Home_Page_Advt
Home_Page_Advt
Home_Page_Advt

ಅವಧಿ ಮುಕ್ತಾಯವಾಗಲಿರುವ ಗ್ರಾ.ಪಂಗಳು | ಪುತ್ತೂರು, ಕಡಬ ಉಭಯ ತಾಲೂಕಿನ 43 ಗ್ರಾ.ಪಂಗಳಿಗೆ ಆಡಳಿತಾಧಿಕಾರಿಗಳ ನೇಮಕ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಜಿಲ್ಲೆಯಲ್ಲಿ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993 ರ ಪ್ರಕರಣ 41 ಮತ್ತು 42 ರಂತೆ ಅವಧಿ ಪೂರ್ಣಗೊಳ್ಳಲಿರುವ ಗ್ರಾಮ ಪಂಚಾಯತಿಗಳಿಗೆ ಆಡಳಿತಾಧಿಕಾರಿಗಳನ್ನು ನೇಮಿಸಲು ಕ್ರಮ ಕೈಗೊಳ್ಳುವಂತೆ ಪುತ್ತೂರು ಮತ್ತು ಕಡಬ ಉಬಯ ತಾಲೂಕುಗಳ 43 ಗ್ರಾ.ಪಂಗಳಿಗೆ ಅಡಳಿತಾಧಿಕಾರಿಗಳನ್ನು ನೇಮಕಾತಿ ಮಾಡಿ ಜಿಲ್ಲಾಧಿಕಾರಿ ಸಿಂಧೂ ಬಿ ರೂಪೇಶ್ ಅವರು ಆದೇಶ ಹೊರಡಿಸಿದ್ದಾರೆ. ನೇಮಕಗೊಂಡ ಅಧಿಕಾರಿಗಳು ಅವಧಿ ಮುಕ್ತಾಯಗೊಂಡ ಗ್ರಾ.ಪಂ ಆಡಳಿತಾಧಿಕಾರಿ ಹುದ್ದೆಯ ಪ್ರಭಾರವನ್ನು ವಹಿಸಿಕೊಳ್ಳಲಿದ್ದಾರೆ.

ಪುತ್ತೂರು ತಾಲೂಕಿನ ಅವಧಿ ಮುಗಿಯುವ ಗ್ರಾ.ಪಂಗಳು:
ಬನ್ನೂರು, ಆರ್ಯಾಪು ಗ್ರಾ.ಪಂಗಳ ಅವಧಿ ಜೂ.28ಕ್ಕೆ ಮುಕ್ತಾಯಗೊಳ್ಳಲಿದೆ. ಕಬಕ, ಕುಡಿಪ್ಪಾಡಿ, 34 ನೆಕ್ಕಿಲಾಡಿ, ಬಲ್ನಾಡು, ಒಳಮೊಗ್ರು, ಬೆಟ್ಟಂಪಾಡಿ, ಅರಿಯಡ್ಕ, ಕೊಳ್ತಿಗೆ, ನೆಟ್ಟಣಿಗೆಮುಡ್ನೂರು ಗ್ರಾ.ಪಂಗಳ ಅವಧಿ ಜೂ. 29ಕ್ಕೆ ಮುಕ್ತಾಯಗೊಳ್ಳಲಿದೆ. ಉಪ್ಪಿನಂಗಡಿ, ಹಿರೇಬಂಡಾಡಿ, ಕೆದಂಬಾಡಿ, ಕೆಯ್ಯೂರು, ನಿಡ್ಪಳ್ಳಿ, ಬಡಗನ್ನೂರು ಗ್ರಾ.ಪಂಗಳ ಅವಧಿ ಜೂ. ೩೦ಕ್ಕೆ ಮುಕ್ತಾಯಗೊಳ್ಳಲಿದೆ. ಬಜತ್ತೂರು, ಮುಂಡೂರು ಗ್ರಾ.ಪಂಗಳ ಅವಧಿ ಜು.೭ಕ್ಕೆ ಮುಕ್ತಾಯಗೊಳ್ಳಲಿದೆ. ಕೋಡಿಂಬಾಡಿ ಗ್ರಾ.ಪಂ ಅವಧಿ ಜು.8ಕ್ಕೆ ಮುಕ್ತಾಯಗೊಳ್ಳಲಿದ್ದು ಈ ಎಲ್ಲಾ ಗ್ರಾ.ಪಂಗಳಿಗೆ ಆಡಳಿತಾಧಿಕಾರಿಗಳನ್ನು ನೇಮಕ ಮಾಡಲಾಗಿದೆ.

