸ್ತವ್ಯ ಹೊಂದಿರುವ ವ್ಯಕ್ತಿಯೊಬ್ಬರಿಗೆ ಕೊರೋನಾ ದೃಢಪಟ್ಟಿದೆ. ಇದೀಗ ನಗರಸಭಾ ವ್ಯಾಪ್ತಿಯಲ್ಲೇ 2ನೇ ಪ್ರಕರಣ ದಾಖಲಾಗಿರುವುದು ಆತಂಕ ಹೆಚ್ಚಾಗಿದೆ.


ಕಂಬಳೆಬೆಟ್ಟುವಿಲ್ಲಿ ವಾಸ್ತವ್ಯ ಇರುವ 42 ವರ್ಷ ಪ್ರಾಯದ ಪೈಂಟರ್ ಒಬ್ಬರಿಗೆ ಕೊರೋನಾ ದೃಢಪಟ್ಟಿದ್ದು, ಅವರು ಬನ್ನೂರು ಚೆಲುವಮ್ಮನ ಕಟ್ಟೆಯ ಬಳಿ ತನ್ನ ಮೂಲ ಮನೆಗೆ ಬಂದಿದ್ದರು. ಈ ಸಂದರ್ಭ ಅವರು ಜ್ವರ ಶೀತ ಬಾಧೆಯೆಂದು ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ತೆರಳಿದ್ದರು. ಅಲ್ಲಿ ಅವರ ಗಂಟಲ ದ್ರವ ಮಾದರಿಯನ್ನು ಸಂಗ್ರಹಿಸಿ ಕೋವಿಡ್ ಪರೀಕ್ಷೆಗಾಗಿ ಮಂಗಳೂರು ವೆನ್‌ಲಾಕ್ ಆಸ್ಪತ್ರೆಗೆ ಕಳುಹಿಸಲಾಗಿತ್ತು. ಇದೀಗ ವರದಿಯಲ್ಲಿ ವ್ಯಕ್ತಿಗೆ ಕೊರೋನಾ ಸೋಂಕು ದೃಢಪಟ್ಟಿರುವ ವರದಿ ಬಂದಿದ್ದು, ವ್ಯಕ್ತಿಯನ್ನು ಮಂಗಳೂರು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ವ್ಯಕ್ತಿಯ ಮೂಲ ಮನೆಯಲ್ಲಿ ಪತ್ನಿ ಮತ್ತು ಆಕೆಯ 10 ದಿನದ ಮಗು ಸೇರಿದಂತೆ ಸುಮಾರು ೧೦ ಮಂದಿಯನ್ನು ಮನೆಯಲ್ಲೇ ಹೋಮ್ ಕೊರಂಟೈನ್ ಮಾಡಲಾಗಿದೆ ಎಂದು ತಿಳಿದು ಬಂದಿದೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.