HomePage_Banner
HomePage_Banner
HomePage_Banner
HomePage_Banner
HomePage_Banner
HomePage_Banner

ಕೊರೋನಾ ನಿಯಂತ್ರಣಕ್ಕೆ ಜಮಾಅತ್ ಕಮಿಟಿಗಳಿಂದ ಕಠಿಣ ನಿಯಮ | ಜಮಾಅತರಿಗೆ ಮಾತ್ರ ಮಸೀದಿ ಪ್ರವೇಶಕ್ಕೆ ಅವಕಾಶ…!

Puttur_Advt_NewsUnder_1
Puttur_Advt_NewsUnder_1

@ಯೂಸುಫ್ ರೆಂಜಲಾಡಿ

  • ನಿಯಮ ಪಾಲಿಸದವರು ಮಸೀದಿಗೆ ಬರುವುದು ಬೇಡ-ಹುಸೈನ್ ದಾರಿಮಿ

ಪುತ್ತೂರು: ರಾಜ್ಯದಲ್ಲಿ ಕೊರೋನಾ ದಿನೇ ದಿನೇ ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ದ.ಕ ಜಿಲ್ಲೆಯ ಮಸೀದಿಗಳಲ್ಲಿ ನಮಾಜ್ ಹಾಗೂ ಶುಕ್ರವಾರದ ವಿಶೇಷ ನಮಾಜ್‌ಗೆ ವಿವಿಧ ರೀತಿಯ ಕಠಿಣ ನಿಯಮಾವಳಿಗಳನ್ನು ವಿಧಿಸಲಾಗಿದ್ದು ಕೊರೋನಾ ವಿರುದ್ಧದ ಜಾಗೃತಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಿದೆ. ಪುತ್ತೂರು ತಾಲೂಕಿನಲ್ಲೂ ಮಸೀದಿ ಆಡಳಿತ ಕಮಿಟಿಗಳು ನಿಯಮಾವಳಿಗಳನ್ನು ಬಿಗಿಗೊಳಿಸಿದ್ದು ಕೊರೋನಾ ಹರಡದಂತೆ ಎಲ್ಲ ರೀತಿಯ ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸುತ್ತಿದೆ. ಸರಕಾರದ ಆದೇಶಗಳನ್ನು ಕಟ್ಟು ನಿಟ್ಟಾಗಿ ಪಾಲಿಸುವುದರ ಜೊತೆಗೆ ತನ್ನದೇ ಆದ ಕೆಲವು ನಿಯಮಗಳನ್ನು ರೂಪಿಸಿಕೊಂಡು ಕೊರೋನಾ ವಿರುದ್ಧದ ಜಾಗೃತಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಿದೆ. ಪೇಟೆ ಪರಿಸರಕ್ಕೆ ಹೊಂದಿಕೊಂಡಿರುವ ಬಹುತೇಕ ಮಸೀದಿಗಳು ಮುಂಜಾಗ್ರತಾ ಕ್ರಮವಾಗಿ ಇನ್ನೂ ಬಾಗಿಲು ತೆರೆದಿಲ್ಲ. ಶುಕ್ರವಾರದ ಜುಮಾ ನಮಾಜ್ ಕೂಡಾ ನಿರ್ವಹಿಸುತ್ತಿಲ್ಲ. ಗ್ರಾಮಾಂತರ ಪ್ರದೇಶದ ಮಸೀದಿಗಳಲ್ಲಿ ದಿನದ ಐದು ಹೊತ್ತಿನ ನಮಾಜ್‌ಗೆ ಅವಕಾಶವಿದ್ದರೂ ನಮಾಜಿಗೆ ಭಾಗವಹಿಸುವವರ ಸಂಖ್ಯೆ ವಿರಳವಾಗಿದೆ. ಶುಕ್ರವಾರದ ಜುಮಾ ವಿಶೇಷ ನಮಾಜ್‌ಗೆ ಗ್ರಾಮೀಣ ಪ್ರದೇಶದಲ್ಲಿ ಆಯಾ ಜಮಾಅತ್‌ಗೊಳಪಟ್ಟ ಎಲ್ಲರೂ ಭಾಗವಹಿಸುತ್ತಿದ್ದಾರೆ. ಮಸೀದಿಗಳು ತೆಗೆದುಕೊಂಡಿರುವ ತೀರ್ಮಾನಗಳನ್ನು ಪಾಲಿಸದವರಿಗೆ ಮಸೀದಿ ಪ್ರವೇಶಕ್ಕೆ ಅವಕಾಶವನ್ನೂ ನಿರಾಕರಿಸಲಾಗುತ್ತಿದೆ. ಮಸೀದಿಯ ನೀರಿನ ಟ್ಯಾಂಕ್‌ಗಳನ್ನು ಖಾಲಿ ಮಾಡಲಾಗಿದ್ದು ಶೌಚಾಲಯಗಳನ್ನು ಬಂದ್ ಮಾಡಲಾಗಿದೆ.

