HomePage_Banner
HomePage_Banner
HomePage_Banner
HomePage_Banner

ರಾಜ್ಯ ಸರಕಾರದ ಏಕರೂಪ ಮರಳು ನೀತಿಗೆ ದಕ್ಷಿಣ ಕನ್ನಡ ಮರಳು ಗುತ್ತಿಗೆದಾರರ ವಿರೋಧ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ಹೈಕೋರ್ಟ್ ಮೆಟ್ಟಿಲೇರುವ ಎಚ್ಚರಿಕೆ – ಪುತ್ತೂರಿನಲ್ಲಿ ಗುತ್ತಿಗೆದಾರರ ದ.ಕ., ಉಡುಪಿ ಅವಿಭಜಿತ ಜಿಲ್ಲಾಮಟ್ಟದ ಸಭೆ

ಪುತ್ತೂರು: ರಾಜ್ಯ ಸರಕಾರ ಜಾರಿಗೆ ತಂದಿರುವ ನೂತನ ಮರಳು ನೀತಿಗೆ ದಕ್ಷಿಣಕನ್ನಡ ಮತ್ತು ಉಡುಪಿ ಜಿಲ್ಲೆಗಳ ಮರಳು ಮಾರಾಟಗಾರರಿಂದ ವಿರೋಧ ವ್ಯಕ್ತವಾಗಿದೆ. ಸರಕಾರ ಸರಕಾರಿ ಸೌಮ್ಯದ ಸಂಸ್ಥೆಗೆ ಮರಳು ತೆಗೆಯಲು ಹಾಗೂ ಮಾರಾಟ ಮಾಡಲು ಅವಕಾಶ ನೀಡಿರುವುದು ಸ್ಥಳೀಯ ಮರಳು ಸಂಗ್ರಹಗಾರರ ವಿರೋಧಕ್ಕೆ ಕಾರಣವಾಗಿದೆ. ಸ್ಥಳೀಯರಿಗೆ ಅವಕಾಶ ನೀಡುವಂತೆ ಹೊಸ ಮರಳು ನೀತಿಯಲ್ಲಿ ಬದಲಾವಣೆ ತರದೇ ಇದ್ದಲ್ಲಿ ನ್ಯಾಯಾಲಯದ ಮೆಟ್ಟಿಲೇರಲು ಮರಳು ಗುತ್ತಿಗೆದಾರರು ತೀರ್ಮಾನಿಸಿದ್ದಾರೆ.

ಪುತ್ತೂರು ಎಪಿಎಂಸಿ ಅಧ್ಯಕ್ಷ ದಿನೇಶ್ ಮೆದು ಅವರ ನೇತೃತ್ವದಲ್ಲಿ ಜೂ.24ರಂದು ನಡೆದ ಎಪಿಎಂಸಿ ಪ್ರಾಂಗಣದಲ್ಲಿ ನಡೆದ ದ.ಕ. ಉಡುಪಿ ಅವಿಭಜಿತ ಜಿಲ್ಲಾ ಮರಳು ಗುತ್ತಿಗೆದಾರ ತುರ್ತು ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ರಾಜ್ಯ ಸರಕಾರ ರಾಜ್ಯದೆಲ್ಲಡೆ ಏಕರೂಪದ ಮರಳು ನೀತಿಯನ್ನು ಜಾರಿಗೆ ತಂದಿದೆ. ಇದರ ಜೊತೆಗೆ ಮರಳು ಸಂಗ್ರಹವಾಗುವ ಎಲ್ಲಾ ಭಾಗಗಳ ಮರಳನ್ನು ಸಂಗ್ರಹಿಸುವ ಮತ್ತು ವಿತರಿಸುವುದನ್ನು ಸರಕಾರಿ ಸೌಮ್ಯದ ಸಂಸ್ಥೆಯಾದ ಕರ್ನಾಟಕ ಸ್ಟೇಟ್ ಮೈನಿಂಗ್ ಕಾರ್ಪೋರೇಷನ್ ಗೆ ನೀಡಿದೆ. ಸರಕಾರದ ಈ ನಿರ್ಧಾರಕ್ಕೆ ದಕ್ಷಿಣಕನ್ನಡ ಮತ್ತು ಉಡುಪಿ ಜಿಲ್ಲೆಯ ಮರಳು ಸಂಗ್ರಹಗಾರರು ವಿರೋಧ ವ್ಯಕ್ತಪಡಿಸಿದ್ದಾರೆ. ಈ ಹಿಂದೆ ಇದ್ದ ರಾಜ್ಯ ಸರಕಾರ ಹೊಸ ಮರಳು ನೀತಿಯನ್ನು ಜಾರಿಗೆ ತಂದ ಪ್ರಕಾರ ದಕ್ಷಿಣಕನ್ನಡ ಜಿಲ್ಲೆಯಲ್ಲಿ ೧೫ ಜನರಿಗೆ ೫ ವರ್ಷಗಳ ಅವಧಿಗೆ ಮರಳು ಸಂಗ್ರಹದ ಗುತ್ತಿಗೆಯನ್ನು ನೀಡಲಾಗಿತ್ತು. ಅಲ್ಲದೆ ಮತ್ತೆ ೩೦ ಜನರಿಗೆ ಅವಕಾಶ ನೀಡಲು ಟೆಂಡರ್ ಕೂಡಾ ಕರೆಯಲಾಗಿತ್ತು. ಟೆಂಡರ್ ಹಾಕಿದ ವ್ಯಕ್ತಿಗಳ ಟೆಂಡರ್ ಮರುಪರಿಶೀಲನೆಯ ಕಾರ್ಯವೂ ನಡೆಯುತ್ತಿದ್ದ ಹಂತದಲ್ಲಿ ಸರಕಾರ ಇದೀಗ ಏಕಾಏಕಿ ಹೊಸ ನೀತಿಯನ್ನು ಜಾರಿಗೆ ತಂದಿರುವುದು ಮರಳು ಸಂಗ್ರಹಗಾರರ ಆಕ್ರೋಶಕ್ಕೆ ಕಾರಣವಾಗಿದೆ.

