HomePage_Banner
HomePage_Banner
HomePage_Banner
Breaking News

ಸ್ವಾವಲಂಬಿ, ಸ್ವಾಭಿಮಾನಿ, ಸ್ವ-ಸಾಮರ್ಥ್ಯದ ಬದುಕು ಕೊಡುವ ಗುರಿ | ಜು.1ರಿಂದ ವಿವೇಕಾನಂದ ಪಾಲಿಟೆಕ್ನಿಕ್‌ನಲ್ಲಿ ಉದ್ಯೋಗ ನೈಪುಣ್ಯ ತರಬೇತಿ ಶಿಬಿರ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಕೊರೋನಾ ಸಂಕಟದ ಸವಾಲನ್ನು ಅವಕಾಶವಾಗಿ ಬಳಸಿಕೊಂಡು ಸ್ವಾವಲಂಬಿ, ಸ್ವಾಭಿಮಾನಿ, ಸ್ವ-ಸಾಮರ್ಥ್ಯದ ಬದುಕನ್ನು ಕಟ್ಟಿಕೊಂಡು ಸಾವಿರಾರು ಜನರಿಗೆ ಉದ್ಯೋಗಾವಕಾಶವನ್ನು ಕಲ್ಪಿಸಿಕೊಡಬೇಕು ಎಂಬ ಉದ್ದೇಶದಿಂದ ಗ್ರಾಮವಿಕಾಸ ಸಮಿತಿ, ಮಂಗಳೂರು ವಿಭಾಗ, ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು ಮತ್ತು ಸಹಕಾರ ಭಾರತಿ ದಕ್ಷಿಣ ಕನ್ನಡ ಜಿಲ್ಲೆಯ ನೇತೃತ್ವದಲ್ಲಿ ಪುತ್ತೂರು ವಿವೇಕಾನಂದ ಪಾಲಿಟೆಕ್ನಿಕ್‌ನಲ್ಲಿ ಜು.1 ರಿಂದ 6ರ ತನಕ ಉದ್ಯೋಗ ನೈಪುಣ್ಯ ತರಬೇತಿ ಶಿಬಿರ ಆಯೋಜಿಸಲಾಗಿದೆ.

 

ಗ್ರಾಮ ವಿಕಾಸ ಸಮಿತಿಯ ಮಂಗಳೂರು ವಿಭಾಗ ಸಂಯೋಜಕ ಪ್ರವೀಣ್ ಸರಳಾಯ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಕಳೆದ ಮೂರು ತಿಂಗಳುಗಳಿಂದ ಜಗತ್ತನ್ನೇ ಕಾಡುತ್ತಿರುವ ಮಹಾಮಾರಿ ‘ಕೊರೋನಾ’ ಸಮಾಜ ಜೀವನದ ಇಡೀ ವ್ಯವಸ್ಥೆಯನ್ನೇ ಅಲ್ಲಾಡಿಸಿದೆ. ಈ ಸಂಕಟದ ಸಂದರ್ಭದಲ್ಲಿ ಜನಸಾಮಾನ್ಯರಲ್ಲಿ ಹೊಸತೊಂದು ಆಶಾಕಿರಣ ಮೂಡಿಸುವ ಪ್ರಯತ್ನಕ್ಕೆ ಗ್ರಾಮ ವಿಕಾಸ ಸಮಿತಿ ಮಂಗಳೂರು ವಿಭಾಗ, ಸಹಕಾರ ಭಾರತಿ ದಕ್ಷಿಣ ಕನ್ನಡ ಜಿಲ್ಲೆ ಹಾಗೂ ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು (ರಿ.) ಇವರ ಸಹಯೋಗದಲ್ಲಿ ಉದ್ಯೋಗ ನೈಪುಣ್ಯ ತರಬೇತಿ ಶಿಬಿರ ನಡೆಯಲಿದೆ. ಈ ಸಂಕಟದ ಸವಾಲನ್ನು ಅವಕಾಶವಾಗಿ ಬಳಸಿಕೊಂಡು ಈ ಉದ್ಯೋಗ ನೈಪುಣ್ಯ ತರಬೇತಿ ಶಿಬಿರ ಆಯೋಜಿಸಲಾಗಿದೆ.

 

