HomePage_Banner
HomePage_Banner
HomePage_Banner

ಕುಂಬ್ರ ವರ್ತಕರ ಸಂಘದಿಂದ ಪಾರ್ಶ್ವವಾಯು ಪೀಡಿತ ರಿಕ್ಷಾ ಚಾಲಕರಿಗೆ ನೆರವು

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಕಳೆದ ಹಲವು ವರ್ಷಗಳಿಂದ ಕುಂಬ್ರ ಪೇಟೆಯಲ್ಲಿ ರಿಕ್ಷಾ ಚಾಲಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ದೇರ್ಲ ನಿವಾಸಿ ವಸಂತ ಪೂಜಾರಿ ಎಂಬವರಿಗೆ ಇತ್ತೀಚೆಗ ಪಾರ್ಶ್ವವಾಯು ಆಗಿದ್ದು ದೇಹದ ಒಂದು ಭಾಗದ ಅಸ್ತಿತ್ವವನ್ನು ಕಳೆದುಕೊಂಡಿದ್ದರು. ಬಡ ಕುಟುಂಬದ ಇವರಿಗೆ ಕುಂಬ್ರ ವರ್ತಕರ ಸಂಘದ ವತಿಯಿಂದ ನಗದು ಮತ್ತು ದಿನಸಿ ಸಾಮಾಗ್ರಿಗಳ ನೆರವು ಅನ್ನು ನೀಡಲಾಯಿತು. ಜೂ.೨೬ ರಂದು ಕುಂಬ್ರ ಶ್ರೀ ರಾಮ ಭಜನಾ ಮಂದಿರದ ಬಳಿ ನಗದು ಮತ್ತು ದಿನಸಿ ಸಾಮಾಗ್ರಿಗಳನ್ನು ವಸಂತ ಪೂಜಾರಿ ಕುಟುಂಬಕ್ಕೆ ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ಕುಂಬ್ರ ವರ್ತಕರ ಸಂಘದ ಅಧ್ಯಕ್ಷ ಎಸ್.ಮಾಧವ ರೈ ಕುಂಬ್ರ, ಗೌರವ ಸಲಹೆಗಾರರಾದ ಕುಂಬ್ರ ದುರ್ಗಾಪ್ರಸಾದ್ ರೈ, ಅಬ್ದುಲ್ ರಹೀಮಾನ್ ಹಾಜಿ ಅರಿಯಡ್ಕ, ಚಂದ್ರಕಾಂತ ಶಾಂತಿವನ, ಮಾಜಿ ಅಧ್ಯಕ್ಷರುಗಳಾದ ಸುಂದರ್ ರೈ ಮಂದಾರ, ಮೆಲ್ವಿನ್ ಮೊಂತೆರೋ, ನಾರಾಯಣ ಪೂಜಾರಿ ಕುರಿಕ್ಕಾರ, ದಿವಾಕರ ಶೆಟ್ಟಿ,ಸ್ಥಾಪಕ ಅಧ್ಯಕ್ಷ ಶ್ಯಾಮ್‌ಸುಂದರ ರೈ ಕೊಪ್ಪಳ, ಸಂಶುದ್ದೀನ್ ಎ.ಆರ್, ನಿತೀಶ್ ಕುಮಾರ್ ಶಾಂತಿವನ, ಮಹಮ್ಮದ್ ಪಿ.ಕೆ, ಭವ್ಯ ರೈ, ಜಯರಾಮ ಆಚಾರ್ಯ, ಶುತಿಚಂದ್ರ, ಅಶೋಕ್ ಕುಮಾರ್ ಬೊಳ್ಳಾಡಿ, ನಾವು ನಮ್ಮವರು ಕೂಟದ ಸಂಚಾಲಕ ಶಿವಶ್ರೀರಂಜ್ ರೈ ದೇರ್ಲ, ರಾಜೇಶ್ ರೈ ಪರ್ಪುಂಜ, ರಮೇಶ್ ಆಳ್ವ ಕಲ್ಲಡ್ಕ, ಉದಯ ಆಚಾರ್ಯ ಕೃಷ್ಣನಗರ, ಪದ್ಮನಾಭ ಆಚಾರ್ಯ, ಪುರಂದರ ರೈ ಕುಯ್ಯಾರು, ಹರೀಶ್ ರೈ ಜಾರತ್ತಾರು, ಗೋಪಾಲಕೃಷ್ಣ ರೈ ಬಂಟುಕಲ್ಲು, ಅಶೋಕ್ ಬಡಕೋಡಿ, ಶೀನಪ್ಪ ನಾಕ್, ಮತ್ತಿತರರು ಉಪಸ್ಥಿತರಿದ್ದರು.