ಕಡಬ ತಾಲೂಕಿನ ಅವಧಿ ಮುಗಿಯುವ ಗ್ರಾ.ಪಂಗಳು:
ಸುಬ್ರಹ್ಮಣ್ಯ, ಐತ್ತೂರು, ಬಿಳಿನೆಲೆ, ನೂಜಿಬಾಳ್ತಿಲ ಗ್ರಾ.ಪಂಗಳ ಅವಧಿ ಜೂ.28ಕ್ಕೆ ಮುಕ್ತಾಯಗೊಳ್ಳಲಿದೆ. ಗೋಳಿತೊಟ್ಟು, ಪೆರಾಬೆ, ಎಡಮಂಗಲ, ಬಳ್ಯ, ಶಿರಾಡಿ, ಮರ್ಧಾಳ, ಕೌಕ್ರಾಡಿ, ಸವಣೂರು, ಕಾಣಿಯೂರು, ಕುಟ್ರುಪ್ಪಾಡಿ ಗ್ರಾ.ಪಂ ಗಳ ಅವಧಿಯು ಜೂ. 29ಕ್ಕೆ ಮುಕ್ತಾಯಗೊಳ್ಳಲಿದ್ದು, ನೆಲ್ಯಾಡಿ, ಕೊಯಿಲ, ಆಲಂಕಾರು ಗ್ರಾ.ಪಂಗಳ ಅವಧಿಯು ಜೂ.30ಕ್ಕೆ ಮುಕ್ತಾಯಗೊಳ್ಳಲಿದೆ. ಕೊಣಾಜೆ, ರಾಮಕುಂಜ, ಕೊಂಬಾರು, ಬೆಳಂದೂರು ಗ್ರಾ.ಪಂಗಳ ಅವಧಿಯು ಜು.9ಕ್ಕೆ ಮುಕ್ತಾಯಗೊಳ್ಳಲಿದೆ.

ಪುತ್ತೂರು ತಾಲೂಕಿನ ಗ್ರಾ.ಪಂಗಳಿಗೆ ನೇಮಕಗೊಂಡ ಪ್ರಭಾರ ಆಡಳಿತಾಧಿಕಾರಿಗಳು:
ಕಬಕ ಮತ್ತು ಕುಡಿಪ್ಪಾಡಿ ಗ್ರಾ.ಪಂಗೆ ಸಹಕಾರ ಸಂಘಗಳ ಸಹಾಯಕ ನಿಬಂಧಕಿ ತ್ರಿವೇಣಿ, ಬನ್ನೂರು, ಕೋಡಿಂಬಾಡಿ ಗ್ರಾಪಂಗೆ ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಲೋಕೇಶ್, 34 ನೆಕ್ಕಿಲಾಡಿ ಮತ್ತು ಉಪ್ಪಿನಂಗಡಿ ಗ್ರಾ.ಪಂಗೆ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ನವೀನ್ ಭಂಡಾರಿ, ಹಿರೇಂಬಡಿ ಮತ್ತು ಬಜತ್ತೂರು ಗ್ರಾ.ಪಂಗೆ ಪಶುಸಂಗೋಪನಾ ಇಲಾಖೆಯ ಮುಖ್ಯ ಪಶುವೈದ್ಯಾಧಿಕಾರಿ ಡಾ. ಧರ್ಮಪಾಲ್ ಕೆ, ಬಲ್ನಾಡು, ಆರ್ಯಾಪು ಮತ್ತು ನರಿಮೊಗ್ರು ಗ್ರಾ.ಪಂಗೆ ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕಿ ರೇಖಾ, ಕೆದಂಬಾಡಿ, ಕೆಯ್ಯೂರು ಮತ್ತು ಮುಂಡೂರು ಗ್ರಾ.ಪಂಗಳಿಗೆ ಕೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯಾಧಿಕಾರಿ ಮೋನಪ್ಪ ಪೂಜಾರಿ, ಒಳಮೊಗ್ರು, ಬೆಟ್ಟಂಪಾಡಿ, ಪಾಣಾಜೆ ಗ್ರಾ.ಪಂಗಳಿಗೆ ಕೃಷಿ ಅಧಿಕಾರಿ ಯಶಸ್ ಮಂಜುನಾಥ, ಅರಿಯಡ್ಕ ಮತ್ತು ಕೊಳ್ತಿಗೆ ಗ್ರಾ.ಪಂಗೆ ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಸುರೇಶ್ ಕುಮಾರ್ ಪಿ, ನಿಡ್ಪಳ್ಳಿ, ಬಡಗನ್ನೂರು, ನೆಟ್ಟಣಿಗೆಮುಡ್ನೂರು ಗ್ರಾ.ಪಂಗೆ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಬಿ.ರಾಜಾರಾಮ್ ಅವರನ್ನು ಪ್ರಭಾರ ಆಡಳಿತಾಧಿಕಾರಿಯಾಗಿ ಜಿಲ್ಲಾಧಿಕಾರಿಯವರು ನೇಮಕಗೊಳಿಸಿ ಆದೇಶ ಹೊರಡಿಸಿದ್ದಾರೆ.

