Home_Page_Advt
Home_Page_Advt
Home_Page_Advt

ರೈತರನ್ನು ಬಂಡವಾಳ ಶಾಹಿಗಳ ಗುಲಾಮರನ್ನಾಗಿ ಮಾಡಿದರೆ ರಾಜ್ಯಾದ್ಯಂತ ಹೋರಾಟ

Puttur_Advt_NewsUnder_1
Puttur_Advt_NewsUnder_1
  • ಎಸ್‌ಡಿಪಿಐ ಪ್ರತಿಭಟನೆಯಲ್ಲಿ ಇಕ್ಬಾಲ್ ಬೆಳ್ಳಾರೆ ಎಚ್ಚರಿಕೆ

ಪುತ್ತೂರು: ಸರಕಾರ ಇವತ್ತು ಜನ ವಿರೋಧಿ ನೀತಿ ಮಾಡುತ್ತಿದೆ. ರೈತರ ಫಲವತ್ತಾದ ಕೃಷಿ ಭೂಮಿಯನ್ನು ದೊಡ್ಡ ದೊಡ್ಡ ಬಂಡವಾಳ ಶಾಹಿಗಳು ಖರೀದಿಸುವಂತೆ ಭೂಸುಧಾರಣೆ ಕಾಯ್ದೆಯ ಲಾಭಿಗೆ ಸರಕಾರ ಮಣಿದಿದೆ. ಇದನ್ನು ಎಸ್‌ಡಿಪಿಐ ಉಗ್ರವಾಗಿ ಖಂಡಿಸುತ್ತದೆ ಮತ್ತು ರೈತರನ್ನು ಬಂಡವಾಳ ಶಾಹಿಗಳ ಗುಲಾಮರನ್ನಾಗಿ ಮಾಡಿದರೆ ರಾಜ್ಯಾದ್ಯಂತ ಹೋರಾಟ ನಡೆಸಲಾಗುವುದು ಎಂದು ಎಸ್‌ಡಿಪಿಐ ಜಿಲಗಕಾರ್ಯದರ್ಶಿ ಇಕ್ಬಾಲ್ ಬೆಳ್ಳಾರೆ ಅವರು ಎಚ್ಚರಿಕೆ ನೀಡಿದ್ದಾರೆ.

ಸರಕಾರ ಜನವಿರೋಧಿ ನೀತಿ ಮಾಡುತ್ತಿದೆ ಎಂದು ಆರೋಪಿಸಿ ಜೂ.೨೪ರಂದು ಎಸ್‌ಡಿಪಿಐ ಪುತ್ತೂರು ವಿಧಾನಸಭಾ ಕ್ಷೇತ್ರದ ವತಿಯಿಂದ ಮಿನಿ ವಿಧಾನ ಸೌಧದ ಬಳಿಕ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು. ರೈತರ ಹಿತಕ್ಕಾಗಿ ೧೯೬೧ ರಂದು ಭೂಸುಧಾರಣೆ ಕಾಯ್ದೆ ಜಾರಿಗೆ ಬಂದಿತ್ತು. ಇದರಿಂದಾಗಿ ಕೃಷಿಯೇತರರು ಕೃಷಿ ಭೂಮಿಯನ್ನು ಖರೀದಿಸಲು ಆಗುತ್ತಿರಲಿಲ್ಲ. ಇದರಿಂದ ದೊಡ್ಡ ಕೈಗಾರಿಕೆ ಉದ್ಯಮಿಗಳು ತೊಂದರೆ ಆಗುತ್ತದೆ ಎಂದು ಇವತ್ತು ರಾಜ್ಯ ಸರಕಾರ ರೈತರ ಜಮೀನುಗಳನ್ನು ಸುಲಭವಾಗಿ ಕೃಷಿಯೇತರರು ಖರೀದಿ ಮಾಡುವಂತೆ ಭೂಸುಧಾರಣೆ ಕಾಯ್ದೆಗೆ ತಿದ್ದುಪಡಿ ಮಾಡುವ ಪ್ರಕ್ರಿಯೆಗೆ ಮುಂದಾಗಿದೆ. ಒಂದು ವೇಳೆ ಬಂಡವಾಳಶಾಹಿಗಳು ರೈತರ ಭೂಮಿ ಖರೀದಿಸಿದರೆ ಮುಂದೆ ರೈತರು ಬಂಡವಾಳಶಾಹಿಗಳ ಗುಲಾಮರಾಗಲಿದ್ದಾರೆ. ಇದರಿಂದ ದೇಶದ ಕೃಷಿ ಚಟುವಟಿಕೆಯೂ ಕುಂಠಿತವಾಗುತ್ತದೆ ಎಂದು ಅವರು ಹೇಳಿದರು.

