Home_Page_Advt
Home_Page_Advt
Home_Page_Advt

ಆಯುಷ್ ನಿಂದ ಕಡಬದಲ್ಲಿ ಕೊರೋನಾ ವಾರಿಯರ್ಸ್‌ ಗೆ ಆಯುರ್ವೇದ ಆರೋಗ್ಯ ರಕ್ಷಕ ಔಷಧಿ ವಿತರಣೆ

ಕಡಬ: ಆಯುಷ್ ಫೆಢರೇಷನ್ ಆಫ್ ಇಂಡಿಯಾ(ಎ.ಎಫ್.ಐ) ದಕ್ಷಿಣ ಕನ್ನಡ ಇದರ ವತಿಯಿಂದ ನೀಡಲಾಗಿರುವ ಆರೋಗ್ಯ ರಕ್ಷಕ ಔಷಧಿಗಳನ್ನು ಕಡಬ ಪರಿಸರದ ಆಯುಷ್ ವೈದ್ಯರು ಕಡಬ ಗ್ರಾಮ ಪಂಚಾಯತ್ ಮೂಲಕ ಕೊರೋನಾ ವಾರಿಯರ್ಸ್‌ ಗೆ ಜೂ.25ರಂದು ವಿತರಣೆ ಮಾಡಿದ್ದಾರೆ. ಔಷಧಿಯನ್ನು ಕಡಬದ ಆಯುಷ್ ವೈದ್ಯರು ಕಡಬ ಗ್ರಾ.ಪಂ.ನಲ್ಲಿ ಪಂಚಾಯತ್ ಅಧ್ಯಕ್ಷ ಬಾಬು ಮುಗೇರ ಹಾಗೂ ಅಭಿವೃದ್ದಿ ಅಧಿಕಾರಿ ಚೆನ್ನಪ್ಪ ಗೌಡ ಅವರಿಗೆ ವಿತರಣೆ ಮಾಡಿದರು.

ಈ ಸಂದರ್ಭದಲ್ಲಿ ಕಡಬ ಶ್ರೀ ಪೂರ್ಣ ಆಯುರ್ವೇದ ಚಿಕಿತ್ಸಾಲಯದ ವೈದ್ಯ ಡಾ| ಸುರೇಶ್ ಕುಮಾರ್ ಕೂಡೂರು ಅವರು ಮಾತನಾಡಿ, ಶರೀರದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಮೂಲಕ ಕೊರೋನಾ ಮೊದಲಾದ ರೋಗಗಳು ಬಾರದಂತೆ ತಡೆಗಟ್ಟಲು ಆಯುರ್ವೇದದಲ್ಲಿ ಸಾವಿರಾರು ವರ್ಷಗಳಿಂದಲೂ ಉಪಯೋಗಿಸ್ಪಡುವ ಕೆಲವು ಅದ್ಬುತವಾದ ಔಷಧಗಳಿವೆ, ಇವುಗಳ ಉಪಯೋಗದ ಬಗ್ಗೆ ಜನ ಜಾಗೃತಿಯನ್ನು ಉಂಟು ಮಾಡುವ ಉದ್ದೇಶದಿಂದ ಎ.ಎಫ್.ಐ ದ,ಕ ಘಟಕವು ಕೆಲವು ಕಾರ್ಯಕ್ರಮಗಳನ್ನು ಹಾಕಿಕೊಂಡಿದೆ. ಕರ್ನಾಟಕ ಆಯುಷ್ ಇಲಾಖೆ ಇದರ ಸಹಭಾಗಿತ್ವ ವಹಿಸಿದೆ, ಇದೀಗ ದ.ಕ ಆಯುಷ್ ವೈದ್ಯರುಗಳ ಒಕ್ಕೂಟವು ತಯಾರಿಸಿದ ಆಯುರ್ವೇದ ಔಷಧಿಗಳನ್ನು ಪ್ರಥಮ ಹಂತದಲ್ಲಿ ಜನ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕೊರೋನಾ ವಾರಿಯರ್ಸ್‌ ಗೆ ವಿತರಣೆ ಮಾಡುವ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ಹೇಳಿದ ಅವರು ಕೊರೋನಾ ವೈರಸ್ ಹೆಚ್ಚಾಗಿ ಶ್ವಸನ ಸಂಸ್ಥಾನದ ಮೇಲೆ ಅತಿಕ್ರಮಿಸುತ್ತಿರುವ ಹಿನ್ನಲೆಯಲ್ಲಿ ಶ್ವಾಸಕೋಶ, ಗಂಟಲು, ಜೀರ್ಣಾಂಗ ಆರೋಗ್ಯದ ರಕ್ಷಣೆಯನ್ನು ಗಮನದಲ್ಲಿ ಇಟ್ಟುಕೊಂಡು ಅದಕ್ಕಿರುವ ಔಷಧಿಗಳನ್ನೆ ಆಯ್ಕೆ ಮಾಡಲಾಗಿದೆ.

ಉದಾ: ತುಳಸಿ, ಶುಂಠಿ, ಕಾಳು ಮೆಣಸು, ಬಿಲ್ವ ಪತ್ರೆ, ಹಿಪ್ಪಿಲಿ, ನೆಲ್ಲಿಕಾಯಿ, ಶಾಂತಿಕಾಯಿ, ಅಣಿಲೆಕಾಯಿ,ದೇವದಾರು, ಹೊಂಗೆ, ಮರದರಶಿನ, ದಾಲ್ಚಿಣ್ಣಿ ಇತ್ಯಾದಿ ಇವುಗಳ ನಿತ್ಯ ಸೇವಣೆಯಿಂದ ಆರೋಗ್ಯ ರಕ್ಷಣೆ ಶತಸಿದ್ದ ಕನಿಷ್ಠ ಎರಡು ತಿಂಗಳು ಸೇವನೆಗೆ ಸಲಹೆ ಮಾಡಲಾಗಿದೆ ಎಂದು ಅವರು ಹೇಳಿದರು. ಈ ಸಂದರ್ಭದಲ್ಲಿ ಕಡಬದ ಆಯುರ್ವೇದಿಕ್ ವೈದ್ಯರಾದ ಡಾ| ಬಾಲಸುಬ್ರಹ್ಮಣ್ಯ ಭಟ್, ಡಾ| ಕೃಷ್ಣರಾಜ್, ಡಾ| ದೇವಿಪ್ರಸಾದ್,ಡಾ| ಪ್ರಮೀಳಾ ಕಡಬ ಕಂದಾಯ ನಿರೀಕ್ಷಕ ಅವಿನ್ ರಂಗತ್ಮಲೆ, ಗ್ರಾ.ಪಂ. ಸದಸ್ಯರಾದ ಹನೀಫ್ ಕೆ.ಎಂ.,ನೀಲಾವತಿ ಶಿವರಾಮ್, ಷರೀಪ್ ಎ.ಎಸ್. ಸಿಬ್ಬಂದಿಗಳಾದ ಹರೀಶ್ ಬೆದ್ರಾಜೆ, ಪದ್ಮಯ್ಯ ಮೊದಲಾದವರು ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.