 

ಹೊರ ಜಮಾಅತರಿಗೆ ಮಸೀದಿ ಪ್ರವೇಶವಿಲ್ಲ:
ಗ್ರಾಮಾಂತರ ಪ್ರದೇಶದಲ್ಲಿ ಮಸೀದಿಗಳಲ್ಲಿ ನಮಾಜು ನಡೆಯುತ್ತಿದೆ. ಮನೆಯಲ್ಲೇ ವುಝೂ(ಅಂಗ ಸ್ನಾನ) ಮಾಡಿ ಬರುವುದು, ಸ್ಯಾನಿಟೈಝರ್ ಉಪಯೋಗಿಸಿ ಮತ್ತು ಮಾಸ್ಕ್ ಧರಿಸಿಕೊಂಡು ಮಸೀದಿ ಪ್ರವೇಶಿಸುವುದು, ಸುರಕ್ಷಿತ ಅಂತರ ಕಾಯ್ದುಕೊಂಡು ನಮಾಜು ಮಾಡುವುದನ್ನು ಈಗಾಗಲೇ ಕಡ್ಡಾಯಗೊಳಿಸಲಾಗಿದೆ. ಶುಕ್ರವಾರದ ಜುಮಾ ವಿಶೇಷ ನಮಾಜ್‌ಗೆ ಹೊರ ಜಮಾಅತರಾಗಲೀ, ಯಾತ್ರಿಕರಿಗಾಗಲೀ, ಜಮಾಅತ್ ವ್ಯಾಪ್ತಿಯ ಮನೆಗಳಿಗೆ ಬಂದ ಸಂಬಂಧಿಕರಿಗೆ, ನೆಂಟರಿಷ್ಟರಿಗೆ ಹೀಗೆ ಎಲ್ಲರಿಗೂ ಅವಕಾಶ ನಿರಾಕರಿಸಲಾಗಿದೆ. ಆಯಾ ಜಮಾಅತರಿಗೆ ಮಾತ್ರ ನಮಾಜ್‌ಗೆ ಅವಕಾಶ ನೀಡುವ ತೀರ್ಮಾನವನ್ನು ತಾಲೂಕಿನ ಬಹುತೇಕ ಜಮಾಅತ್ ಕಮಿಟಿಗಳು ನಿರ್ಣಯ ಅಂಗೀಕರಿಸಿದೆ.

ಅಝಾನ್ ಆದ ತಕ್ಷಣ ನಮಾಜು:
ಸಾಮಾನ್ಯವಾಗಿ ಅಝಾನ್(ಬಾಂಗ್) ಆದ ನಂತರ ನಿರ್ಧಿಷ್ಟ ಸಮಯ ಕಳೆದು ನಮಾಜು ಮಾಡುವ ಪರಿಪಾಠವಿತ್ತು. ಆದರೆ ಕೊರೋನಾ ಲಾಕ್‌ಡೌನ್ ನಿಯಮಾವಳಿ ಕಾರಣದಿಂದ ಅಝಾನ್ ಆದ ತಕ್ಷಣ ನಮಾಜು ಮಾಡಿ ಮಸೀದಿಯನ್ನು ಬಂದ್ ಮಾಡಲಾಗುತ್ತಿದೆ. ಶುಕ್ರವಾರದ ಖುತುಬಾ ಪಾರಾಯಣ ಮತ್ತು ಜುಮಾ ನಮಾಜನ್ನು ಕೂಡಾ ಅಝಾನ್ ಆದ ತಕ್ಷಣವೇ ನಿರ್ವಹಿಸಲಾಗುತ್ತಿದೆ. ನಮಾಜು ಮುಗಿದ ಬಳಿಕ ಮಸೀದಿ ವಠಾರದಲ್ಲಿ ಉಳಿದುಕೊಳ್ಳುವುದಕ್ಕೂ ಅವಕಾಶ ನಿರಾಕರಿಸಲಾಗಿದೆ.

