Home_Page_Advt
Home_Page_Advt
Home_Page_Advt

ಉಪ್ಪಿನಂಗಡಿ, ಇಳಂತಿಲ, ಕೊಯಿಲ ಪರಿಸರದಲ್ಲಿ ಡೆಂಗ್ಯು ಪ್ರಕರಣ | 2 ಖಾಸಗಿ ಆಸ್ಪತ್ರೆಯಿಂದ 40ಕ್ಕೂ ಅಧಿಕ ಮಂದಿಗೆ ಚಿಕಿತ್ಸೆ

Puttur_Advt_NewsUnder_1
Puttur_Advt_NewsUnder_1

ಉಪ್ಪಿನಂಗಡಿ: ಒಂದೆಡೆ ಕೊರೊನೊ ಅಟ್ಟಹಾಸ ದಿನೇ ದಿನೇ ಅಧಿಕವಾಗುತ್ತಿದ್ದಂತೆ, ಮಳೆಗಾಲ ಪ್ರಾರಂಭದ ದಿನಗಳಿಂದ ಅಲ್ಲಲ್ಲಿ ಡೆಂಗ್ಯೂ ಪ್ರಕರಣಗಳೂ ಕಾಡಲಾರಂಭಿಸಿದೆ. ಉಪ್ಪಿನಂಗಡಿ ಸೇರಿದಂತೆ ಆಸುಪಾಸಿನ ಗ್ರಾಮಗಳಲ್ಲಿ ಸುಮಾರು ೪೦ಕ್ಕೂ ಅಧಿಕ ಮಂದಿ ಡೆಂಗ್ಯೂ ಜ್ವರ ಪೀಡಿತರಾಗಿ ಚಿಕಿತ್ಸೆ ಪಡೆಯುತ್ತಿರುವ ಬಗ್ಗೆ ದೂರುಗಳು ವ್ಯಕ್ತವಾಗಿದೆ.

ಉಪ್ಪಿನಂಗಡಿ ಪೇಟೆಗೆ ಸಂಬಂಧಿಸಿದಂತೆ ಗಾಂಧಿಪಾರ್ಕ್ ಮತ್ತು ಹಳೇ ಬಸ್ಟೆಂಡ್ ಬಳಿಯ ಕಾರ್ಖಾನೆ ಪರಿಸರದಲ್ಲಿ ೫ ಮಂದಿ ಜ್ವರದಿಂದ ಬಳಲುತ್ತಿದ್ದಾರೆ ಎಂದು ಹೇಳಲಾಗಿದೆ. ಪೆರಿಯಡ್ಕ, ನಟ್ಟಿಬೈಲ್, ೩೪-ನೆಕ್ಕಿಲಾಡಿ ಪರಿಸರದಲ್ಲಿ ೫ ಮಂದಿ ಜ್ವರದಲ್ಲಿ ಇದ್ದವರು ಇದೀಗ ಅವರು ಗುಣಮುಖರಾಗಿದ್ದಾರೆ ಎಂದು ತಿಳಿದು ಬಂದಿದೆ.

ಉಪ್ಪಿನಂಗಡಿಯ ೨ ಖಾಸಗಿ ಆಸ್ಪತ್ರೆಯಲ್ಲಿ ಜೂನ್ ತಿಂಗಳ ಆರಂಭ ಮತ್ತು ಮಳೆಗಾಲ ಪ್ರಾರಂಭ ಆದಾಗಿನಿಂದ ಒಂದೊಂದು ಆಸ್ಪತ್ರೆಯಲ್ಲಿ ಸರಾಸರಿ ದಿನಕ್ಕೆ ಇಬ್ಬರು ಡೆಂಗ್ಯೂ ಜ್ವರ ಪೀಡಿತರು ಚಿಕಿತ್ಸೆ ಪಡೆಯುತ್ತಿದ್ದು, ೨ ಆಸ್ಪತ್ರೆಗಳಲ್ಲಿ ಸುಮಾರು ೪೦ಕ್ಕೂ ಅಧಿಕ ಮಂದಿ ಡೆಂಗ್ಯೂ ಜ್ವರ ಪೀಡಿತರಾಗಿ ಚಿಕಿತ್ಸೆ ಪಡೆದಿದ್ದಾರೆ. ಇಲ್ಲಿ ಚಿಕಿತ್ಸೆ ಪಡೆದವರು ಇಳಂತಿಲ, ಕೊಯಿಲ, ಬಜತ್ತೂರು, ನೆಲ್ಯಾಡಿ, ಹಿರೇಬಂಡಾಡಿ ಪರಿಸರದವರೂ ಒಳಗೊಂಡಿದ್ದರು ಎಂದು ಹೇಳಲಾಗಿದೆ.

