ಪುತ್ತೂರು: ಒಳಮೊಗ್ರು ಗ್ರಾಮದ ಕುಂಬ್ರ ನ್ಯೂ ಪ್ಯಾಮಿಲಿ ಕಾಂಪ್ಲೆಕ್ಸ್ ಮುಂಭಾಗದಲ್ಲಿ ಕಳೆದ ಕೆಲವು ವರ್ಷಗಳಿಂದ ತೆರೆದಿದ್ದ ಗುಂಡಿಗೆ ಕುಂಬ್ರ ವರ್ತಕರ ಸಂಘದ ಪದಾಧಿಕಾರಿಗಳು ಸ್ಲಾಬ್ ಕಲ್ಲು ಹಾಕಿ ಸರಿಪಡಿಸಿದ್ದಾರೆ. ರಸ್ತೆ ಬದಿಯಲ್ಲಿ ನೀರು ಹರಿದು ಹೋಗಲು ಪಿಡಬ್ಲ್ಯೂಡಿ ವತಿಯಿಂದ ಚರಂಡಿಗೆ ಸ್ಲಾಬ್ ಕಲ್ಲು ಹಾಸಲಾಗಿದೆ. ಪ್ಯಾಮಿಲಿ ಕಾಂಪ್ಲೆಕ್ಸ್ ಎದುರು ಭಾಗದಲ್ಲಿ ಚರಂಡಿಗೆ ಹಾಸಿದ್ದ ಒಂದು ಕಲ್ಲು ಮುರಿದು ಗುಂಡಿ ನಿರ್ಮಾಣವಾಗಿತ್ತು. ಈ ಗುಂಡಿಗೆ ಹಲವು ವಾಹನಗಳು ಬಿದ್ದಿದ್ದವು. ಇತ್ತೀಚೆಗೆ ಪತ್ರಕರ್ತರೊಬ್ಬರ ಕಾರು ಸಹ ಗುಂಡಿಗೆ ಬಿದ್ದಿತ್ತು. ಈ ಬಗ್ಗೆ ಸ್ಥಳೀಯ ವರ್ತಕರ ಸಂಘ ಕೂಡಲೇ ಎಚ್ಚೆತ್ತುಕೊಂಡು ರಾತ್ರೋರಾತ್ರಿ ಗುಂಡಿಗೆ ಸ್ಲಾಬ್ ಕಲ್ಲು ಹಾಸುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಜನಪ್ರತಿನಿಧಿಗಳು, ಇಲಾಖಾಧಿಕಾರಿಗಳು ಮಾಡದ ಕೆಲಸವನ್ನು ವರ್ತಕರ ಸಂಘವೊಂದು ಮಾಡಿರುವುದು ಶ್ಲಾಘನೀಯವಾಗಿದೆ.
ಈ ಸಂದರ್ಭದಲ್ಲಿ ವರ್ತಕರ ಸಂಘದ ಅಧ್ಯಕ್ಷ ಎಸ್.ಮಾಧವ ರೈ ಕುಂಬ್ರ, ಪ್ರ.ಕಾರ್ಯದರ್ಶಿ ಅಝರ್ ಷಾ ಕುಂಬ್ರ, ಸಂಶುದ್ದೀನ್ ಎ.ಆರ್, ಮೆಲ್ವಿನ್ ಮೊಂತೆರೋ, ಉದಯ ಆಚಾರ್ಯ ಕೃಷ್ಣನಗರ ಮತ್ತಿತರರು ಉಪಸ್ಥಿತರಿದ್ದರು.