14 ವಿಭಿನ್ನ ವಿಷಯದ ತರಬೇತಿ:
ಸ್ವಯಂ ಉದ್ಯೋಗದಲ್ಲಿ ಆಸಕ್ತಿ ಹೊಂದಿರುವ ಕೊಡಗು, ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು ಜಿಲ್ಲೆಗಳ ಯುವಕ-ಯುವತಿಯರಿಗಾಗಿ ೧೪ ವಿಭಿನ್ನ ವಿಷಯಗಳಲ್ಲಿ ೬ ದಿನಗಳ ತರಬೇತಿ ಶಿಬಿರ ನಡೆಯಲಿದೆ. ತಾವು ಕಲಿತ ವಿದ್ಯೆಯನ್ನು ಮುಂದಿನ ದಿನಗಳಲ್ಲಿ ಅವರು ಇನ್ನೂ ಅನೇಕರಿಗೆ ಕಲಿಸಬೇಕೆಂಬುದು ನಮ್ಮ ಆಶಯವಾಗಿದೆ ಎಂದ ಅವರು ಜು.೧ರಂದು ಬೆಳಿಗ್ಗೆ ಪುತ್ತೂರಿನ ಸಹಾಯಕ ಆಯುಕ್ತ ಡಾ. ಯತೀಶ್ ಉಳ್ಳಾಲ್ ತರಬೇತಿ ಶಿಬಿರವನ್ನು ಉದ್ಘಾಟಿಸಲಿದ್ದು, ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ ಭಟ್ ಕಲ್ಲಡ್ಕ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಮಂಗಳೂರು ವಿಭಾಗ ಸಂಘಚಾಲಕ ಗೋಪಾಲ್ ಚೆಟ್ಟಿಯಾರ್ ಪ್ರಧಾನ ಅಭ್ಯಾಗತರಾಗಿರುತ್ತಾರೆ. ಜುಲೈ ೧ ರಿಂದ ಪ್ರಾರಂಭಗೊಂಡು ಜುಲೈ ೬ ರವರೆಗೆ ಪುತ್ತೂರಿನ ನೆಹರು ನಗರದಲ್ಲಿ ವಿವೇಕಾನಂದ ಕ್ಯಾಂಪಸ್‌ನಲ್ಲಿರುವ ವಿವೇಕಾನಂದ ಪಾಲಿಟೆಕ್ನಿಕ್‌ನಲ್ಲಿ ತರಬೇತಿ ನಡೆಯಲಿದೆ. ಪ್ರತಿದಿನ ಬೆಳಿಗ್ಗೆ ೧೦.೦೦ರಿಂದ ಅಪರಾಹ್ನ ೦೪.೦೦ರವರೆಗೆ, ದಿನಕ್ಕೆ ೫ ಗಂಟೆಯಂತೆ ಒಟ್ಟು ೩೦ ಗಂಟೆಗಳ ತರಬೇತಿ ನೀಡಲಾಗುತ್ತಿದೆ. ಆಯಾ ವಿಷಯಗಳ ತಜ್ಞರುಗಳು, ಅನುಭವಿಗಳು ತರಬೇತಿ ನೀಡಲಿದ್ದಾರೆ. ತರಬೇತಿಯ ಅವಧಿಯಲ್ಲಿ ಸ್ವ-ಉದ್ಯೋಗಕ್ಕೆ ಸರ್ಕಾರದಿಂದ ದೊರಕುವ ಸಹಾಯ ಧನ, ಸಾಲ, ಸೌಲಭ್ಯಗಳ ಬಗ್ಗೆ ಮಾಹಿತಿ ಒದಗಿಸಲಾಗುವುದು ಎಂದು ಅವರು ಹೇಳಿದರು.

ತರಬೇತಿ ವಿಷಯಗಳು:
ನೆಲಹಾಸು (ಫ್ಲೋರಿಂಗ್ ವರ್ಕ್), ಪ್ಲಂಬಿಂಗ್ & ಎಲೆಕ್ಟ್ರಿಶಿಯನ್ ವರ್ಕ್, ವಿದ್ಯುತ್ ಉಪಕರಣಗಳ ತರಬೇತಿ (ಮಿಕ್ಸಿ, ಫ್ಯಾನ್, ಗ್ರೈಂಡರ್, ಪಂಪ್, ಸಬ್‌ಮರ್ಸಿಬಲ್ ಇತ್ಯಾದಿ), ಹೈನುಗಾರಿಕೆ ತರಬೇತಿ, ತೆಂಗು, ಅಡಿಕೆ ಮರ ಏರುವ ತರಬೇತಿ, ಫ್ಯಾಬ್ರಿಕೇಶನ್ ಕೆಲಸದ ತರಬೇತಿ, ಫುಡ್ ಟೆಕ್ನಾಲಜಿ (ಆಹಾರದ ಮೌಲ್ಯವರ್ಧನೆ, ಹಪ್ಪಳ, ಸಂಡಿಗೆ ಇತ್ಯಾದಿ ತಯಾರಿಸುವ ಬಗ್ಗೆ ತರಬೇತಿ), ಫ್ಯಾಶನ್ ಡಿಸೈನಿಂಗ್ (ಟೈಲರಿಂಗ್, ಕಸೂತಿ, ಸೀರೆ, ಗೊಂಡೆ, ಎಂಬ್ರಾಯಿಡರಿ). ಹೋಂ ನರ್ಸಿಂಗ್ (ಮನೆಗಳಲ್ಲಿ ವೃದ್ಧರ, ಅಶಕ್ತರ, ಶುಶ್ರೂಷೆ & ಆರೈಕೆ), ಮೊಬೈಲ್ ಫೋನ್ ಸರ್ವಿಸಿಂಗ್, ಸಿಸಿ ಟಿವಿ ಅಳವಡಿಕೆಯ ಬಗ್ಗೆ ತರಬೇತಿ, ಕೃಷಿ ಯಂತ್ರೋಪಕರಣಗಳ ಬಳಕೆ ಹಾಗು ದುರಸ್ಥಿ ತರಬೇತಿ (ಹುಲ್ಲು/ಮರ ಕತ್ತರಿಸುವ ಯಂತ್ರ, ಪವರ್ ಸ್ಪ್ರೇಯರ್ ಇತ್ಯಾದಿ), ಕಸಿ ಕಟ್ಟುವ ತರಬೇತಿ, ಗ್ರಾಹಕ ಮಾಹಿತಿ ಸೇವಾ ಕೇಂದ್ರದ ನಿರ್ವಹಣಾ ತರಬೇತಿ (ಆಧಾರ್, ಆರ್.ಟಿ.ಸಿ, ಸರ್ಕಾರಿ ಸೌಲಭ್ಯ ಇತ್ಯಾದಿ), ಹೋಮ್ ನರ್ಸಿಂಗ್, ಅಡಿಕೆ ಮತ್ತು ತೆಂಗಿನ ಮರ ಏರುವ ತರಬೇತಿ, ನೆಲಹಾಸು, ಫುಡ್ ಟೆಕ್ನಾಲಜಿ, ಸಿಸಿಟೀವಿ ಅಳವಡಿಕೆ ಹಾಗೂ ಕಸಿ ಕಟ್ಟುವ ತರಬೇತಿ ವಿಷಯಗಳ ನೋಂದಣಿ ಅವಕಾಶವನ್ನು ಜೂನ್ ೨೮ರವರೆಗೆ ವಿಸ್ತರಿಸಲಾಗಿದೆ. ಉಳಿದ ವಿಷಯಗಳ ನೋಂದಣಿಗೆ ಜೂನ್ ೨೫ ಕಡೆಯ ದಿನವಾಗಿದೆ ಎಂದು ಪ್ರವೀಣ್ ಸರಳಾ ಅವರು ಮಾಹಿತಿ ನೀಡಿದರು.

