HomePage_Banner
HomePage_Banner
HomePage_Banner

ಹಳೆ ಪಿಂಚಣಿ ವ್ಯವಸ್ಥೆ ಜಾರಿಗೆ ಆಗ್ರಹಿಸುವಂತೆ ರಾಜ್ಯದಲ್ಲಿ ಟ್ವಿಟ್ಟರ್ ಅಭಿಯಾನ

Puttur_Advt_NewsUnder_1
Puttur_Advt_NewsUnder_1
  • ತಾಲೂಕಿನಲ್ಲಿ ಮಾಸ್ಕ್ ವಿತರಿಸಿ ಜಾಗೃತಿ – ಬೇಡಿಕೆ ಅಭಿಯಾನ
  • ಎನ್‌ಪಿಎಸ್ ಸ್ಕ್ರ್ಯಾಪ್ ಮಾಡಿ, ಒಪಿಎಸ್ ರಿಸ್ಟೋರ್ ಮಾಡಿ – ವಿಮಲ್ ಕುಮಾರ್

ಪುತ್ತೂರು: ಕೊರೊನಾ ವೈರಸ್ ಸೋಂಕು ವಿಶ್ವವನ್ನೇ ತಲ್ಲಣಗೊಳಿಸಿದೆ. ದೇಶದಲ್ಲಿಯೂ ಕೊರೊನಾ ತಡೆಯುವ ನಿಟ್ಟಿನಲ್ಲಿ ರಾಜ್ಯ ಸರಕಾರವೂ ಶ್ರಮಿಸುತ್ತಿದೆ. ಇಂತಹ ಸಂದರ್ಭದಲ್ಲಿ ಕೊರೊನಾ ವಾರಿಯರ್ಸ್ ಆಗಿ ದುಡಿಯುತ್ತಿರುವ ಎನ್‌ಪಿಎಸ್ ನೌಕರರಿಗೂ ಮಹಾಮಾರಿ ಎದುರಾಗಿದೆ. ಈ ನಿಟ್ಟಿನಲ್ಲಿ ಎನ್‌ಪಿಎಸ್ ನೌಕರರ ಸಂಘ ಜೂ.26ರಂದು ಎನ್.ಎಮ್.ಒ.ಪಿ.ಎಸ್ ವತಿಯಿಂದ ಟ್ವಿಟ್ಟರ್ ಅಭಿಯಾನವನ್ನು ರಾಜ್ಯಾದ್ಯಂತ ಹಮ್ಮಿಕೊಂಡಿದ್ದು, ಪುತ್ತೂರು ತಾಲೂಕು ಎನ್.ಪಿ.ಎಸ್ ಸಂಘದಿಂದ ಮಾಸ್ಕ್ ವಿತರಿಸಿ ಜಾಗೃತಿ ಮೂಡಿಸುವ ಮತ್ತು ಬೇಡಿಕೆಯ ಅಭಿಯಾನವನ್ನು ಮಾಡಿದರು.

ರಾಜ್ಯದಲ್ಲಿ ಹಳೆ ಪಿಂಚಣಿ ವ್ಯವಸ್ಥೆ ಜಾರಿಗೆ ಆಗ್ರಹಿಸಿ ಅನೇಕ ಹೋರಾಟಗಳೇ ನಡೆದಿದೆ. ರಾಜ್ಯ ಸರಕಾರವೂ ಹಳೆಯ ಪಿಂಚಣಿ ವ್ಯವಸ್ಥೆಯನ್ನು ಜಾರಿಗೊಳಿಸುವುದಾಗಿ ಭರವಸೆ ನೀಡಿದ್ದರೂ ಇದುವರೆಗೂ ಈಡೇರಿಸಿಲ್ಲ. ಇದೀಗ ಕೊರೊನಾ ವಾರಿಯರ್ಸ್ ಆಗಿ ಬಹುತೇಕ ಎನ್‌ಪಿಎಸ್ ನೌಕರರು ದುಡಿಯುತ್ತಿದ್ದಾರೆ. ಇಂತಹ ಎನ್ ಪಿಎಸ್ ನೌಕರರು ಹಾಗೂ ಅವಲಂಭಿತರರಿಗೆ ಆರ್ಥಿಕ ಭದ್ರತೆಯನ್ನು ಒದಗಿಸುವುದು ರಾಜ್ಯ ಸರಕಾರ ಕರ್ತವ್ಯ. ಈ ಹಿನ್ನೆಲೆಯಲ್ಲಿ ಈ ನಿಟ್ಟಿನಲ್ಲಿ ಎನ್‌ಎಮ್‌ಒಪಿಎಸ್ ಕಾರ್ಯಕಾರಿ ಸಮಿತಿಯು ಪ್ರಸಕ್ತ ಸಂದರ್ಭದಲ್ಲಿ ಸರಕಾರದ ಗಮನವನ್ನು ನಮ್ಮ ಸಮಸ್ಯೆಗಳ ಕಡೆ ಸೆಳೆಯಲು ಟ್ವೀಟರ್ ಅಭಿಯಾನವನ್ನು ಹಮ್ಮಿಕೊಂಡಿದೆ. ಪುತ್ತೂರಿನಲ್ಲಿ ಎನ್‌ಪಿಎಸ್ ನೌಕರರ ಸಂಘ ಸರಕಾರಿ ನೌಕರರಿಗೆ ಮಾಸ್ಕ್ ವಿತರಣೆ ಮಾಡುವ ಕೊರೋನಾ ಮುನ್ನೆಚ್ಚರಿಕೆ ಜಾಗೃತಿ ಮತ್ತು ತಮ್ಮ ಬೇಡಿಕೆಗಳನ್ನು ಸರಕಾರದ ಮುಂದೆ ಇಡುವ ಪ್ರಯತ್ನ ಮಾಡುತ್ತಿದ್ದಾರೆ.