ಹೊಸ ನೀತಿಯ ಕುರಿತು ಮರುಪರಿಶೀಲನೆ ನಡೆಸಲಿ:
ಎಪಿಎಂಸಿ ಅಧ್ಯಕ್ಷ ದಿನೇಶ್ ಮೆದು ಅವರು ಮಾತನಾಡಿ ಸರಕಾರ ತಕ್ಷಣ ಹೊಸ ನೀತಿಯ ಕುರಿತು ಮರುಪರಿಶೀಲನೆ ನಡೆಸಬೇಕು. ಈ ಕುರಿತು ಆರಂಭದಲ್ಲಿ ಶಾಸಕರು, ಸಂಸದರ ಮತ್ತು ಸಚಿವರ ಗಮನಕ್ಕೆ ತಂದು ಸರಕಾರಕ್ಕೆ ಮನವಿ ಸಲ್ಲಿಸಲಾಗುವುದು. ಇದರಿಂದ ಪ್ರಯೋಜನವಾಗದಿದ್ದಲ್ಲಿ ಸರಕಾರ ಮರು ಪರಿಶೀಲನೆ ನಡೆಸುವಂತೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗುವುದು ಎಂದು ಎಂದು ಎಪಿಎಂಸಿ ಅಧ್ಯಕ್ಷ ದಿನೇಶ್ ಮೆದು ತಿಳಿಸಿದ್ದಾರೆ. ಈಗಾಗಲೇ ಈ ಹಿಂದಿನ ನೀತಿಯ ಪ್ರಕಾರ ಮರಳು ಗಾರಿಕೆ ವ್ಯವಹಾರ ಮಾಡಲು ಜಿಲ್ಲೆಯ ೧೫ ಜನ ಗುತ್ತಿಗೆದಾರರು ಐದು ವರ್ಷದ ಲೀಸಿಗೆ ಸುಮಾರು ೧೨ ಲಕ್ಷ ಖರ್ಚು ಮಾಡಿ ಪಡೆದುಕೊಂಡಿದ್ದಾರೆ. ಮುಂದೆ ಈ ಗುತ್ತಿಗೆಯನ್ನು ಜಿಲ್ಲೆಯ ೩೦ ಜನರಿಗೆ ಗುತ್ತಿಗೆ ವಹಿಸಿಕೊಳ್ಳಲು ವಿಸ್ತರಿಸುವ ಕುರಿತು ಪಾಯಿಂಟ್‌ಗಳನ್ನು ಕಂಡು ಹಿಡಿಯಲಾಗಿದೆ. ಈ ನೀತಿ ಹಿಂದಿನಂತೆಯೇ ಇದ್ದು, ಇದೀಗ ಸರಕಾರದ ಹೊಸ ನೀತಿಯ ಪರಿಣಾಮ ಸರಕಾರಿ ಸ್ವಾಮ್ಯಕ್ಕೆ ಒಳಪಟ್ಟವರಿಗೆ ಗುತ್ತಿಗೆ ನೀಡಿದ್ದು, ಹೊರಗಿನವರಿಗೆ ಭಾಗವಹಿಸಲು ಅವಕಾಶವಿಲ್ಲದಂತಾಗಿದೆ. ಈ ಹಿಂದೆ ಪಾರಂಪರಿಕವಾಗಿ ತಮ್ಮ ಪಟ್ಟಾ ಜಾಗದಲ್ಲಿ ಮರಳು ತೆಗೆಯುತ್ತಿದ್ದರು. ಇದಕ್ಕೆ ಕುತ್ತು ಉಂಟಾಗುವ ಸಂದರ್ಭ ಉಂಟಾಗಿದೆ. ತಕ್ಷಣ ಸರಕಾರ ಮರುಪರಿಶೀಲನೆ ನಡೆಸಬೇಕು ಎಂದು ಅವರು ಒತ್ತಾಯಿಸಿದರು.

