Home_Page_Advt
Home_Page_Advt
Home_Page_Advt

ಶುಚಿತ್ವ ಕಾಪಾಡದ ಹೊಟೇಲ್ – ನಗರಸಭೆ ಅಧಿಕಾರಿಗಳಿಂದ ದಾಳಿ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಕೊರೋನಾ ಸೋಂಕು ಸೇರಿದಂತೆ ಸಾಂಕ್ರಾಮೀಕ ರೋಗಳ ಭಯದ ವಾತಾವರಣ ನಡುವೆ ಶುಚಿತ್ವ ಕಾಪಾಡಿಕೊಳ್ಳದೆ ಗ್ರಾಹಕರಿಗೆ ಹಳೆಯ ಆಹಾರ ಉತ್ಪನ್ನಗಳನ್ನು ನೀಡುತ್ತಿರುವ ಆರೋಪಕ್ಕೆ ಸಂಬಂಧಿಸಿ ದರ್ಬೆಯ ಹೊಟೇಲ್‌ವೊಂದಕ್ಕೆ ಪುತ್ತೂರು ನಗರಸಭೆಯ ಪರಿಸರ ಅಭಿಯಂತರರ ನೇತೃತ್ವದಲ್ಲಿ ದಾಳಿ ನಡೆಸಿರುವ ಘಟನೆ ಜೂ. 26 ರಂದು ಸಂಜೆಯ ವೇಳೆ ನಡೆದಿದೆ.
ದರ್ಬೆಯ ಶವರ್ಮಾ ಕಾರ್ನರ್ ಒಳಗಡೆ ಬೆಳಿಗ್ಗೆ ಕಸ ವಿಲೇವಾರಿ ಮಾಡುವ ವೇಳೆ ಹೊಟೇಲ್ ತುಂಬಾ ಗಲೀಜಾಗಿರುವುದು ಕಂಡು ಬಂದಿದ್ದು, ಅದನ್ನು ಪರಿಸರ ಅಭಿಯಂತರರ ಗಮನಕ್ಕೆ ತರಲಾಗಿತ್ತು. ಸಂಜೆಯ ವೇಳೆ ನಗರಸಭೆ ಪರಿಸರ ಅಭಿಯಂತರ ಗುರುಪ್ರಸಾದ್ ಶೆಟ್ಟಿ, ಹಿರಿಯ ಆರೋಗ್ಯ ನಿರೀಕ್ಷಕರಾದ ರಾಮಚಂದ್ರ ಮತ್ತು ಶ್ವೇತಾಕಿರಣ್ ರವರು ಹೊಟೇಲ್‌ಗೆ ದಾಳಿ ನಡೆಸಿ ಪರಿಶೀಲಿಸಿದ್ದಾರೆ. ಈ ವೇಳೆ ಕೊಳೆತ ಆಹಾರ ಪದಾರ್ಥಗಳು ಇರುವುದು ಬೆಳಕಿಗೆ ಬಂದಿದೆ. ಹೊಟೇಲ್ ನಡೆಸಲು ಅನುಮತಿಯೂ ಇಲ್ಲದೇ ಇರುವುದರಿಂದ ಮತ್ತು ಶುಚಿತ್ವಕ್ಕೆ ಆದ್ಯತೆ ನೀಡದಿರುವ ಹಿನ್ನಲೆಯಲ್ಲಿ ಅಧಿಕಾರಿಗಳು ಹೊಟೇಲ್ ಮಾಲಿಕರಿಗೆ ಎಚ್ಚರಿಕೆ ನೀಡಿದ್ದಾರೆ. ಅನುಮತಿ ಪಡೆದು ಶುಚಿತ್ವ ಕಾಪಾಡಿಕೊಳ್ಳುವವರೆಗೆ ಹೊಟೇಲ್ ತೆರೆಯದಂತೆಯೂ ಎಚ್ಚರಿಕೆ ನೀಡಿದ್ದಾರೆ. ಸ್ಯಾನಿಟರಿ ಸೂಪರ್‌ವೈಸರ್ ಅಮಿತ್, ನಾಗೇಶ್, ಚಾಲಕ ರಾಧಾಕೃಷ್ಣ ದಾಳಿ ನಡೆಸಿದ ತಂಡದಲ್ಲಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.