Breaking News

ಧರ್ಮಸ್ಥಳ: ನೀರಚಿಲುಮೆಯಲ್ಲಿ ಮನೆಯರನ್ನು ಕಟ್ಟಿ ಹಾಕಿ ಅಪಾರ ಪ್ರಮಾಣದ ದರೋಡೆ

Puttur_Advt_NewsUnder_1
Puttur_Advt_NewsUnder_1

ಧರ್ಮಸ್ಥಳ: ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯ ನಿರಚಿಲುಮೆ ಮಿಯೋ ನಿವಾಸಿ ಅಚ್ಯುತ ಭಟ್ ಎಂಬವರ ಮನೆಯಿಂದ ನಾಲ್ವರು ದರೋಡೆಕೋರರು ಮನೆಯವರನ್ನು ಕಟ್ಟಿ ಹಾಕಿ ಅಪಾರ ಪ್ರಮಾಣದ ಚಿನ್ನಾಭರಣ ಮತ್ತು ನಗದು ಸೇರಿದಂತೆ ಸುಮಾರು 20 ಲಕ್ಷ ಮೌಲ್ಯ ದ ಸೋತ್ತುಗಳನ್ನು ದರೋಡೆ ಮಾಡಿದ ಘಟನೆ ಜೂ.26 ರಂದು ಮುಂಜಾನೆ 2.30 ರ ಸುಮಾರಿಗೆ ನಡೆದಿದೆ. ಮನೆಯ ಎಲ್ಲಾ ಸದಸ್ಯರನ್ನು ಕಟ್ಟಿ ಹಾಕಿ, 40 ಪವನ್ ಚಿನ್ನ,1 ಕೆಜಿ ಬೆಳ್ಳಿ ಮತ್ತು 25 ಸಾವಿರ ನಗದು ದರೋಡೆ ಮಾಡಿದ್ದಾರೆ ಎಂದು ವರದಿಯಾಗಿದೆ .

ಅಚ್ಯುತ ಭಟ್ ಅವರು ಉಜಿರೆಯಲ್ಲಿ ಅಡಿಕೆ ವ್ಯಾಪಾರ ನಡೆಸುತ್ತಿದ್ದರು. ರಾತ್ರಿ ನಾಯಿಗಳು ಬೊಗಳಿದ ಸದ್ದುಕೇಳಿ ಮನೆಯವರು ಬಾಗಿಲು ತೆರೆದಾಗ ದರೋಡೆಕೋರರು ಮನೆಯೊಳಗೆ ನುಗ್ಗಿ ಅಚ್ಯುತ ಭಟ್ ಸೇರಿದಂತೆ ಮನೆಮಂದಿಯನ್ನು ಕಟ್ಟಿಹಾಕಿ ದರೋಡೆ ನಡೆಸಲಾಗಿದೆ. ಈ ಪೈಕಿ ಅಚ್ಚುತ್ ಭಟ್ ಅವರಿಗೆ ಗಾಯವಾಗಿದೆ. ಕಳ್ಳರು ಚಪ್ಪಲಿ ಟಾಜ್೯ ಹಾಗೂ ಬಟ್ಟೆ ತುಂಡು ಸ್ಥಳದಲ್ಲಿ ಬಿಟ್ಟು ಹೋಗಿದ್ದಾರೆ. ಸ್ಥಳಕ್ಕೆ ಬೆಳ್ತಂಗಡಿ ವೃತ್ತ ನಿರೀಕ್ಷಕ ಸಂದೇಶ್ ಪಿ.ಜಿ ,ಧರ್ಮಸ್ಥಳ ಉಪ ನಿರೀಕ್ಷಕ ಪವನ್ ನಾಯ್ಕ್ ಮತ್ತು ಪೊಲೀಸರ ತಂಡ ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.