HomePage_Banner
HomePage_Banner
HomePage_Banner

ಉಪ್ಪಿನಂಗಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 5 ವರ್ಷಗಳ ಸಾಧನೆ | 15 ಕೋಟಿ ರೂಪಾಯಿ ಅಭಿವೃದ್ಧಿ ಕೆಲಸಗಳು-ಅಬ್ದುಲ್ ರಹಿಮಾನ್

Puttur_Advt_NewsUnder_1
Puttur_Advt_NewsUnder_1
  • 2.20 ಕೋಟಿ ವೆಚ್ಚದಲ್ಲಿ ಗ್ರಾಮ ಪಂಚಾಯಿತಿ ನೂತನ ಕಟ್ಟಡ ನಿರ್ಮಾಣ
  • ಕುಡಿಯುವ ನೀರು ಸಮಸ್ಯೆ ಪರಿಹಾರ
  • ರಾಮಕೃಷ್ಣ ಆಶ್ರಮದ ಸಹಕಾರದೊಂದಿಗೆ “ಸ್ವಚ್ಛ ಉಬಾರ್, ತ್ಯಾಜ್ಯ ಮುಕ್ತ ಊರು” ಯೋಜನೆ ಆರಂಭ
  • ಕೂಟೇಲು ಬಳಿ “ಗಾಂಧಿ ಪಾರ್ಕ್” ಮಾಡುವ ಯೋಜನೆ

ಉಪ್ಪಿನಂಗಡಿ: ಗ್ರಾಮ ಪಂಚಾಯಿತಿ ೫ ವರ್ಷದ ಆಡಳಿತ ಅವಧಿ ಮುಕ್ತಾಯ ಹಂತದಲ್ಲಿದ್ದು, ಕಳೆದ ೫ ವರ್ಷಗಳಿಂದ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಗ್ರಾಮ ಪಂಚಾಯಿತಿ ಸ್ವಂತ ನಿಧಿಯಿಂದ, ಗ್ರಾಮ ಪಂಚಾಯಿತಿಯ ಸರ್ವ ಸದಸ್ಯರ ಮತ್ತು ಗ್ರಾಮಸ್ಥರ ಸಹಕಾರದೊಂದಿಗೆ ವಿವಿಧ ಕಾಮಗಾರಿ ಸೇರಿದಂತೆ ಒಟ್ಟು ಸುಮಾರು ೧೫ ಕೋಟಿ ರೂಪಾಯಿ ಅಭಿವೃದ್ಧಿ ಕೆಲಸಗಳು ನಡೆದಿರುವುದಾಗಿ ಉಪ್ಪಿನಂಗಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ. ಅಬ್ದುಲ್ ರಹಿಮಾನ್ ಹೇಳಿದರು.

೨.೨೦ ಕೋಟಿ ವೆಚ್ಚದಲ್ಲಿ ಗ್ರಾಮ ಪಂಚಾಯಿತಿ ನೂತನ ಕಟ್ಟಡ ನಿರ್ಮಾಣ:
ಅವರು ಜು. ೨೩ರಂದು ಉಪ್ಪಿನಂಗಡಿ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ೫ ವರ್ಷಗಳ ಸಾಧನೆಗಳ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ವಿವರಿಸಿ ಮಾತನಾಡಿದರು. ಗ್ರಾಮ ಪಂಚಾಯಿತಿ ಕಟ್ಟಡ ತೀರಾ ಹಳೆಯದಾಗಿ ಮತ್ತು ತೀರಾ ಚಿಕ್ಕದಾಗಿತ್ತು, ಇದನ್ನು ಕೆಡವಲಾಗಿ ೨.೨೦ ಕೋಟಿ ವೆಚ್ಚದಲ್ಲಿ ನೂತನ ಕಟ್ಟಡ ನಿರ್ಮಿಸಲಾಗಿದೆ. ಉಪ್ಪಿನಂಗಡಿ ಗ್ರಾಮ ಪಂಚಾಯಿತಿ ಕಚೇರಿ ಕಟ್ಟಡ ರಾಜ್ಯದಲ್ಲೇ ಅತೀ ದೊಡ್ಡ ಕಟ್ಟಡ ಎಂಬ ಹೆಗ್ಗಳಿಕೆ ಪಡೆದುಕೊಂಡಿದೆ ಎಂದರು.

ಉಪ್ಪಿನಂಗಡಿ ಗ್ರಾಮ ಪಂಚಾಯಿತಿಗೆ ಆಧಾಯ ಗಳಿಕೆಯ ಉದ್ದೇಶವನ್ನು ಇಟ್ಟುಕೊಂಡು ಹೊಸ ಬಸ್ ನಿಲ್ದಾಣದ ಉತ್ತರ ಭಾಗದಲ್ಲಿ ಮತ್ತು ದಕ್ಷಿಣ ಭಾಗದಲ್ಲಿ ಇದ್ದ ತೀರಾ ಹಳೆಯದಾಗ ಕಟ್ಟಡಗಳನ್ನು ಕೆಡವಲಾಗಿ ೧.೮೦ ಕೋಟಿ ರೂಪಾಯಿ ವೆಚ್ಚದಲ್ಲಿ ೨ ವಾಣಿಜ್ಯ ಸಂಕೀರ್ಣ ರಚನೆ ಮಾಡಲಾಗಿದೆ.

ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ೬ ವಾರ್ಡುಗಳಿದ್ದು, ವಾರ್ಡುವಾರು ಅನುದಾನ ಹಂಚಿಕೆ ಮಾಡಲಾಗಿ ವಾರ್ಡುಗಳಲ್ಲಿ ಕಾಂಕ್ರೀಟ್ ರಸ್ತೆ ಸೇರಿದಂತೆ ಹಲವು ರಸ್ತೆ ಕಾಮಗಾರಿಗಳನ್ನು ನಡೆಸಲಾಗಿದೆ. ಐಮಾಸ್ ಲೈಟ್, ಸೋಲಾರ್ ಲೈಟ್ ಸೇರಿದಂತೆ ಪಂಚಾಯಿತಿ ವ್ಯಾಪ್ತಿಯಲ್ಲಿ ದಾರಿ ದೀಪ ವ್ಯವಸ್ಥೆ ವ್ಯವಸ್ಥಿತವಾಗಿ ಮಾಡಲಾಗಿದೆ ಎಂದು ವಿವರಿಸಿದರು.

ಕುಡಿಯುವ ನೀರು ಸಮಸ್ಯೆ ಪರಿಹಾರ:
ಕಳೆದ ೩ ವರ್ಷಗಳಿಂದ ಜಿಲ್ಲೆಯಾದ್ಯಂತ ಕುಡಿಯುವ ನೀರಿಗೆ ಸಮಸ್ಯೆ ಎದುರಾಗುತ್ತಿತ್ತು, ಆದರೆ ಉಪ್ಪಿನಂಗಡಿಯಲ್ಲಿ ಸಮಸ್ಯೆ ಆಗದ ರೀತಿಯಲ್ಲಿ ಪರಿಹಾರ ಕಂಡುಕೊಳ್ಳಲಾಗಿತ್ತು. ಕೆಲವೊಂದು ಕಡೆ ತೀರಾ ಸಮಸ್ಯೆ ಇದ್ದಂತಹ ನಿನ್ನಿಕಲ್, ಹಿರ್ತಡ್ಕ ಗುಡ್ಡೆ, ಬೊಳ್ಳಾವು, ಕಜೆಕ್ಕಾರು ಅರ್ತಿಲ ರಸ್ತೆ ಬಳಿ, ಶ್ರೀರಾಮ ಶಾಲೆ ಬಳಿ, ನೆಡ್ಚಿಲು ಬಳಿ, ರಾಮನಗರದಲ್ಲಿ ಹೊಸ ಕೊಳವೆ ಬಾವಿ ರಚನೆ ಮಾಡಲಾಗಿದೆ ಎಂದರು.

ವಾಹನ ಪಾರ್ಕಿಂಗ್‌ಗೆ ವ್ಯವಸ್ಥೆ:
ನೆಲ್ಯಾಡಿ, ಉದನೆ, ಶಿರಾಡಿ ಭಾಗಗಳಿಗೆ ಹೋಗುವ ಟೂರಿಸ್ಟ್ ಜೀಪು ನಿಲುಗಡೆಗೆ ಸೂಕ್ತವಾದ ವ್ಯವಸ್ಥೆ ಇರಲಿಲ್ಲಿ, ಅದನ್ನು ಮನಗಂಡು ಜೀಪು ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಪೇಟೆಯೊಳಗೆ ಕೆಲವು ಅಂಗಡಿಗಳವರು ರಸ್ತೆ ಅತಿಕ್ರಮಣ ಮಾಡಿಕೊಂಡಿದ್ದರು, ಅದನ್ನು ತೆರವು ಮಾಡಲಾಗಿ ವಾಹನಗಳ ಸರಾಗ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ. ಇದೀಗ ಮತ್ತೆ ಈ ಸಮಸ್ಯೆ ಕೆಲವರಿಂದ ಮತ್ತೆ ಮುಂದುವರಿದಿದ್ದು, ಅದರ ತೆರವು ಮಾಡಿ ರಸ್ತೆ ಅಗಲೀಕರಣ ಆಗಬೇಕಾಗಿದೆ ಎಂದರು.

