Breaking News

ಹಸಿ ಮೀನು ಮಾರಾಟಕ್ಕೂ ತಟ್ಟಿದ ಕೊರೋನಾ ಭೀತಿ – ಪುತ್ತೂರು ಮಾರುಕಟ್ಟೆಯಲ್ಲಿ ಮಧ್ಯಾಹ್ನದ ಬಳಿಕ ವ್ಯಾಪಾರ ಸ್ಥಗಿತ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ದೇಶದಲ್ಲಿ ಕೊರೋನಾ ಸೋಂಕು ಮಿತಿಮೀರಿದ್ದು, ಜಿಲ್ಲೆಯಲ್ಲೂ ಏರಿಕೆ ಕಂಡಿದೆ. ಇದೀಗ ನಗರಸಭಾ ವ್ಯಾಪ್ತಿಯಲ್ಲೂ ೨ ಪ್ರಕರಣಗಳು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಪುತ್ತೂರು ಹಸಿ ಮೀನು ಮಾರುಕಟ್ಟೆಯಲ್ಲಿ ಜೂ. 25ರಿಂದ ಪ್ರತಿ ದಿನ ಮಧ್ಯಾಹ್ನ ಗಂಟೆ 2 ರ ತನಕ ಮಾತ್ರ ವ್ಯಾಪಾರ ನಡೆಸಲಾಗುವುದು ಎಂದು ಮೀನು ಮಾರುಕಟ್ಟೆ ವ್ಯಾಪಾರಸ್ಥರ ಸಮಿತಿ ಪದಾಧಿಕಾರಿಗಳು ತಿಳಿಸಿದ್ದಾರೆ.
ಕೊರೋನಾ ಲಾಕ್‌ಡೌನ್ ಸಂದರ್ಭದಲ್ಲಿ ಇದೇ ರೀತಿ ಮಧ್ಯಾಹ್ನದ ತನಕ ಮಾತ್ರ ಮೀನು ಮಾರಾಟ ಮಾಡಲಾಗುತ್ತಿದ್ದು, ಲಾಕ್‌ಡೌನ್ ಸಡಿಲಗೊಂಡ ಬಳಿಕ ಸಂಜೆ ಗಂಟೆ 7ರ ತನಕ ಮೀನು ಮಾರಾಟ ಮಾಡುವ ನಿರ್ಣಯ ಕೈಗೊಂಡಿದ್ದು, ಅದರಂತೆ ವ್ಯಾಪಾರ ನಡೆಸಲಾಗುತ್ತಿತ್ತು. ಇದೀಗ ಕೊರೋನಾ ಸೋಂಕಿನ ಅಟ್ಟಹಾಸ ಮತ್ತೆ ಏರಿಕೆಯಗಿದ್ದು, ನಗರಸಭಾ ವ್ಯಾಪ್ತಿಗೂ ಕೊರೋನಾ ಕಾಲಿಟ್ಟ ಹಿನ್ನೆಲೆಯಲ್ಲಿ ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಪುತ್ತೂರು ಮೀನು ಮಾರುಕಟ್ಟೆಯಲ್ಲಿ ಮಧ್ಯಾಹ್ನದ ಬಳಿಕ ಮೀನು ಮಾರಾಟ ನಡೆಯುವುದಿಲ್ಲ ಎಂದು ಸಮಿತಿ ಪ್ರಕಟಣೆ ತಿಳಿಸಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.