HomePage_Banner
HomePage_Banner
HomePage_Banner
HomePage_Banner

ಸುರಕ್ಷತಾ ಕ್ರಮಗಳ ಪಾಲನೆಯೊಂದಿಗೆ ಕಾರು ಮಾರಾಟ ಪ್ರಕ್ರಿಯೆ | ಮಾಂಡೋವಿ ಮೋಟಾರ್ಸ್ ಪ್ರೈ.ಲಿ.ಗೆ ಉತ್ತಮ ಪ್ರತಿಕ್ರಿಯೆ

Puttur_Advt_NewsUnder_1
Puttur_Advt_NewsUnder_1

ಕೋವಿಡ್ 19 ವೈರಸ್ ಸೋಂಕಿನಿಂದ ಇಡೀ ದೇಶವೇ ತತ್ತರಿಸಿ ಹೋಗಿದೆ. ಜನರ ಆರೋಗ್ಯದ ಮೇಲೆ ಪರಿಣಾಮ ಬೀರಿರುವುದರ ಜೊತೆಗೆ ಆರ್ಥಿಕವಾಗಿಯೂ ಸಂಕಷ್ಟದ ಹಾದಿಗೆ ತಲುಪಿರುವುದು ಜನಜೀವನವನ್ನೇ ತತ್ತರಿಸಿದಂತಾಗಿದೆ. ಸುಮಾರು ನಲವತ್ತು, ನಲವತ್ತೈದು ದಿನದ ಲಾಕ್‌ಡೌನ್, ಸೀಲ್‌ಡೌನ್ ಪ್ರಕ್ರಿಯೆಗಳು ಇನ್ನು ಹಾಗೆ ಜೀವಂತವಾಗಿದ್ದು ದೇಶವಾಸಿಗಳನ್ನು ಹೈರಣಾಗಿಸಿದೆ. ಸಾರ್ವಜನಿಕ ವಲಯದಲ್ಲಂತೂ ಜನಜೀವನ ತುಂಬಾ ಕಷ್ಟಗಳನ್ನು ಅನುಭವಿಸಿದ್ದು ನಂತರದ ಸುರಕ್ಷತಾ ಅಭಿಯಾನ, ಕೋವಿಡ್೧೯ ವಿರುದ್ಧ ಹೋರಾಡುವ ಮನಸ್ಥಿತಿಯ ಅರಿವು ಮೂಡಿಸುವುದು ಹಾಗೆಯೇ ರೋಗ ಹರಡುವ ಬಗೆಗಿನ ಮಾಹಿತಿಯನ್ನು ಸರಕಾರದ ಜೊತೆಗೆ ಹಲವು ಸಂಘ ಸಂಸ್ಥಗಳು ಗ್ರಾಮೀಣ ಪ್ರದೇಶದಲ್ಲಿ ಹಾಗೆಯೇ ನಗರ ಮತ್ತು ಜನನಿಬಿಡ ಪ್ರದೇಶದಲ್ಲಿಯೂ ನೀಡುತ್ತಾ ತಮ್ಮನ್ನು ತಾವೂ ಹೇಗೆ ಕೋವಿಡ್ ೧೯ ನಿಂದ ರಕ್ಷಿಸಿಕೊಳ್ಳಬೇಕೆಂಬುದರ ಮಾಹಿತಿ ಹಾಗೂ ವೈದ್ಯರ, ಆಶಾಕಾರ್ಯಕರ್ತರ ಪೊಲೀಸು ಮತ್ತು ಕೋವಿಡ್ ವಾರಿಯರ್ಸ್ ರಾತ್ರಿ ಹಗಲು ಕಷ್ಟಪಟ್ಟು ರೋಗದ ನಿಯಂತ್ರಣಕ್ಕೆ ಶ್ರಮಿಸಿದ್ದು ಹಾಗೆಯೇ ನಮ್ಮ ಕಣ್ಣಮುಂದಿದೆ.