ಕೂಟೇಲು ಬಳಿ “ಗಾಂಧಿ ಪಾರ್ಕ್” ಮಾಡುವ ಯೋಜನೆ:
ಇಲ್ಲಿನ ಹೆದ್ದಾರಿ ಬದಿಯಲ್ಲಿ ಗಾಂಧಿ ಪಾರ್ಕು ಇದ್ದುದ್ದು, ಹೆದ್ದಾರಿ ಅಗಲೀಕರಣ ಕಾಮಗಾರಿ ನಡೆಸುವವರು ಅದನ್ನು ತೆರವು ಮಾಡಿದ್ದಾರೆ. ಹೆದ್ದಾರಿ ಕಾಮಗಾರಿ ನಡೆದ ಬಳಿಕ ರಸ್ತೆ ಹಾದು ಹೋಗುವ ದಾರಿಯನ್ನು ನೋಡಿಕೊಂಡು ಕಾಮಗಾರಿ ಮುಗಿದ ಬಳಿಕ ಉಪ್ಪಿನಂಗಡಿ ಗಾಂಧಿಪಾರ್ಕ್ ನೆನಪು ಉಳಿಸುವ ನಿಟ್ಟಿನಲ್ಲಿ ಕೂಟೇಲು ದಡ್ಡು ಬಳಿ ನದಿ ಬದಿಯ ಪ್ರಕೃತಿಯ ಮಡಿಲಿನಲ್ಲಿ “ಗಾಂಧಿ ಪಾರ್ಕ್” ಮಾಡುವ ಯೋಜನೆ ರೂಪಿಸಿದ್ದೇವು, ಆದರೆ ಅದು ಕೈಗೂಡಿ ಬರಲಿಲ್ಲ, ಮುಂದಿನ ಅವಧಿಗೆ ಬರುವವರು ಇದನ್ನು ಮಾಡಬಹುದಾಗಿದೆ ಎಂದು ಅಧ್ಯಕ್ಷ ಕೆ. ಅಬ್ದುಲ್ ರಹಿಮಾನ್ ಹೇಳಿದರು.

“ಸ್ವಚ್ಛ ಉಬಾರ್, ತ್ಯಾಜ್ಯ ಮುಕ್ತ ಊರು” ಯೋಜನೆ ಆರಂಭ
ಉಪ್ಪಿನಂಗಡಿ ಪೇಟೆಯಲ್ಲಿ ತ್ಯಾಜ್ಯ ವಿಲೇವಾರಿ ಸಮಸ್ಯೆ ತೀರಾ ಕಾಡುತ್ತಿತ್ತು. ಮೊದಲು ಶುಚಿ ಇಂಟರ್ ನ್ಯಾಶನಲ್ ಸಂಸ್ಥೆಯ ಸಹಕಾರದೊಂದಿಗೆ ತ್ಯಾಜ್ಯಗಳನ್ನು ಬೇರ್ಪಡಿಸಿ ಗೊಬ್ಬರವನ್ನು ತಯಾರಿಸಲಾಗುತ್ತಿದೆ. ರಾಮಕೃಷ್ಣ ಆಶ್ರಮದ ಸಹಕಾರದೊಂದಿಗೆ “ಸ್ವಚ್ಛ ಉಬಾರ್, ತ್ಯಾಜ್ಯ ಮುಕ್ತ ಊರು” ಯೋಜನೆ ಆರಂಭಿಸಿದ್ದು, ವ್ಯವಸ್ಥಿತ ರೀತಿಯಲ್ಲಿ ತ್ಯಾಜ್ಯ ವಿಲೇವಾರಿ ಕೆಲಸಗಳು ನಡೆಯುತ್ತಿದೆ. ಮತ್ತು ಉತ್ತಮ ರೀತಿಯಲ್ಲಿ ಯಾವುದೇ ರಾಸಾಯನಿಕ ವಸ್ತು ಬಳಸದೆ ಗೊಬ್ಬರ ತಯಾರಿ ಮಾಡಲಾಗುತ್ತಿದೆ ಎಂದರು. ಈ ಯೋಜನೆಬ ಇದೀಗ ಪೇಟೆ ವ್ಯಾಪ್ತಿಯಲ್ಲಿ ಮಾತ್ರ ಇದ್ದು, ಮುಂದೆ ಇದು ಎಲ್ಲಾ ೬ ವಾರ್ಡುಗಳಿಗೂ ವಿಸ್ತರಣೆ ಆಗಲಿದೆ. ತ್ಯಾಜ್ಯ ನಿರ್ವಹಣೆ ಸಲುವಾಗಿ ಪಿಕ್‌ಅಪ್ ವಾಹನ ಮತ್ತು ಶ್ರೆಡ್ಡಿಂಗ್ ಮೆಸಿನ್ ಖರೀದಿ ಮಾಡಲಾಗಿದೆ ಎಂದು ಅಧ್ಯಕ್ಷ ಅಬ್ದುಲ್ ರಹಿಮಾನ್ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಪಂಚಾಯಿತಿ ಸದಸ್ಯರುಗಳಾದ ಗೋಪಾಲ ಹೆಗ್ಡೆ, ಯು.ಕೆ. ಇಬ್ರಾಹಿಂ, ಸುರೇಶ್ ಅತ್ರಮಜಲು, ಸುನಿಲ್ ಕುಮಾರ್ ದಡ್ಡು, ಯು.ಟಿ. ತೌಶೀಫ್, ರಮೇಶ್ ಬಂಡಾರಿ ಇದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.