Home_Page_Advt
Home_Page_Advt
Home_Page_Advt

ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ಮುನ್ನೆಚ್ಚರಿಕೆ | ಶುಚಿತ್ವ ಕಾಪಾಡಲು ನಗರಸಭೆಯಿಂದ ಕಟ್ಟುನಿಟ್ಟಿನ ಸೂಚನೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ನಗರಸಭಾ ವ್ಯಾಪ್ತಿಯಲ್ಲಿ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟುವ ಸಲುವಾಗಿ ಮುಂಜಾಗ್ರತಾ ಕ್ರಮವಾಗಿ ಸಾರ್ವಜನಿನಕರು ತಮ್ಮ ಒಡೆತನದ ಎಲ್ಲಾ ರೀತಿಯ ಖಾಲಿ ನಿವೇಶನಗಳು, ಮನೆ, ಅಂಗಡಿ ಮುಂಗಟ್ಟುಗಳು ಹಾಗು ಇತ್ಯಾದಿ ಸ್ಥಳಗಳ ಹೊರಭಾಗ ಮತ್ತು ಒಳಾಂಗಣದ ಶುಚಿತ್ವ ಕಾಪಾಡಬೇಕೆಂದು ನಗರಸಭೆ ಕಟ್ಟುನಿಟ್ಟಿನ ಸೂಚನೆಯನ್ನು ನೀಡಿದೆ.

ಪಾಲಿಸಬೇಕಾದ ಸೂಚನೆಗಳು:
ಖಾಲಿ ನಿವೇಶನದಲ್ಲಿ ಬೆಳದಿರುವ ಕಳೆಗಳನ್ನು ತೆರವುಗೊಳಿಸಬೇಕು ಮತ್ತು ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಅಂಗಡಿ ಮುಂಗಟ್ಟು ಹಾಗು ಮನೆಯ ಮಾಲಿಕರು ತಮ್ಮ ಮನೆಯ ಸುತ್ತಮುತ್ತ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಸಾರ್ವಜನಿಕರು ಹೊರಗಡೆ ಬರುವಾಗ ಕಡ್ಡಾಯವಾಗಿ ಮಾಸ್ಕ್ ಧರಿಸುವುದು ಮತ್ತು ಸಾಮಾಜಿಕ ಅಂತರವನ್ನು ಕಾಪಾಡುವುದು. ಈ ಎಲ್ಲಾ ಸೂಚನೆಯನ್ನು ಪಾಲಿಸಲು ವಿಫಲವಾದಲ್ಲಿ ಸಂಬಂಧಿಸಿದವರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ನಗರಸಭೆ ಪೌರಾಯುಕ್ತೆ ರೂಪಾ ಶೆಟ್ಟಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.