HomePage_Banner
HomePage_Banner
HomePage_Banner

ಸಂಸ್ಕೃತ ಪರೀಕ್ಷೆ : ಹಾರಾಡಿ ಶಾಲೆಗೆ ಶೇ. 100 ಫಲಿತಾಂಶ -ಲೋಕೇಶ್ವರಿ(ಪ್ರ) ಅಭಿಲಾಷಾ, ಸಾನಿಕಾ(ದ್ವಿ)

Puttur_Advt_NewsUnder_1
Puttur_Advt_NewsUnder_1
ಲೊಕೇಶ್ವರಿ
ಅಭಿಲಾಷ
ಸಾನಿಕಾ

ಪುತ್ತೂರು: ಶೈಕ್ಷಣಿಕ ವರ್ಷ 2019-20 ನೇ ಸಾಲಿನಲ್ಲಿ ಸಂಸ್ಕೃತ ಶಿಕ್ಷಣ ನಿರ್ದೇಶನಾಲಯ ಬೆಂಗಳೂರು ಇದರ ಸಂಸ್ಕೃತ ವಿಶ್ವವಿದ್ಯಾನಿಲಯ ವತಿಯಿಂದ ನಡೆಸಲಾಗುವ ಪ್ರಾಥಮಿಕ ವಿಭಾಗದ ಸಂಸ್ಕೃತ ಪ್ರಥಮಾ ಪರೀಕ್ಷೆಗಳ ಫಲಿತಾಂಶ ಪ್ರಕಟಗೊಂಡಿದ್ದು ಪ್ರತಿ ವರ್ಷದಂತೆ ಈ ಬಾರಿಯೂ ಹಾರಾಡಿ ಸರಕಾರಿ ಮಾದರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಯು ಶೇ.100 ಫಲಿತಾಂಶವನ್ನು ದಾಖಲಿಸಿದೆ.
ಕಳೆದ ಫೆಬ್ರವರಿ ತಿಂಗಳಲ್ಲಿ ಎಂಟನೇ ತರಗತಿಯ ವಿದ್ಯಾರ್ಥಿಗಳಿಗೆ ನಡೆಸಲಾಗಿದ್ದ ಪಬ್ಲಿಕ್ ಪರೀಕ್ಷೆ ಇದಾಗಿದ್ದು ಪರೀಕ್ಷೆಗೆ ಹಾಜರಾದ 20 ವಿದ್ಯಾರ್ಥಿಗಳೂ ಉತ್ತಮ ಫಲಿತಾಂಶದೊಂದಿಗೆ ತೇರ್ಗಡೆ ಹೊಂದಿದ್ದಾರೆ. ಶೇ.94 ಅಂಕದೊಂದಿಗೆ ಪ್ರಥಮ ಸ್ಥಾನ ಪಡೆದ ಲೋಕೇಶ್ವರಿ ಬಿ. ಅವರು ಪಡೀಲು ನಿವಾಸಿ ರಾಮಕೃಷ್ಣ ಹಾಗೂ ಉಮಾವತಿ ದಂಪತಿಗಳ ಪುತ್ರಿ. ಶೇ.91 ಅಂಕಗಳೊಂದಿಗೆ ದ್ವಿತೀಯ ಸ್ಥಾನವನ್ನು ಅಭಿಲಾಷಾ ದೋಟ ಮತ್ತು ಸಾನಿಕಾ ಅವರು ಪಡೆದು ಕೊಂಡಿದ್ದಾರೆ. ಅಭಿಲಾಷ ದೋಟ ಅವರು ಹಾರಾಡಿಯ ಲಕ್ಷ್ಮಣ ದೋಟ ಹಾಗೂ ಡಾ. ಸ್ಮಿತಾ ಪಿ.ಜಿ ಇವರ ಪುತ್ರಿಯಾಗಿದ್ದು, ಸಾನಿಕಾ ಅವರು ಸಕಲೇಶಪುರ ನಿವಾಸಿ ಮಲ್ಲೇಶ್ ಹಾಗೂ ಸರೋಜ ದಂಪತಿಗಳ ಪುತ್ರಿಯಾಗಿದ್ದಾರೆ. ಉಳಿದಂತೆ ಬಿ.ಪವಿತ್ ಯು.ರೈ, ಭೂಮಿಕಾ ಜಿ., ಸುದರ್ಶನ್ ಗಡಿಯಾರ್, ಪವನ್, ಚಮನ್ ಶರೀಫ್, ಪೂಜಾ, ಪೂರ್ಣಿಮಾ, ಸ್ವಾತಿ, ವಳಲಮ್ಮ, ಯಶಸ್ವಿ, ಅಶ್ವಿನಿ, ಚೈತನ್ಯ, ಹರ್ಷಿಣಿ, ಜಯಶ್ರೀ, ಲೇಖನಿ, ಮಂಜೂಷ, ಮೌನ ಅವರು ಪ್ರಥಮ ದರ್ಜೆಯೊಂದಿಗೆ ತೇರ್ಗಡೆ ಹೊಂದಿದ್ದಾರೆ. ಪುತ್ತೂರು ತಾಲೂಕಿನಲ್ಲಿಯೇ ಸಂಸ್ಕೃತ ತರಗತಿಗಳನ್ನು ಹೊಂದಿರುವ ಏಕೈಕ ಸರಕಾರಿ ಶಾಲೆ ಹಾರಾಡಿಯಾಗಿದ್ದು ಸಂಸ್ಕೃತ ಶಿಕ್ಷಕರಾದ ಸುಬ್ರಹ್ಮಣ್ಯ ಹೊಳ್ಳ ಇವರ ಮಾರ್ಗದರ್ಶನ ಹಾಗೂ ಶಾಲಾ ಮುಖ್ಯಶಿಕ್ಷಕಿ ಪ್ರಿಯಾ ಕುಮಾರಿ ಇವರ ಸಹಕಾರದೊಂದಿಗೆ ವಿದ್ಯಾರ್ಥಿಗಳು ಈ ಸಾಧನೆ ಮಾಡಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.