ಶಿಬಿರದ ಪ್ರಯೋಜನ ಪಡೆಯಿರಿ:
16 ವರ್ಷ ಮೇಲ್ಪಟ್ಟ ಸ್ತ್ರೀ ಪುರುಷರು ತರಬೇತಿಗೆ ಅರ್ಹರು. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ ಅಥವಾ ವಿವೇಕಾನಂದ ಪಾಲಿಟೆಕ್ನಿಕ್ ಕಛೇರಿಯಲ್ಲಿಯೂ ನೇರವಾಗಿ ನೋಂದಾಯಿಸಬಹುದು. ರೂ.250/- ಪ್ರತಿನಿಧಿ ಶುಲ್ಕವಿರುತ್ತದೆ. ಮಧ್ಯಾಹ್ನ ಭೋಜನ ವ್ಯವಸ್ಥೆಯನ್ನು ಮಾಡಲಾಗಿದೆ. ಅಗತ್ಯ ಇರುವವರಿಗೆ ಉಚಿತ ವಸತಿ ವ್ಯವಸ್ಥೆ ಇರುತ್ತದೆ. ವಸತಿ ಇರುವವರು ರಾತ್ರಿಯ ಭೋಜನ ಮತ್ತು ಬೆಳಗ್ಗೆಯ ಉಪಹಾರಕ್ಕಾಗಿ ಪ್ರತ್ಯೇಕವಾಗಿ ಪಾವತಿಸಬೇಕಾಗುತ್ತದೆ. ವಸತಿ ಇರುವವರಿಗೆ ಬೆಳಿಗ್ಗೆ ಯೋಗಾಭ್ಯಾಸದ ಅವಕಾಶವಿದ್ದು ಯೋಗದ ಉಡುಪಿನೊಂದಿಗೆ ಬರಬೇಕು. ತರಬೇತಿಯ ನಂತರ ವಿವೇಕಾನಂದ ಪಾಲಿಟೆಕ್ನಿಕ್‌ನಿಂದ ಪ್ರಮಾಣ ಪತ್ರ ನೀಡಲಾಗುತ್ತದೆ. ತರಬೇತಿಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಗಾಗಿ 9591176337, 9448482275, 9448461636 ಸಂಖ್ಯೆಗಳಿಗೆ ಸಂಪರ್ಕಿಸಬಹುದಾಗಿದೆ. ಆಸಕ್ತರು ಶಿಬಿರದ ಉಪಯೋಗ ಪಡೆಯುವಂತೆ ವಿವೇಕಾನಂದ ಪಾಲಿಟೆಕ್ನಿಕ್ ಸಂಚಾಲಕ ಮಹಾದೇವ ಶಾಸ್ತ್ರೀಯವರು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಸಹಕಾರ ಭಾರತಿಯ ತಾಲೂಕು ಅಧ್ಯಕ್ಷ ಕೃಷ್ಣಕುಮಾರ್ ರೈ ಮತ್ತು ತರಬೇತಿಯ ವಿಶೇಷ ಅಧಿಕಾರಿ ವೆಂಕಟೇಶ್ ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.