ಆರೋಗ್ಯದ ವಿಚಾರದಲ್ಲೂ ರಾಜಕೀಯ:
ಕೊರೋನಾ ಚಿಕಿತ್ಸಾ ವಿಚಾರವಾಗಿ ಸರಕಾರ ಖಾಸಗಿ ಆಸ್ಪತ್ರೆಗಳೊಂದಿಗೆ ಲಾಭಿ ಮಾಡುವ ಕೆಲಸ ಆಗಿದೆ. ಬಡವರಿಗೆ ದುಬಾರಿ ಹಣ ಕೊಟ್ಟು ಚಿಕಿತ್ಸೆ ಪಡೆಯಲು ಸಾಧ್ಯವಿಲ್ಲ ಎಂದ ಇಕ್ಬಾಲ್ ಬೆಳ್ಳಾರೆ ಅವರು ಆರೋಗ್ಯ ವಿಚಾರದಲ್ಲೂ ಸರಕಾರ ರಾಜಕೀಯ ಮಾಡುವ ತಂತ್ರ ಹೂಡಿದೆ. ರಾಜ್ಯ ಸರಕಾರ ಚಿಕಿತ್ಸಾ ದರ ಕನಿಷ್ಠ ಗೊಳಿಸಬೇಕೆಂದು ಆಗ್ರಹಿಸಿದರು. ಜೊತೆಗೆ ಲಾಕ್ ಡೌನ್ ಸಂದರ್ಭದಲ್ಲಿ ಜನರು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದು, ಇಂತಹ ಸಂದರ್ಭದಲ್ಲಿ ಅವರಿಎ ೨ ತಿಂಗಳ ವಿದ್ಯುತ್ ಬಿಲ್ ಮನ್ನಾ ಮಾಡಬೇಕು ಮತ್ತು ಪ್ರೆಟ್ರೋಲ್, ಡಿಸೇಲ್ ಬೆಲೆ ಇಲಿಸಬೇಕೆಂದು ಪ್ರತಿಭಟನೆಯಲ್ಲಿ ಆಗ್ರಹಿಸಲಾಯಿತು. ಎಸ್‌ಡಿಪಿಐ ಪುತ್ತೂರು ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಸಿದ್ದೀಕ್ ಎ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಅಶ್ರಫ್ ಬಾವು, ಉಪಾಧ್ಯಕ್ಷ ಇಬ್ರಾಹಿಂ ಸಾಗರ್, ನಗರ ಪ್ರಧಾನ ಕಾರ್ಯದರ್ಶಿ ಇಫಾಸ್ ಬನ್ನೂರು, ಕೂರ್ನಡ್ಕ ಮಸೀದಿ ಅಧ್ಯಕ್ಷ ಕೆ.ಎಚ್ ಕಾಸಿಂ ಸೇರಿದಂತೆ ಹಲವಾರು ಮಂದಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಶಾಕೀರ್ ಅಳಕೆಮಜಲು ಸ್ವಾಗತಿಸಿ, ಎಸ್‌ಡಿಟಿಯು ಅಧ್ಯಕ್ಷ ಹಮೀದ್ ಸಾಲ್ಮರ ವಂದಿಸಿದರು. ಎಸ್‌ಡಿಪಿಐ ನಗರ ಅಧ್ಯಕ್ಷ ಬಶೀರ್ ಕೂರ್ನಡ್ಕ ಕಾರ್ಯಕ್ರಮ ನಿರೂಪಿಸಿದರು. ಪ್ರತಿಭಟನೆ ಬಳಿಕ ಸಹಾಯಕ ಕಮೀಷನರ ಕಚೇರಿ ಮೂಲಕ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.