ಪುತ್ತೂರು: ಕೊರೋನಾ ಮಹಾಮಾರಿಯಿಂದ ಆರ್ಥಿಕ ಸಂಕಷ್ಟದಲ್ಲಿರುವ ಸಮಾಜದ ಬಾಂಧವ ಮಹಿಳೆಯರಿಗೆ ಶಿವಳ್ಳಿ ಸಂಪದ ಮಹಿಳಾ ವಿಭಾಗ ಪುತ್ತೂರು ಸಮಿತಿಯಿಂದ ಆರ್ಥಿಕ ನೆರವು ನೀಡಲಾಯಿತು.
ಶಿವಳ್ಳಿ ಸಂಪದ ಸಮಾಜದ ಆಶಾ ಅಂಗಿಂತಾಯ, ಲೀಲಾ ಕೆದಿಲಾಯ, ಸುನಂದಾ ಮತ್ತು ವಸಂತಿ ಅವರಿಗೆ ನಿವೃತ್ತ ಶಿಕ್ಷಕಿ ರೇವತಿ ಸಾಲ್ಮರ ಅವರು ತಲಾ ರೂ.10ಸಾವಿರದಂತೆ ಆರ್ಥಿಕ ನೆರವು ನೀಡಿದರು. ಇದೇ ಸಂದರ್ಭದಲ್ಲಿ ಮಹಿಳಾ ಸಂಪದದ ಗೌರವಾಧ್ಯಕ್ಷೆ ವತ್ಸಲಾ ರಾಜ್ಞಿ, ಅಧ್ಯಕ್ಷೆ ಪ್ರೇಮಲತಾ ರಾವ್ ಮತ್ತು ಸದಸ್ಯೆ ಶಕುಂತಲಾ ರವರು ಕೂಡಾ ಆರ್ಥಿಕ ನೆರವು ನೀಡಿದರು. ಪ್ರೇಮಲತಾ ರಾವ್ ಸ್ವಾಗತಸಿ, ಕಾರ್ಯದರ್ಶಿ ವೀಣಾ ಕೊಳತ್ತಾಯರು ವಂದಿಸದಿರು. ಸುಧಾ ವಿವಿಧ ಕಾರ್ಯಕ್ರಮ ನಿರ್ವಹಿಸಿದರು.