ಎನ್‌ಪಿಎಸ್ ಸ್ಕ್ರ್ಯಾಪ್ ಮಾಡಿ, ಒಪಿಎಸ್ ರಿಸ್ಟೋರ್ ಮಾಡಿ:
ಎನ್‌ಪಿಎಸ್ ಪುತ್ತೂರು ತಾಲೂಕು ಕಾರ್ಯದರ್ಶಿ ವಿಮಲ್ ಕುಮಾರ್ ಅವರು ಮಾತನಾಡಿ ೨೦೦೬ರ ನಂತರ ರಾಜ್ಯ ಸರಕಾರ ಹಳೆ ಪಿಂಚಣಿ ಯೋಜನೆ ಕೈ ಬಿಟ್ಟು ನೂತನ ಪಿಂಚಣಿ ಯೋಜನೆಯನ್ನು ಜಾರಿಗೆ ತಂದಿದೆ. ಆದರೆ ಈ ಕೊರೋನಾ ಸಂದರ್ಭ ವಾಸ್ತವತೆ ಅರ್ಥ ಆಗಿದೆ. ಪ್ರತಿ ತಿಂಗಳು ಹಣ ಕಳೆದು ಕೊಂಡಿದ್ದು, ಕಳೆದ ಎರಡುಮೂರು ತಿಂಗಳಲ್ಲಿ ಪ್ರತಿನೌಕರರು ರೂ.1ಲಕ್ಷ ಮತ್ತು ಅದಕ್ಕಿಂತ ಅಧಿಕ ಮೊತ್ತವನ್ನು ಕೊಂಡಿದ್ದಾರೆ. ನಮ್ಮ ಹಲವು ಹೋರಾಟಗಳ ಮೂಲಕ ಈಗಾಗಲೇ ಸರಕಾರದ ಮುಂದೆ ಹಳೆಯ ಪಿಂಚಣಿ ಯೋಜನೆ ಬೇಕೆಂದು ಬೇಡಿಕೆ ಇಟ್ಟಿದ್ದೇವೆ. ಇದಕ್ಕೆ ಪೂರಕವಾಗಿ ಎನ್.ಎಮ್.ಒ.ಪಿ.ಎಸ್ ವತಿಯಿಂದ ಟಿಟ್ವರ್ ಅಭಿಯಾನ ನಡೆಯುತ್ತಿದೆ. ತಾಲೂಕು ಮಟ್ಟದಲ್ಲಿ ನಾವು ಮಾಸ್ಕ್ ವಿತರಣೆ ಮಾಡುವ ಮೂಲಕ ಜಾಗೃತಿಯ ಜೊತೆಗೆ ಬೇಡಿಕೆ ಮುಂದಿಟುತ್ತಿದ್ದೇವೆ. ಒಟ್ಟಿನಲ್ಲಿ ಭವಿಷ್ಯದ ದೃಷ್ಟಿಯಿಂದ ಎನ್‌ಪಿಎಸ್ ಸ್ಕ್ರ್ಯಾಪ್ ಮಾಡಿ ಒಪಿಎಸ್ ಅನ್ನು ರಿಸ್ಟೋರ್ ಮಾಡುವಂತೆ ಅವರು ಮನವಿ ಮಾಡಿದರು. ಮಾಸ್ಕ್ ವಿತರಣಾ ಅಭಿಯಾನದಲ್ಲಿ ಎನ್‌ಪಿಎಸ್ ನೌಕರರ ಸಂಘದ ರಾಜ್ಯಪರಿಷತ್ ಸದಸ್ಯ ವಿದ್ಯಾಧರ್ ರೈ, ಜಿಲ್ಲಾಧ್ಯಕ್ಷ ಇಬ್ರಾಹಿಂ, ಅಶ್ರಫ್, ಪ್ರದೀಪ್, ಹರೀಪ್ರಸಾದ್, ಶಿವಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.