HomePage_Banner
HomePage_Banner
HomePage_Banner
HomePage_Banner

ಪೂರ್ವ ಪ್ರಾಥಮಿಕ(ಎನ್‌ಟಿಟಿ) ತರಬೇತಿಗೆ ಅರ್ಜಿ ಆಹ್ವಾನ

Puttur_Advt_NewsUnder_1
Puttur_Advt_NewsUnder_1
  •  ಸಿಬಿಎಸ್‌ಇ, ಐಸಿಎಸ್‌ಇ ಶಾಲೆಗಳಲ್ಲಿ ಶಿಕ್ಷಕರಾಗಲು ಸುವರ್ಣಾವಕಾಶ

ಪುತ್ತೂರು: ಕೇಂದ್ರ ಸರಕಾರದ ಐಎಸ್‌ಓ ಮಾನ್ಯತೆ ಪಡೆದ ಜ್ಞಾನ ಮಂದಾರ ಟ್ರಸ್ಟ್ ಇದರ ವತಿಯಿಂದ ಪೂರ್ವ ಪ್ರಾಥಮಿಕ ಶಾಲಾ ಶಿಕ್ಷಕರ ತರಬೇತಿ ನೀಡಲಾಗುತ್ತಿದ್ದು ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಸಂಸ್ಥೆಯ ವತಿಯಿಂದ ಮಂಗಳೂರು, ಪುತ್ತೂರು, ಸುಳ್ಯ ಹಾಗೂ ಬೆಳ್ತಂಗಡಿಯಲ್ಲಿ ತರಗತಿಗಳು ನಡೆಯುತ್ತಿದೆ. ಅತೀ ಕಡಿಮೆ ಶುಲ್ಕದಲ್ಲಿ ಗುಣಮಟ್ಟದ ಶಿಕ್ಷಣ ನೀಡುತ್ತಿರುವ ಸಂಸ್ಥೆಯು ೨೦೧೮-೧೯ನೇ ಸಾಲಿನಲ್ಲಿ ಡಿಸ್ಟಿಂಕ್ಷನ್ ಹಾಗೂ ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗುವ ಮೂಲಕ ಶೇ.೧೦೦ ಫಲಿತಾಂಶವನ್ನು ಪಡೆದುಕೊಂಡಿರುತ್ತದೆ.

ಅರ್ಹತೆಗಳು:
ಎನ್‌ಟಿಟಿ ತರಬೇತಿ ಪಡೆಯಲು ಎಸ್.ಎಸ್.ಎಲ್.ಸಿ ಅಥವಾ ಯಾವುದೇ ಡಿಗ್ರಿ ಪಡೆದ ಮಹಿಳಾ ಅಭ್ಯರ್ಥಿಗಳು ಹಾಗೂ ಪ್ರಸ್ತುತ ಅಧ್ಯಯನ ಪಡೆಯುತ್ತಿರುವವರೂ ತರಬೇತಿಗೆ ದಾಖಲಾತಿ ಪಡೆಯಬಹುದು. ಅಭ್ಯರ್ಥಿಗಳಿಗೆ ಯಾವುದೇ ಡೋನೇಷನ್ ಇರುವುದಿಲ್ಲ. ಶಿಕ್ಷಣವನ್ನು ಹಿಂದಿ, ಇಂಗ್ಲಿಷ್ ಭಾಷೆಯಲ್ಲಿ ಅನುಭವೀ ಉಪನ್ಯಾಸಕರಿಂದ ತರಗತಿ ನಡೆಸಲಾಗುವುದು. ಕೇಂದ್ರ ಸರಕಾರದ ಮಾರ್ಗ ಸೂಚಿಯ ಅನ್ವಯ ಆನ್‌ಲೈನ್ ತರಗತಿಗಳು ನಡೆಯುತ್ತಿದ್ದು ತರಬೇತಿ ಅವಧಿಯು ಒಂದು ವರ್ಷವಾಗಿರುತ್ತದೆ.

ನಮ್ಮ ಸಂಸ್ಥೆಯ ಮೂಲಕ ತರಬೇತಿ ಪಡೆದ ಅಭ್ಯರ್ಥಿಗಳು ಸಿಬಿಎಸ್, ಐಸಿಎಸ್‌ಇ ಪ್ರತಿಷ್ಠಿತ ಶಾಲೆಗಳಲ್ಲಿ ಶಿಕ್ಷಕರಾಗಲು ಅರ್ಹತೆಯನ್ನು ಪಡೆಯಲಿದ್ದಾರೆ. ಅಭ್ಯರ್ಥಿಗಳಿಗೆ ರಾಷ್ಟ್ರೀಕೃತ ಬ್ಯಾಂಕ್‌ನಿಂದ ಸಾಲ ಸೌಲಭ್ಯ ಹಾಗೂ ಕೆಎಸ್‌ಆರ್‌ಟಿಸಿ ಬಸ್ ಪಾಸ್ ಸೌಲಭ್ಯವನ್ನು ಒದಗಿಸಲಾಗುವುದು. ಹೆಚ್ಚಿನ ಮಾಹಿತಿಗಾಗಿ ಜ್ಞಾನ ಮಂದಾರ ಟ್ರಸ್ಟ್‌ನ ದ.ಕ ಜಿಲ್ಲಾ ಸಾರ್ವಜನಿಕ ಸಂಪರ್ಕಾಧಿಕಾರಿ ಐ.ಸಿ ಕೈಲಾಸ್ ಅಥವಾ 9880194894 ನಂಬರನ್ನು ಸಂಪರ್ಕಿಸುವಂತೆ ಸಂಸ್ಥೆಯ ಪ್ರಕಟಣೆ ತಿಳಿಸಿದೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.