ಕೋವಿಡ್೧೯ ವೈರಸ್ ಸೋಂಕಿನಿಂದ ನಮ್ಮನ್ನು ನಾವು ರಕ್ಷಸಿಕೊಳ್ಳಲು ನಾವು ಕೆಲವೊಂದು ಸುರಕ್ಷತಾ ಕ್ರಮಗಳನ್ನು ಅನುಸರಿಸಿಕೊಂಡು ಬರಬೇಕು. ಅವುಗಳೆಂದರೆ ಮುಖ್ಯವಾಗಿ ಬಾಯಿ, ಮೂಗು, ಕಣ್ಣುಗಳ ಮುಖಾಂತರವೇ ವೈರಸ್ ನಮ್ಮ ದೇಹವನ್ನು ಹೊಕ್ಕುವುದರಿಂದ ಮೊದಲನೆಯದಾಗಿ ಮುಖಕ್ಕೆ ಮಾಸ್ಕ್ ಹಾಕಿಕೊಂಡು ಮನೆಯಿಂದ ಹೊರಗೆ ಹೋಗುವುದರ ಜೊತೆಗೆ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಸಹ ಬಹುಮುಖ್ಯವಾದ ಅಂಶವಾಗಿದೆ. ಹಾಗೆಯೇ ವೈರಸ್ ಬಾಹ್ಯವಾಗಿಯೂ ಸುಮಾರು ಗಂಟೆಗಳ ಕಾಲ ಬದುಕಿರುವುದರಿಂದ ಸ್ಯಾನಿಟೈಸರ್ ಬಳಕೆಯು ಸಹ ಅತ್ಯವಶ್ಯಕವಾಗಿದೆ.

ವೈರಸ್ ಹಬ್ಬುವಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದರೂ ಸಹ ಜನಜೀವನವು ಯಥಾಸ್ಥಿತಿಗೆ ನಿಧಾನವಾಗಿ ಮರಳುತ್ತಿದೆ. ವ್ಯಾಪಾರ ವಹಿವಾಟುಗಳು, ಬ್ಯಾಂಕಿಂಗ್‌ಗಳು ತಮ್ಮ ಕಾರ್ಯವನ್ನು ನಿರ್ವಹಿಸುತ್ತಿವೆ. ಜನರ ಪ್ರಯಾಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಶಾಲಾ ಕಾಲೇಜುಗಳು ಸಡಗರ ಸಂಭ್ರಮಗಳು ಶುರುವಾಗದಿದ್ದರೂ ಸಹ ಅಗತ್ಯಕ್ಕಾಗಿ ಪ್ರಯಾಣ, ಕೆಲಸಕ್ಕಾಗಿ ಪ್ರಯಾಣಗಳು ಈಗಾಗಲೇ ಶುರುವಾಗಿದೆ ಮತ್ತು ಸಾರ್ವಜನಿಕ ಸಂಪರ್ಕ ಸಾಧನಗಳು ಈಗಾಗಲೇ ಸರಕಾರದ ಮತ್ತು ಆರೋಗ್ಯ ಇಲಾಖೆಯ ಮಾರ್ಗಸೂಚಿ ಹಾಗೂ ಮುಂಜಾಗ್ರತಾ ಕ್ರಮದ ಪಾಲನೆಯನ್ನು ಮಾಡುತ್ತಾ ಸಾಮಾಜಿಕ ಅಂತರಕ್ಕೆ ದಕ್ಕೆ ಬಾರದಂತೆ ತಮ್ಮ ಸೇವೆಯನ್ನು ನೀಡಲು ಪ್ರಾರಂಭಿಸಿದೆ. ಸರಕಾರಿ ಬಸ್ಸುಗಳು ಹಾಗೆಯೇ ಖಾಸಗಿ ಬಸ್ಸುಗಳು ಸಹ ತಮ್ಮ ಸೇವೆಯನ್ನು ಶುರುಮಾಡಿದೆ. ಆದರೂ ಅತೀ ಹೆಚ್ಚು ಜನರು ಸಾರ್ವಜನಿಕ ಸಂಪರ್ಕ ಸಾರಿಗೆಯಿಂದ ಕೊಂಚ ದೂರ ಉಳಿಯುವ ಪ್ರಯತ್ನವನ್ನು ಮಾಡುತ್ತಿರುವುದು ಮಾತ್ರವಲ್ಲದೆ ತಮ್ಮ ಮಕ್ಕಳ, ಕುಟುಂಬದ ಹಿತದೃಷ್ಟಿಯಿಂದ ತಮ್ಮ ಸ್ವಂತ ವಾಹನದಲ್ಲಿಯೇ ಪ್ರಯಾಣಿಸಲು ನಿರ್ಧರಿಸುವುದರ ಜೊತೆಗೆ ಉತ್ತಮವಾದ ಅಡಿಕೆ ಹಾಗೂ ಕೃಷಿ ಬೆಳೆಗಳ ಬೆಲೆಯಿಂದಾಗಿ ತಮ್ಮ ಚಿತ್ತವನ್ನು ಹೊಸ ಕಾರುಗಳ ಖರೀದಿಯೆಡೆಗೆ ಹರಿಸಿರುವುದರಿಂದ ಕಾರು ಮಾರಾಟದಲ್ಲಿ ಉತ್ತಮ ಪ್ರಕ್ರಿಯೆ ಆರಂಭವಾಗಿದೆ. ಜೂನ್ ತಿಂಗಳಿನಲ್ಲಿ ಹೊಸ ಕಾರುಗಳ ಅನ್ವೇಷಣೆ ಜೋರಾಗಿಯೇ ನಡೆಯುತ್ತಿದೆ. ಇದಕ್ಕೆ ಮುಖ್ಯ ಕಾರಣವೆಂದರೆ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಕಾರು ಸಾಲಗಳಿಗೆ ಉತ್ತೇಜನ ಮತ್ತು ಪ್ರೋತ್ಸಾಹವನ್ನು ನೀಡುತ್ತಿರುವುದು. ಖಾಸಗಿ ಹಾಗೂ ಸಾರ್ವಜನಿಕ ಬ್ಯಾಂಕ್‌ಗಳು ಹಿಂದಿನ ತಮ್ಮ ಬಡ್ಡಿದರವನ್ನು ತಗ್ಗಿಸಿದ್ದು ಹಾಗೆಯೇ ಕಡಿಮೆ ಮುಂಗಡ ಪಾವತಿಯೊಂದಿಗೆ ಸುಲಭ ಕಂತುಗಳಲ್ಲಿ ಸಾಲ ನೀಡುತ್ತಿರುವುದು ಹಾಗೆಯೇ ಸದ್ಯದ ಆರ್ಥಿಕ ಮುಗ್ಗಟ್ಟಿನಿಂದ ಸುಧಾರಿಸಿಕೊಳ್ಳಲು ಮೂರು ಹಾಗೂ ಆರು ತಿಂಗಳ ನಂತರ ಕಂತುಗಳು ಶುರುವಾಗುವುದು. ಉತ್ತಮ ಬ್ಯಾಂಕಿಂಗ್ ವ್ಯವಹಾರ ಇತಿಹಾಸ ಹೊಂದಿರುವವರಿಗೆ ಕಡಿಮೆ ಮುಂಗಡ ಪಾವತಿ ಮತ್ತು ದೀರ್ಘಾವಧಿ ಸಾಲ ಸೌಲಭ್ಯ ಹೀಗೆ ಹತ್ತು ಹಲವು ಯೋಜನೆಗಳನ್ನು ಹಮ್ಮಿಕೊಂಡಿದೆ.

