HomePage_Banner
HomePage_Banner
HomePage_Banner

ಗಿಡ ನೀಡುವುದರ ಮೂಲಕ ಪರಿಸರ ದಿನಾಚರಣೆಯೊಂದಿಗೆ ಕೃತಜ್ಞತೆ ಸಲ್ಲಿಕೆ | ಕೋಡಿಂಬಾಡಿ ಗ್ರಾಮ ಪಂಚಾಯತ್ ನಿಂದ ವಿಶಿಷ್ಟ ಕಾರ್ಯಕ್ರಮ

Puttur_Advt_NewsUnder_1
Puttur_Advt_NewsUnder_1

 

  • ಐದು ವರ್ಷದ ಆಡಳಿತದಲ್ಲಿ ಸಹಕರಿಸಿದವರ ಸ್ಮರಣೆ

ಪುತ್ತೂರು: ತನ್ನ ಐದು ವರ್ಷದ ಆಡಳಿತದ ಅವಧಿಯಲ್ಲಿ ಸಹಕರಿಸಿದವರನ್ನು ಸ್ಮರಿಸಿಕೊಳ್ಳುವುದಕ್ಕಾಗಿ ಕೋಡಿಂಬಾಡಿ ಗ್ರಾಮ ಪಂಚಾಯತ್ ಜೂನ್ 25ರಂದು ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿತ್ತು.

ಸ್ಥಳೀಯ ಸರಕಾರ ಎಂದೇ ಕರೆಯಲ್ಪಡುವ ಗ್ರಾಮ ಪಂಚಾಯತ್ ನ ಆಡಳಿತ ವ್ಯವಸ್ಥೆಯೊಂದಿಗೆ ಅಭಿವೃದ್ಧಿ ಕಾರ್ಯಗಳಿಗೆ ಸಹಕರಿಸಿಸಹಕರಿಸಿದವರನ್ನು ಸ್ಮರಿಸುವುದಕ್ಕಾಗಿ ಏರ್ಪಡಿಸಲಾಗಿದ್ದ ಈ ವಿಭಿನ್ನ ಕಾರ್ಯಕ್ರಮ ಗಮನ ಸೆಳೆಯಿತು.

ಸಹಕಾರ ನೀಡಿದವರಿಗೆ ಗಿಡ ನೀಡಿ ಪರಿಸರ ದಿನಾಚರಣೆ ಆಚರಿಸಿ ಪರಿಸರದ ಜಾಗೃತಿ ಮೂಡಿಸಿದ ಈ ವಿಶೇಷ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾ.ಪಂ. ಅಧ್ಯಕ್ಷೆ ಸಂಧ್ಯಾ ರಾಮಚಂದ್ರ ಗೌಡರವರು ವಹಿಸಿದ್ದರು. ತಾ.ಪಂ.ಅಧ್ಯಕ್ಷ ಕೆ.ರಾಧಾಕೃಷ್ಣ ಬೋರ್ಕರ್, ಜಿ.ಪಂ.ಸದಸ್ಯೆ ಶಯನಾ ಜಯಾನಂದ, ತಾ.ಪಂ. ಸದಸ್ಯ ಲಕ್ಷ್ಮಣ ಗೌಡ, ಗ್ರಾ.ಪಂ.ಮಾಜಿ ಅಧ್ಯಕ್ಷರಾದ ರೇವತಿ ವೀರಪ್ಪ ಪೂಜಾರಿ, ಪುಷ್ಪಲತಾ ಸಿ.ಕೆ, ಗ್ರಾ.ಪಂ. ಉಪಾಧ್ಯಕ್ಷ ಬಾಬು ಗೌಡ, ಸದಸ್ಯರು, ಅಧಿಕಾರಿಗಳು ವೃಂದದವರು ಭಾಗಿಯಾಗಿದ್ದರು. ಗ್ರಾಮಸ್ಥರ ಪರವಾಗಿ ಗ್ರಾ.ಪಂ.ಮಾಜಿ ಅಧ್ಯಕ್ಷ ಕೆ.ದೇವಾನಂದ, ಮಾಜಿ ಉಪಾಧ್ಯಕ್ಷ ಮೋಹನ ಪಕ್ಕಳ ಮತ್ತು ಅಂಗನವಾಡಿ ಕಾರ್ಯಕರ್ತೆಯರ ಪರವಾಗಿ ಮೀನಾಕ್ಷಿ ಶಾಂತಿನಗರ ಮಾತನಾಡಿದರು. ಪಿಡಿಓ ಚಿತ್ರಾವತಿ, ಕಾರ್ಯದರ್ಶಿ ರಮೇಶ್ ಮತ್ತು ಸಿಬ್ಬಂದಿಗಳು ಸಹಕರಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.