ಸರಕಾರದ ನೀತಿಯಿಂದ ಮತ್ತೆ ಮರಳಿರನ ಅಭಾವ ಸಾಧ್ಯತೆ:
ಈಗಾಗಲೇ ೫ ವರ್ಷಗಳ ಅವಧಿಗೆ ಮರಳು ಸಂಗ್ರಹದ ಗುತ್ತಿಗೆ ಪಡೆದಿರುವ ಗುತ್ತಿಗೆದಾರ ಅವಧಿ ಮುಗಿಯುವ ಮೊದಲೇ ಸರಕಾರಿ ಸೌಮ್ಯದ ಕಂಪನಿಗೆ ಮರಳು ಸಂಗ್ರಹಕ್ಕೆ ಅವಕಾಶ ನೀಡಲಾಗಿರುವುದು ಮರಳು ಸಂಗ್ರಹಗಾರರಿಗೆ ಮಾಡಿದ ಅನ್ಯಾಯ ಎನ್ನುವುದು ಮರಳು ಸಂಗ್ರಹಗಾರರ ಆರೋಪವಾಗಿದೆ. ಅಲ್ಲದೆ ಜಿಲ್ಲೆಯಲ್ಲಿರುವ ಹೆಚ್ಚಿನ ಮರಳು ದಿಬ್ಬಗಳಿಗೆ ತೆರಳಲು ಇರುವ ಮಾರ್ಗಗಳು ಖಾಸಗಿ ವ್ಯಕ್ತಿಗಳ ಕೈಯಲ್ಲಿದ್ದು, ಇದರಿಂದಲೂ ಸರಕಾರಿ ಕಂಪನಿಗೆ ಮರಳು ಸಂಗ್ರಹ ಕಷ್ಟವಾಗಲಿದೆ. ದಕ್ಷಿಣಕನ್ನಡ ಮತ್ತು ಉ಼ಡುಪಿ ಉಭಯ ಜಿಲ್ಲೆಗಳಲ್ಲಿ ಇದೀಗ ಮರಳು ಸಾರ್ವಜನಿಕರಿಗೆ ಸಾಕಷ್ಟು ದೊರೆಯುತ್ತಿದ್ದು, ಸರಕಾರದ ಈ ಹೊಸ ನೀತಿ ಮರಳಿನ ಅಭಾವವನ್ನು ಮತ್ತೆ ಸೃಷ್ಟಿಸಲಿದೆ ಎಂದು ಮರಳು ಗುತ್ತಿಗೆದಾರರು ಸಭೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದರು.

3 ವರ್ಷ ಅನುಭವಿಯವರಿಗೆ ಅನುಮತಿ ನೀಡಲಿ:
ಬಂಟ್ವಾಳದ ಮರಳು ಗುತ್ತಿಗೆದಾರ ಚಂದ್ರಹಾಸ ಮಾತನಾಡಿ, ಈಗಾಗಲೇ ಸರಕಾರದ ಹೊಸ ನೀತಿಯಿಂದಾಗಿ ತೊಂದರೆ ಉಂಟಾಗಿದೆ. ಈಗಾಗಲೇ ಮರಳುಗಾರಿಕೆ ನಡೆಸುವ ಸ್ಥಳ ಖಾಸಗಿ ಸ್ಥಳವಾಗಿದೆ. ಆದ್ದರಿಂದ ಕಳೆದ ಹಲವಾರು ವರ್ಷಗಳಿಂದ ಪಾರಂಪರಿಕವಾಗಿ ಮರಳುಗಾರಿಗೆ ನಡೆಸುವವರಿಗೆ ಆದ್ಯತೆ ನೀಡಬೇಕು. ಅದರಲ್ಲೂ ಮೂರು ವರ್ಷ ಅನುಭವ ಇರುವವರಿಗೆ ನೀಡಬೇಕು ಎಂದು ಒತ್ತಾಯಿಸಿದರು. ತಾಲೂಕಿನ ಗುತ್ತಿಗೆದಾರರಾದ ಸತೀಶ್ ಬೆಳ್ತಂಗಡಿ, ಭರತ್ ಕಡಬ, ಸುರೇಶ್ ಕಡಬ, ಉದಯ ಕುಮಾರ್ ಕಾರ್ಕಳ, ರಿತೇಶ್ ಮಂಗಳೂರು, ಸುಳ್ಯದ ಜಯರಾಮ್, ಗೋಪಾಲಕೃಷ್ಣ, ಅನಿಲ್, ಬೆಳ್ತಂಗಡಿಯ ಸಂತೋಷ್, ಪ್ರಕಾಶ್, ಪ್ರತೀಶ್, ಇಬ್ರಾಹಿಂ, ಬಂಟ್ವಾಳದ ಚರಣ್ ಸೇರಿದಂತೆ ಕಾರ್ಕಳ ಮತ್ತಿತರ ಕಡೆಗಳಿಂದ ಸುಮಾರು ೨೬ ಮಂದಿ ಸಭೆಯಲ್ಲಿ ಭಾಗವಹಿಸಿದ್ದರು. ರಾಕೇಶ್ ರೈ ಕೆಡೆಂಜಿ ಸಭೆಯ ನಿರ್ಣಯಗಳನ್ನು ದಾಖಲಿಸಿ ಮನವಿ ಪತ್ರ ಸಿದ್ಧತೆ ಮಾಡಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.