ಉಪ್ಪಿನಂಗಡಿಯಲ್ಲಿ ಇನ್ನಷ್ಟು ಹರಡುವ ಭೀತಿ:
ಉಪ್ಪಿನಂಗಡಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ರಾಜಧಾನಿ ಟವರ್ ಬಳಿ ಮಲೀನ ನೀರು ಸರಾಗವಾಗಿ ಹರಿದಾಡದೆ ಅಲ್ಲೇ ನೀರು ನಿಲುಗಡೆ ಆಗುತ್ತಿದ್ದು, ಇದರಿಂದಾಗಿಯೇ
ಉಪ್ಪಿನಂಗಡಿ ಪೇಟೆಗೆ ಡೆಂಗ್ಯೂ, ಮಲೇರಿಯಾ ಕಾಯಿಲೆ ಹರಡುವಂತಾಗಿದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಸಂಬಂಧ ಪಟ್ಟ ಇಲಾಖೆ ಗಮನ ಹರಿಸುವಂತೆ ಆಗ್ರಹ ವ್ಯಕ್ತವಾಗಿದೆ.

ಹೆದ್ದಾರಿ ಇಲಾಖೆ ನಿರ್ಲಕ್ಷತೆಯಿಂದ ಹೀಗಾಗಿದೆ-ಅಬ್ದುಲ್ ರಹಿಮಾನ್
ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿ ಸಲುವಾಗಿ ರಾಜಧಾನಿ ಟವರ್ ಬಳಿ ಹೆದ್ದಾರಿ ಇಲಾಖೆ ರಸ್ತೆಯನ್ನು ಅಗೆದು ಹಾಕಿದ್ದು, ಅಲ್ಲಿ ಈ ಹಿಂದೆ ಇದ್ದ ನೀರು ಹರಿದು ಹೋಗುವ ಮೋರಿ ತೆಗೆಯಲಾಗಿದೆ. ಗಾಂಧಿಪಾರ್ಕ್ ಬಳಿಯಿಂದ ಬರುವ ಮಳೆ ನೀರು ಮತ್ತು ಚರಂಡಿ ನೀರು ಅಲ್ಲಿ ತನಕ ಬಂದು ಮುಂದೆ ಹರಿದು ಹೋಗದೆ ನಿಲುಗಡೆ ಆಗುತ್ತಿದೆ. ಈ ಬಗ್ಗೆ ಹಲವು ಬಾರಿ ಹೆದ್ದಾರಿ ಇಲಾಖೆಯವರ ಗಮನಕ್ಕೆ ತರಲಾಗಿದೆ. ಅದಾಗ್ಯೂ ಇಲ್ಲಿನ ಸಮಸ್ಯೆ ಬಗ್ಗೆ ಪಿಡಿಓ ಗಮನಕ್ಕೂ ತರಲಾಗಿದೆ. ಅದರ ಹೊರತಾಗಿ ಹೆದ್ದಾರಿಗೆ ಸೇರಿದ ಜಾಗ ಆಗಿರುವುದರಿಂದಾಗಿ ಪಂಚಾಯಿತಿ ವತಿಯಿಂದ ಅಷ್ಟು ದೊಡ್ಡ ಕಾಮಗಾರಿ ಮಾಡಲು ಸಾಧ್ಯವಾಗುವುದಿಲ್ಲ ಎಂದು ಉಪ್ಪಿನಂಗಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ. ಅಬ್ದುಲ್ ರಹಿಮಾನ್ ಪ್ರತಿಕ್ರಿಯಿಸಿದ್ದಾರೆ.

ಉಪ್ಪಿನಂಗಡಿಯಲ್ಲಿ ೫ ಪ್ರಕರಣ ದಾಖಲಾಗಿದೆ-ವೈದ್ಯಾಧಿಕಾರಿ
ಉಪ್ಪಿನಂಗಡಿ ಗ್ರಾಮದ ಪೆರಿಯಡ್ಕ, ನಟ್ಟಿಬೈಲ್ ಮತ್ತು ನೆಕ್ಕಿಲಾಡಿ ಪರಿಸರದ ೫ ಮಂದಿಗೆ ಡೆಂಗ್ಯೂ ಜ್ವರ ಕಾಣಿಸಿಕೊಂಡಿತ್ತು, ಇವರುಗಳು ಈಗಾಗಲೇ ಗುಣಮುಖರಾಗಿದ್ದಾರೆ. ಉಳಿದಂತೆ ಚಿಕ್ಕಮೂಡ್ನೂರು ಗ್ರಾಮದಲ್ಲಿ ೧೦ ಮತ್ತು ಪಡ್ನೂರು ಗ್ರಾಮದಲ್ಲಿ ೪ ಪ್ರಕರಣಗಳು ದಾಖಲಾಗಿದ್ದು, ಆ ಪರಿಸರದಲ್ಲಿ ಆರೋಗ್ಯ ಸಹಾಯಕಿ ಮತ್ತು ಸಿಬ್ಬಂದಿಗಳು ಮನೆ ಮನೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿ, ಜಾಗೃತಿ ಮೂಡಿಸುತ್ತಿದ್ದಾರೆ ಹಾಗೂ ಅಲ್ಲಿ ಫಾಗಿಂಗ್ ಮಾಡಲಾಗಿದೆ ಎಂದು ಉಪ್ಪಿನಂಗಡಿ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ| ಮುಶಾಕಿರ್ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.