Home_Page_Advt
Home_Page_Advt
Home_Page_Advt

ಹಿಂದೂ ಜಾಗರಣಾ ವೇದಿಕೆ ಕೌಡಿಚ್ಚಾರು ಘಟಕದಿಂದ ಯೋಧರಿಗೆ ಶ್ರದ್ಧಾಂಜಲಿ

Puttur_Advt_NewsUnder_1
Puttur_Advt_NewsUnder_1

ಅರಿಯಡ್ಕ: ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ವೀರಯೋಧರಿಗೆ ಹಿಂದೂ ಜಾಗರಣಾ ವೇದಿಕೆ ಕೌಡಿಚ್ಚಾರು ಘಟಕ ವತಿಯಿಂದ ಜೂ.25ರಂದು ಶ್ರದ್ಧಾಂಜಲಿ ಮತ್ತು ಭಾರತ ಪೂಜಾನ ಕಾರ್ಯಕ್ರಮ ಕೌಡಿಚ್ಚಾರಿನಲ್ಲಿ ನಡೆಯಿತು. ನೂರಾರು ಕಾರ್ಯಕರ್ತರು ಹಣತೆ ಹಚ್ಚಿ ಕೌಡಿಚ್ಚಾರಿನಲ್ಲಿ ಮೆರವಣಿಗೆಯಲ್ಲಿ ಪಾಲ್ಗೊಂಡರು. ಅರಿಯಡ್ಕ ಗ್ರಾಮ ಪಂಚಾಯತ್ ಸದಸ್ಯ ತಿಲಕ್ ರೈ ಕುತ್ಯಾಡಿ ಹುತಾತ್ಮ ಯೋಧರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿ ಮಾಹಿತಿ ನೀಡಿದರು. ನಂತರ ಶ್ರೀ ಕೃಷ್ಣ ಭಜನಾ ಮಂದಿರದಲ್ಲಿ ಭಾರತ ಪೂಜಾನ ಕಾರ್ಯಕ್ರಮ ನಡೆಯಿತು. ತಾಯಿಭಾರತ ಮಾತೆಯ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ನಡೆಯಿತು.

ವೇದಿಕೆಯಲ್ಲಿ ತಾಲೂಕು ಹಿಂದೂ ಜಾಗರಣಾ ವೇದಿಕೆ ಅಧ್ಯಕ್ಷ ಅಶೋಕ್ ತ್ಯಾಗರಾಜೆ, ತಾಲೂಕು ಕಾರ್ಯದರ್ಶಿ ಹರಿಪ್ರಸಾದ್ ಪಡುಮಲೆ, ಕೌಡಿಚ್ಚಾರು ಘಟಕದ ಪ್ರಧಾನ ಕಾರ್ಯದರ್ಶಿ ಅನಿಲ್ ಕೌಡಿಚ್ಚಾರು, ಕುಂಬ್ರ ಸಿ.ಎ ಬ್ಯಾಂಕ್ ಉಪಾಧ್ಯಕ್ಷ ಉಮೇಶ್ ಗೌಡ ಕನ್ನಯ ಉಪಸ್ಥಿತರಿದ್ದರು. ಪುತ್ತೂರು ನಗರ ಕಾರ್ಯವಾಹಕ ಚಂದ್ರಶೇಖರ ಬೌದ್ಧಿಕ್ ಮಾಡಿದರು. ತಾಲೂಕು ಹಿಂದೂಜಾಗರಣಾ ವೇದಿಕೆಯ ನಿಕಟ ಪೂರ್ವ ಅಧ್ಯಕ್ಷ ಸಚಿನ್ ರೈ ಪಾಪೆಮಜಲು ಸ್ವಾಗತಿಸಿ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.