Home_Page_Advt
Home_Page_Advt
Home_Page_Advt

ಚಿಕ್ಕಮುಡ್ನೂರಿನಲ್ಲಿ ಸೊಳ್ಳೆ ಲಾರ್ವ ಸರ್ವೆ ಅಭಿಯಾನ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಉಪ್ಪಿನಂಗಡಿ ಸಮುದಾಯ ಆರೋಗ್ಯ ಕೇಂದ್ರ, ಬನ್ನೂರು ಗ್ರಾ.ಪಂನ ಸಹಕಾರದೊಂದಿಗೆ ಚಿಕ್ಕಮುಡ್ನೂರು ಗ್ರಾ.ಪಂ ವ್ಯಾಪ್ತಿಯಲ್ಲಿ ಹಿರಿಯ ಆರೋಗ್ಯ ಸಹಾಯಕಿ ಮತ್ತು ಆಶಾ ಕಾರ್ಯಕರ್ತೆಯರು ಡೆಂಗ್ಯೂ ಹಾಗೂ ಮಲೇರಿಯಾ ಸಾಂಕ್ರಾಮಿಕ ರೋಗ ನಿಯಂತ್ರಣ ನಿಟ್ಟಿನಲ್ಲಿ ಸೊಳ್ಳೆಗಳ ‘ಲಾರ್ವ ಸರ್ವೆ’ ಅಭಿಯಾನ ಜೂ.26ರಂದು ನಡೆಯಿತು.

 

ಈಗಾಗಲೇ ಬೇರೆ ಬೇರೆ ಗ್ರಾ.ಪಂ ವ್ಯಾಪ್ತಿಯಲ್ಲಿ ಸೊಳ್ಳೆ ಲಾರ್ವ ಸರ್ವೆ ನಡೆಯುತ್ತಿದ್ದು, ಚಿಕ್ಕಮುಡ್ನೂರು ವ್ಯಾಪ್ತಿಯಲ್ಲಿ ಶಂಕಿತ ಡೆಂಗ್ಯೂ ಪ್ರಕರಣಗಳು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಲಾರ್ವ ಸರ್ವೆ ನಡೆಯಿತು. ಉಪ್ಪಿನಂಗಡಿ ಸಮುದಾಯ ಆರೋಗ್ಯ ಕೇಂದ್ರದ ಮೇಲ್ವಿಚಾರಕರು, ಹಿರಿಯ ಆರೋಗ್ಯ ಸಹಾಯಕಿ ಸೇರಿದಂತೆ 8 ಮಂದಿ ಅರೋಗ್ಯ ಸಹಾಯಕಿಯರು, 8 ಮಂದಿ ಆಶಾ ಕಾರ್ಯಕರ್ತೆಯರ ಮೂಲಕ ಈ ಸರ್ವೆ ಕಾರ್ಯ ನಡೆಯಿತು.

ಗ್ರಾಮದ ಪ್ರತಿಯೊಂದು ಮನೆಗಳಿಗೆ, ಅಂಗಡಿ, ಹೋಟೆಲ್‌ಗಳಿಗೆ ಭೇಟಿ ನೀಡಿ ಅಲ್ಲಿನ ಪರಿಸರದಲ್ಲಿ ಸೊಳ್ಳೆ ಉತ್ಪತ್ತಿಯಾಗುವ ಸ್ಥಳಗಳನ್ನು ಗುರುತಿಸಿ ದಾಖಲಿಸಿಕೊಂಡು ಜಾಗೃತಿ ಮೂಡಿಸಿದ್ದಾರೆ. ಇದರೊಂದಿಗೆ ಮಲೇರಿಯಾ, ಡೆಂಗ್ಯೂ ಸಾಂಕ್ರಾಮಿಕ ಕಾಯಿಲೆ ಬರುವುದು ಹೇಗೆ, ರೋಗದ ಮುಖ್ಯ ಲಕ್ಷಣಗಳು, ರೋಗ ಲಕ್ಷಣ ತಿಳಿದ ಬಳಿಕ ವಹಿಸಬೇಕಾದ ಕ್ರಮ, ರೋಗ ಬಾರದಂತೆ ತಡೆಯುವ ಸರಳ ಮುಂಜಾಗ್ರತಾ ಕ್ರಮ, ಸಾಮಾಜಿಕ ಸ್ವಾಸ್ಥ್ಯದಲ್ಲಿ ಪ್ರತಿಯೊಬ್ಬರ ಪಾತ್ರದ ಬಗ್ಗೆ ಆರೋಗ್ಯ ಶಿಕ್ಷಣವನ್ನು ನೀಡಿದರು.

ಈ ಸಂದರ್ಭದಲ್ಲಿ ಹಿರಿಯ ಆರೋಗ್ಯ ಸಹಾಯಕಿ ಡೈಸಿ, ಚಿಕ್ಕಮುಡ್ನೂರು ಕಿರಿಯ ಆರೋಗ್ಯ ಸಹಾಯಕಿ ದಮಯಂತಿ, ಉಪ್ಪಿನಂಗಡಿ ಆರೋಗ್ಯ ಸಹಾಯಕಿ ಗಾಯತ್ರಿ, 34- ನೆಕ್ಕಿಲಾಡಿ  ಆರೋಗ್ಯ ಸಹಾಯಕಿ ರೇಖಾ, ಕೋಡಿಂಬಾಡಿ ಆರೋಗ್ಯ ಸಹಾಯಕಿ ಶ್ರೀಲಾ ಸಿ ಎಂ, ಬನ್ನೂರು ಆರೋಗ್ಯ ಸಹಾಯಕಿ ಜಯಂತಿ,  ಬೆಳ್ಳಿಪ್ಪಾಡಿ ಆರೋಗ್ಯ ಸಹಾಯಕಿ ಸಾರಮ್ಮ,  ಕಿರಿಯ ಆರೋಗ್ಯ ಸಹಾಯಕ ಭರತೇಶ್‌ ಹಾಗೂ ಆಶಾಕಾರ್ಯಕರ್ತೆಯರು ಈ ಸಂದಭದಲ್ಲಿ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.