39 ಸಾವಿರ ನಗದು, ದಿನಸಿ ಸಾಮಾಗ್ರಿ ಹಸ್ತಾಂತರ
ವರ್ತಕರ ಸಂಘವು ತನ್ನ ವಾಟ್ಸಫ್ ಗ್ರೂಪ್‌ನಲ್ಲಿ ವಸಂತ ಪೂಜಾರಿಯವರಿಗೆ ಸಹಾಯ ಮಾಡುವಂತೆ ಮನವಿ ಮಾಡಿಕೊಂಡಿತ್ತು. ಇದಕ್ಕೆ ಸ್ಪಂದಿಸಿದ ವರ್ತಕರು ಮತ್ತು ದಾನಿಗಳು ತಮ್ಮ ಕೈಯಲ್ಲಾದ ಸಹಕಾರ ನೀಡಿದ್ದರು. ಸುಮಾರು ೮೯ ಮಂದಿಯಿಂದ ಸಂಗ್ರಹವಾದ ೩೯ ಸಾವಿರದ ೫೦೦ ರೂಪಾಯಿಗಳನ್ನು ಮತ್ತು ಸುಮಾರು ೨೫೬೦ ರೂ.ವೆಚ್ಚದ ದಿನಸಿ ಸಾಮಾಗ್ರಿಗಳನ್ನು, ಶ್ರೀರಾಮ ಭಜನಾ ಮಂದಿರದ ವತಿಯಿಂದ ೫೦ ಕೆ.ಜಿ ಅಕ್ಕಿಯನ್ನು ವಸಂತ ಪೂಜಾರಿಯವರ ಕುಟುಂಬಕ್ಕೆ ಹಸ್ತಾಂತರಿಸಲಾಯಿತು. ಈ ಹಿಂದೆಯೂ ವರ್ತಕರ ಸಂಘವು ಅನಾರೋಗ್ಯ ಪೀಡಿತ ಹಲವು ಮಂದಿಗೆ ವಾಟ್ಸಫ್ ಗ್ರೂಪ್ ಮೂಲಕ ಮನವಿ ಮಾಡಿ ಧನ ಸಂಗ್ರಹ ಮಾಡಿ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಕುಂಬ್ರ ಪೇಟೆಯಲ್ಲಿ ರಿಕ್ಷಾ ಚಾಲಕರಾಗಿ ವೃತ್ತಿ ನಿರ್ವಹಿಸುತ್ತಿದ್ದ ವಸಂತ ಪೂಜಾರಿಯವರಿಗೆ ಪಾಶ್ವವಾಯು ಉಂಟಾಗಿ ಕಷ್ಟದಲ್ಲಿರುವ ಬಗ್ಗೆ ನಮ್ಮ ಸಂಘದ ಗಮನಕ್ಕೆ ಬಂತು. ವಾಟ್ಸಫ್ ಮೂಲಕ ಅವರಿಗೆ ಸಹಾಯ ಮಾಡುವಂತೆ ಕೇಳಿಕೊಂಡ ಮೇರೆಗೆ ವರ್ತಕರು ಸೇರಿದಂತೆ ಇತರ ದಾನಿಗಳು ಸಹಕಾರ ಮಾಡಿದ್ದರು. ಆ ಹಣವನ್ನು ಅವರ ಕುಟುಂಬಕ್ಕೆ ಹಸ್ತಾಂತ ಮಾಡಿದ್ದೇವೆ. ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು – ಎಸ್.ಮಾಧವ ರೈ ಕುಂಬ್ರ, ಅಧ್ಯಕ್ಷರು ವರ್ತಕರ ಸಂಘ

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.