ದೇಶದಲ್ಲಿಯೇ ಅತೀ ಹೆಚ್ಚು ಮಾರುಕಟ್ಟೆ ಶೇರನ್ನು ಹೊಂದಿರುವ ಮಾರುತಿ ಸುಜುಕಿ ಸುಮಾರು ಹತ್ತರಲ್ಲಿ ಆರು ಗ್ರಾಹಕರನ್ನು ತಾನು ವರಿಸಿಕೊಂಡಿದೆ. ಮನೆ ಮನೆಗೆ ಮಾರುತಿ ಎಂಬ ಘೋಷವಾಕ್ಯದೊಂದಿಗೆ ಗ್ರಾಮೀಣ ಪ್ರದೇಶದಲ್ಲಿಯೂ ಸಹ ಅತ್ಯಧಿಕ ಮನೆಗಳನ್ನು ಸಂತುಷ್ಟಗೊಳಿಸಿದ ಕೀರ್ತಿ ಮಾರುತಿ ಸುಜುಕಿ ಕಾರುಗಳಿಗಿದೆ. ಸುಮಾರು ೫೦೦೦ ಕ್ಕಿಂತ ಹೆಚ್ಚು ವರ್ಕ್‌ಶಾಪ್ ಹಾಗೆಯೇ ೩೦೦೦ ಕ್ಕಿಂತ ಹೆಚ್ಚಿನ ಸರ್ವಿಸ್ ಸೆಂಟರ್‌ನ್ನು ಹೊಂದುವ ಉದ್ದೇಶವನ್ನು ಹೊಂದಿರುವ ಮಾರುತಿ ಸುಜುಕಿ ಗ್ರಾಮ ಗ್ರಾಮದಲ್ಲೂ ಸಹ ತನ್ನ ಗ್ರಾಹಕರಿಗೆ ಉತ್ತಮ ಸೇವೆಯನ್ನು ನೀಡುತ್ತಾ ಬರುತ್ತಿದ್ದು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಜನ ಮನ ಗೆಲ್ಲು ಸಜ್ಜಾಗುತ್ತಿದೆ.

ಜೂನ್ ೧೪ನೇ ೧೯೮೪ರಂದು ಕರ್ನಾಟಕದ ಮೊದಲ ಮಾರುತಿ ಸುಜುಕಿ ಡೀಲರ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು ಕರ್ನಾಟಕದ ಜನತೆಗೆ ಮೊದಲ ಮಾರುತಿ ಕಾರುಗಳನ್ನು ನೀಡಿದ ಸಾರ್ಥಕತೆ ಮಾಂಡೋವಿ ಮೋಟಾರ್ಸ್ ಪ್ರೈ.ಲಿ.ಸಂಸ್ಥೆಗಿದೆ.