ಮಸೀದಿ ಬಳಿ ಬ್ಯಾನರ್ ಅಳವಡಿಕೆ:
ತಾಲೂಕಿನ ಬಹುತೇಕ ಮಸೀದಿಗಳ ಮುಂಭಾಗದಲ್ಲಿ `ಸೂಚನಾ ಫಲಕ’ ಬ್ಯಾನರ್ ಅಳವಡಿಸಲಾಗಿದ್ದು ಅದರಲ್ಲಿ ಮಸೀದಿಗೆ ಹೊರಗಿನವರಿಗೆ ಅವಕಾಶವಿಲ್ಲವೆಂದೂ, ಮಸೀದಿಗಳಲ್ಲಿ ಪಾಲಿಸಬೇಕಾದ ನಿಯಮಾವಳಿಗಳ ಬಗ್ಗೆ ತಿಳಿಸಲಾಗಿದೆ.

ನಿಯಮ ಪಾಲಿಸದವರು ಮಸೀದಿಗೆ ಬರುವುದೇ ಬೇಡ-ಹುಸೈನ್ ದಾರಿಮಿ
ಜೂ.೨೬ರಂದು ರೆಂಜಲಾಡಿ ಬದ್ರಿಯಾ ಜುಮಾ ಮಸೀದಿಯಲ್ಲಿ ನಡೆದ ಜುಮಾ ನಮಾಜ್ ಬಳಿಕ ಮಸೀದಿಯ ಅಧ್ಯಕ್ಷ ಹುಸೈನ್ ದಾರಿಮಿ ರೆಂಜಲಾಡಿ ಅವರು ಕೆಲಹೊತ್ತು ಕೊರೋನಾ ಕುರಿತ ಜಾಗೃತಿ ಭಾಷಣ ನಡೆಸಿದರು. ಕೊರೋನಾ ವೈರಸ್ ನಿಯಂತ್ರಣದ ವಿಚಾರದಲ್ಲಿ ಸರಕಾರ, ಆರೋಗ್ಯ ಇಲಾಖೆ ವಿವಿಧ ನಿಯಮಗಳನ್ನು ಜಾರಿಗೊಳಿಸಿದ್ದು ಅದನ್ನು ಪಾಲಿಸುವುದು ನಮ್ಮ ಜವಾಬ್ದಾರಿ. ಮಸೀದಿಗಳಲ್ಲಿ ನಮಾಜ್‌ಗೆ ಬರುವವರಿಗೆ ವಿವಿಧ ನಿಯಮಗಳನ್ನು ಪಾಲಿಸಲು ತಿಳಿಸಲಾಗಿದೆ. ನಿಯಮ ಪಾಲಿಸದವರು ಮಸೀದಿಗೆ ಬರುವದೇ ಬೇಡ. ಹೊರ ರಾಜ್ಯಗಳಿಂದ ಬಂದವರು, ಬೇರೆ ಜಿಲ್ಲೆಗಳಿಗೆ ಹೋಗಿ ಬರುವವರು ನಿರ್ಧಿಷ್ಟ ದಿನಗಳ ವರೆಗೆ ಮಸೀದಿಗೆ ಬರಬಾರದು ಎಂದು ಅವರು ಹೇಳಿದರು. ಇತ್ತೀಚೆಗೆ ಪೊಲೀಸ್ ಇಲಾಖೆ ಮಸೀದಿ ಪ್ರಮುಖರ ಜೊತೆ ಸಭೆ ನಡೆಸಿ ಮುಂಜಾಗ್ರತೆ ಕ್ರಮ ಕೈಗೊಳ್ಳುವ ಬಗ್ಗೆ ವಿಷಯ ವಿನಿಮಯ ಮಾಡಿಕೊಂಡಿದೆ. ಕೊರೋನಾ ನಿಯಂತ್ರಣ ಕೇವಲ ಪೊಲೀಸರ ಕರ್ತವ್ಯವಲ್ಲ, ಸ್ವಯಂ ಆಗಿ ನಾವು ಜಾಗೃತರಾಗಬೇಕು, ಕೊರೋನಾ ಲಾಕ್‌ಡೌನ್ ನಿಯಮ ಪಾಲಿಸದವರ ಜೊತೆ ರಾಜಿ ಇಲ್ಲ ಎಂದು ಹುಸೈನ್ ದಾರಿಮಿ ಹೇಳಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.