HomePage_Banner
HomePage_Banner
HomePage_Banner

ಬೆಳಂದೂರಿನಲ್ಲಿ ಶಿವಂ ಎಂಟರ್‌ಪ್ರೈಸಸ್ ಶುಭಾರಂಭ

Puttur_Advt_NewsUnder_1
Puttur_Advt_NewsUnder_1

ಚಿತ್ರ: ಸುಧಾಕರ್ ಕಾಣಿಯೂರು

ಕಾಣಿಯೂರು: ಆತ್ಮವಿಶ್ವಾಸ, ತಾಳ್ಮೆ ಹಾಗೂ ನಂಬಿಕೆಯಿಂದ ಯಾವುದೇ ಕಾರ್ಯ ಯೋಜನೆಯನ್ನು ಗುರಿ ಸಾಧಿಸಲು ಸಾಧ್ಯ. ಸದಾ ನಗುಮುಖದ ಸೇವೆಯಿಂದ ಉದ್ಯಮಿ ಯಶಸ್ವಿಯಾಗಲು ಸಾಧ್ಯ. ಪರಿಸರದ ಎಲ್ಲಾ ಜನತೆಗೆ ಉತ್ತಮ ಸೇವೆ ನೀಡುವುದರ ಜೊತೆಗೆ ಹೆಚ್ಚಿನ ಅಭಿವೃದ್ಧಿ ಹೊಂದಿ ಸಮಾಜಕ್ಕೆ ಒಳ್ಳೆಯ ಸಂದೇಶವನ್ನು ತರುವಂತಾಗಲಿ ಎಂದು ಬೆಳಂದೂರು ಗ್ರಾ.ಪಂ, ಅಧ್ಯಕ್ಷೆ ಉಮೇಶ್ವರಿ ಅಗಳಿ ಹೇಳಿದರು. ಅವರು ಜೂ 26ರಂದು ಬೆಳಂದೂರಿನಲ್ಲಿ ನೂತನವಾಗಿ ಶುಭಾರಂಭಗೊಂಡಿರುವ ಶಿವಂ ಎಂಟರ್‌ಪ್ರೈಸಸ್ ಸಂಸ್ಥೆಯನ್ನು ಉದ್ಘಾಟಿಸಿ ಮಾತನಾಡಿದರು.

ಹೊಸ ಹೊಸ ವ್ಯವಸ್ಥೆಗಳು ಬಂದಾಗ ಬೆಳವಣಿಗೆಯತ್ತ ಸಾಗಲು ಸಾಧ್ಯ. ಈ ನಿಟ್ಟಿನಲ್ಲಿ ಈ ಸಂಸ್ಥೆಯಿಂದ ಬೆಳಂದೂರಿನ ಜನತೆಗೆ ಫಲಪ್ರದ ಸಂಸ್ಥೆಯಾಗಿ ಮೂಡಿಬರಲಿ, ಸಂಸ್ಥೆಯು ಉನ್ನತ್ತ ಮಟ್ಟಕ್ಕೇರಲಿ ಎಂದರು. ಬೆಳಂದೂರು ಗ್ರಾ.ಪಂ, ಅಭಿವೃದ್ಧಿ ಅಧಿಕಾರಿ ಸುಜಾತ ಶುಭಹಾರೈಸಿದರು. ಗ್ರಾ.ಪಂ, ಸದಸ್ಯ ನಝೀರ್ ದೇವಸ್ಯ, ಸಿಬ್ಬಂದಿ ಮಮತಾ, ಕಟ್ಟಡ ಮಾಲಕರಾದ ಚೆನ್ನಪ್ಪ ಗೌಡ ಅಗಳಿ, ಯೋಗೀಶ್ ಆಚಾರ್ಯ ಸೌತೆಮಾರು, ಮಾಲಕರ ತಾಯಿ ದೇವಕಿ ಸೇರಿದಂತೆ ಹಲವಾರು ಮಂದಿ ನೂತನ ಸಂಸ್ಥೆಗೆ ಆಗಮಿಸಿ ಶುಭಹಾರೈಸಿದರು. ಮಾಲಕರಾದ ಪ್ರದೀಪ್ ಸ್ವಾಗತಿಸಿ, ಮಾಲಕರ ತಂದೆ ಕೃಷ್ಣಪ್ಪ ಪೂಜಾರಿ ವಂದಿಸಿದರು.

ಸಂಸ್ಥೆಯ ಮಾಲಕ ಪ್ರದೀಪ್ ಅವರು ಸ್ವಾಗತಿಸಿ, ನಮ್ಮಲ್ಲಿ ಸೋಲಾರ್, ಇನ್ವರ್ಟರ್, ಇಲೆಕ್ಟ್ರೋನಿಕ್ಸ್, ವಾಹನ ಬ್ಯಾಟರಿ ಇತ್ಯಾದಿ ಗೃಹೋಪಯೋಗಿ ವಸ್ತುಗಳ ಮಾರಾಟ ಹಾಗೂ ರಿಪೇರಿಯನ್ನು ಕ್ಲಪ್ತ ಸಮಯದಲ್ಲಿ ಮಾಡಲಾಗುವುದು ಎಂದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.