ಕರ್ನಾಟಕದ ೭ ಜಿಲ್ಲೆಗಳಲ್ಲಿ ಹಾಗಗೆಯೇ ೧೬ ನಗರಗಳಲ್ಲಿ ೨೬ ಶೋರೂಮ್‌ಗಳು, ೩೬ ವರ್ಕ್‌ಶಾಪ್‌ಗಳು, ೭ ಡ್ರೈವಿಂಗ್ ಸ್ಕೂಲ್ ಮತ್ತು ೬ ಹಳೆಯ ಕಾರುಗಳ ಮಾರಾಟ ಟ್ರೂವ್ಯಾಲ್ಯೂಗಳನ್ನು ಹೊಂದಿದ್ದು ದೇಶದಲ್ಲಿಯೇ ಅತೀದೊಡ್ಡ ಮಾರುತಿ ಸುಜುಕಿ ಅಧಿಕೃತ ಮಾರಾಟಗಾರರಲ್ಲಿ ಒಬ್ಬರಾಗಿದ್ದಾರೆ. ಹಾಗೆಯೆ ರಾಜ್ಯದಲ್ಲಿಯೇ ಅತೀ ಹೆಚ್ಚು ಕಾರುಗಳ ಮಾರಾಟಗಾರರಾದ ಮಾಂಡೋವಿ ಮೋಟಾರ್ಸ್ ಪ್ರೈ.ಲಿ. ಸಂಸ್ಥೆಯು ಸ್ಥಳೀಯವಾಗಿ ಉಪ್ಪಿನಂಗಡಿ, ಕಡಬ, ಸುಳ್ಯ, ವಿಟ್ಲ ಹಾಗೂ ಮೆಲ್ಕಾರ್‌ನಲ್ಲಿ ತನ್ನ ಶೋರೂಮ್‌ನ್ನು ಹೊಂದಿದ್ದು ಕೇಂದ್ರ ಕಚೇರಿ ಮಂಗಳೂರಿನ ಹಂಪನಕಟ್ಟೆಯಲ್ಲಿದೆ. ರೂಪಾಯಿ ೫೦ ಸಾವಿರದ ಪಾವತಿಗೆ ಹೊಸ ಮಾದರಿಯ ಆಲ್ಟೋ ಕಾರು ಹಾಗೆಯೇ ರೂ.೬೩ ಸಾವಿರದವರೆಗಿನ ಅಧಿಕ ಉಳಿತಾಯದೊಂದಿಗೆ ಕಡಿಮೆ ಬಡ್ಡಿದರದಿಂದಾಗಿ ಶೇ.೧೦೦ ಸಾಲ ಸೌಲಭ್ಯದ ಅವಕಾಶವೂ ಇದೆ. (ಷರತ್ತುಗಳು ಅನ್ವಯ)

ಮಾಂಡೋವಿ ಮೋಟಾರ್ ಸಂಸ್ಥೆಯು ಕೋವಿಡ್೧೯ ವೈರಸ್ ಸೋಂಕಿನಿಂದ ದೂರವಿರಲು ಆರೋಗ್ಯ ಇಲಾಖೆಯು ಸೂಚಿಸಿದ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿಕೊಂಡು ಕೊರೋನಾ ಸೋಂಕು ಹರಡದಂತೆ ಗ್ರಾಹಕರ ಸುರಕ್ಷತೆಗೆ ಸಾಮಾಜಿಕ ಅಂತರ, ಸ್ಯಾನಿಟೈಸರ್ ಬಳಕೆ, ದೇಹದ ಉಷ್ಣಾಂಶದ ತಪಾಸಣೆ ಮೊದಲಾದ ಸುರಕ್ಷತಾ ಕ್ರಮಗಳನ್ನು ಅನುಸರಿಸಿಕೊಂಡು ಬರುತ್ತಿದ್ದು ಸಂಸ್ಥೆಯು ಗ್ರಾಹಕರಿಗೆ ಉತ್ತಮ ಸೇವೆಯನ್ನು ಒದಗಿಸುತ್ತಿದೆ.

ಶ್ರೀ ಹರ್ಷ ರೈ ಕೆ. ಟೀಂ ಸೇಲ್ಸ್ ಮ್ಯಾನೇಜರ್ ಮಾಂಡೋವಿ ಮೋಟಾರ್ಸ್ ಪ್ರೈ.ಲಿ. ಉಪ್ಪಿನಂಗಡಿ 9845506596
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.