ಪುತ್ತೂರು: ಅಂಬಿಕಾ ಪ್ರಾಥಮಿಕ ವಿದ್ಯಾಲಯದ 2020-21ನೇ ಸಾಲಿನ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾಗಿ ನ್ಯಾಯವಾದಿ ಮಹೇಶ್ ಕಜೆ ಹಾಗೂ ಅಂಬಿಕಾ ಪದವಿ ಪೂರ್ವ ವಿದ್ಯಾಲಯದ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾಗಿ ಅಂಕಣಗಾರ್ತಿ ಕವಿತಾ ಅಡೂರು ಆಯ್ಕೆಗೊಂಡಿದ್ದಾರೆ.
ಅಂಬಿಕಾ ಪ್ರಾಥಮಿಕ ವಿದ್ಯಾಲಯದಲ್ಲಿ ಜೂ.೨೪ರಂದು ನಡೆದ ಶಿಕ್ಷಕ ರಕ್ಷಕ ಸಂಘದ ಸಭೆಯಲ್ಲಿ ಈ ಆಯ್ಕೆ ನಡೆದಿದೆ.
ಬೊಳುವಾರಿನಲ್ಲಿ ಕಛೇರಿ ಹೊಂದಿರುವ ಕಜೆ ಲಾ ಛೇಂಬರ್ಸ್ ಮುಖ್ಯಸ್ಥರಾದ ಮಹೇಶ್ ಕಜೆ ಪುತ್ತೂರು ವಕೀಲರ ಸಂಘದ ಅಧ್ಯಕ್ಷರಾಗಿ, ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಸದಸ್ಯರಾಗಿ ಸೇವೆಸಲ್ಲಿಸಿದ್ದರು. ಜೆಸಿಐ ರಾಷ್ಟ್ರೀಯ ತರಬೇತುದಾರರಾಗಿ, ರೋಟರಿ ಸದಸ್ಯರಾಗಿ, ಅಖಿಲ ಹವ್ಯಕ ಒಕ್ಕೂಟದ ನಿಕಟಪೂರ್ವ ಸದಸ್ಯರಾಗಿರುವ ಇವರು ಕ.ಸ.ಪಾ. ಪುತ್ತೂರು ಘಟಕದ ಕಾರ್ಯದರ್ಶಿಯಾಗಿ ಮಂಗಳೂರು ವಿ.ವಿಯ ಸೆನೆಟ್ ಸದಸ್ಯರಾಗಿ ಮಂಗಳೂರು ವಿ.ವಿ. ಸರ್ವ ಕಾಲೇಜು ವಿದ್ಯಾರ್ಥಿ ಸಂಘದ ಕಾರ್ಯದರ್ಶಿಯಾಗಿಯೂ ಕರ್ತವ್ಯ ನಿರ್ವಹಿಸಿದ್ದರು. ಖ್ಯಾತ ಕ್ರಿಮಿನಲ್ ವಕೀಲರಾಗಿರುವ ಇವರು ವಿವಿಧ ಸಂಘ ಸಂಸ್ಥೆಗಳ ಕಾನೂನು ಸಲಹೆಗಾರರಾಗಿ, ಕಾರ್ಯಕ್ರಮ ನಿರೂಪಕರಾಗಿಯೂ ಗುರುತಿಸಿಕೊಂಡಿದ್ದು ಉತ್ತಮ ವಾಕ್ಪಟುವಾಗಿದ್ದಾರೆ. ಉಪ್ಪಿನಂಗಡಿ ‘ಕೇದಾರ’ ದ ಕಜೆ ಈಶ್ವರ ಭಟ್ಟರ ಪುತ್ರರಾದ ಇವರು ಪತ್ನಿ ಕಾನೂನು ಪದವೀಧರೆ, ಕಛೇರಿ ಸಹೋದ್ಯೋಗಿ ದೀಪಿಕಾ ಭಟ್, ಪುತ್ರಿಯರಾದ ಮಂದಿರ ಕಜೆ, ಮನೀಶ ಕಜೆಯವರನ್ನು ಹೊಂದಿದ್ದಾರೆ.
ಸುದಾನ ವಸತಿಯುತ ಶಾಲೆಯ ಶಿಕ್ಷಕಿಯಾದ ಕವಿತಾ ಅಡೂರುರವರು ಖ್ಯಾತ ಅಂಕಣಗಾರ್ತಿಯೂ ಆಗಿ ಚಿರಪರಿಚಿತರು.
——————