ಕಡಬ ತಾಲೂಕಿನ ಗ್ರಾ.ಪಂಗಳಿಗೆ ನೇಮಕಗೊಂಡ ಪ್ರಭಾರ ಆಡಳಿತಾಧಿಕಾರಿಗಳು:
ಕಡಬ ತಾಲೂಕಿನ ಗೋಳಿತೊಟ್ಟು, ನೆಲ್ಯಾಡಿ, ಪೆರಾಬೆ, ಐತ್ತೂರು ಗ್ರಾ.ಪಂಗಳಿಗೆ ಪಶುವೈದ್ಯ ಆಸ್ಪತ್ರೆ ಪುತ್ತೂರು ಇಲ್ಲಿನ ಜಾನುವಾರು ಅಭಿವೃದ್ಧಿ ಅಧಿಕಾರಿ ಹೊನ್ನಪ್ಪ ಬಿ ಗೌಡ, ಕೊಯಿಲ, ಕೊಣಾಜೆ, ರಾಮಕುಂಜ, ಆಲಂಕಾರು ಗ್ರಾ.ಪಂಗಳಿಗೆ ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ ಕಡಬ ಇದರ ಅಡಿಷನಲ್ ಮ್ಯಾನೇಜರ್ ಮಸ್ತಾನ್ ಯು, ಎಡಮಂಗಲ, ಬಳ್ಪ, ಸುಬ್ರಹ್ಮಣ್ಯ, ಶಿರಾಡಿ ಗ್ರಾ.ಪಂಗಳಿಗೆ ಕೇಂದ್ರ ಕೃಷಿ ಇಲಾಖೆ ಸುಳ್ಯ ಇದರ ಸಹಾಯಕ ಕೃಷಿ ಅಧಿಕಾರಿ ಧಾಮೋದರ್ ಪಿ, ಬಿಳಿನೆಲೆ, ನೂಜಿಬಾಳ್ತಿಲ, ಮರ್ಧಾಳ, ಕೊಂಬಾರು, ಕೌಕ್ರಾಡಿ ಗ್ರಾ.ಪಂಗಳಿಗೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗ ಪುತ್ತೂರು ಇದರ ಸಹಾಯಕ ಕಾರ್ಯನಿರ್ವಹಕ ಇಂಜಿನಿಯರ್ ಭರತ್ ಬಿ.ಎಮ್, ಸವಣೂರು, ಬೆಳಂದೂರು, ಕಾಣಿಯೂರು, ಕುಟ್ರುಪ್ಪಾಡಿ ಗ್ರಾ.ಪಂಗಳಿಗೆ ಪಶು ಆಸ್ಪತ್ರೆ ಸುಳ್ಯ ಇದರ ಸಹಾಯಕ ನಿರ್ದೇಶಕ ಗುರುಮೂರ್ತಿ ಅವರನ್ನು ಪ್ರಭಾರ ಆಡಳಿತಾಧಿಕಾರಿಗಳಾಗಿ ಜಿಲ್ಲಾಧಿಕಾರಿಗಳು ನೇಮಕಾತಿ ಆದೇಶ ಹೊರಡಿಸದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.