ಉಪ್ಪಿನಂಗಡಿಯಲ್ಲಿ ಆಟೋ ರಿಕ್ಷಾ, ಜೀಪು ತಂಗುದಾಣದ ಇಂಟರ್‌ಲಾಕ್‌ ಅಳವಡಿಕೆಯ ಉದ್ಘಾಟನಾ ಕಾರ್ಯಕ್ರಮ

ಉಪ್ಪಿನಂಗಡಿ: ಇಲ್ಲಿನ ಬಸ್ ನಿಲ್ದಾಣದ ಮುಂಭಾಗದಲ್ಲಿರುವ ಅಟೋ ರಿಕ್ಷಾ ಮತ್ತು ಟೂರಿಸ್ಟ್ ಜೀಪು ತಂಗುದಾಣಕ್ಕೆ ಶಾಸಕರ ಪ್ರದೇಶಾಭಿವೃದ್ಧಿ ನಿಧಿ ಅನುದಾನದಲ್ಲಿ ಕೈಗೊಂಡ ಇಂಟರ್ ಲಾಕ್ ಅಳವಡಿಕೆ ಕಾಮಗಾರಿಯ ಉದ್ಘಾಟನಾ ಕಾರ‍್ಯಕ್ರಮ ಜೂ. 27ರಂದು ನಡೆಯಿತು.

ಶಾಸಕ ಸಂಜೀವ ಮಟಂದೂರು ಕಾಮಗಾರಿ ಉದ್ಘಾಟಿಸಿ ಮಾತನಾಡಿ ಇಲ್ಲಿನ ನೇತ್ರಾವತಿ ಅಟೋ ರಿಕ್ಷಾ ಚಾಲಕರ ಸಂಘ ಮತ್ತು ಬಿ.ಎಂ.ಎಸ್. ಅಟೋ ರಿಕ್ಷಾ ಚಾಲಕರ ಸಂಘದವರು ಸಲ್ಲಿಸಿರುವ ಬೇಡಿಕೆಯನ್ನು ಆದ್ಯತೆಯ ನೆಲೆಯಲ್ಲಿ ಈಡೇರಿಸಲಾಗಿದ್ದು, ರಿಕ್ಷಾ ಮತ್ತು ಜೀಪು ಚಾಲಕರು ಇದರ ಸದುಪಯೋಗ ಪಡೆದುಕೊಂಡು ನಾಗರೀಕರಿಗೆ ಉತ್ತಮ ಸೇವೆ ಒದಗಿಸಬೇಕು ಎಂದರು.
ಸಮಾರಂಭದಲ್ಲಿ ತಾಲ್ಲೂಕು ಪಂಚಾಯಿತಿ ಸದಸ್ಯೆ ಶ್ರೀಮತಿ ಸುಜಾತ ಕೃಷ್ಣ ಆಚಾರ್ಯ, ಗ್ರಾಮ ಪಂಚಾಯಿತಿ ಸದಸ್ಯರಾದ ಸುನಿಲ್ ದಡ್ಡು, ಚಂದ್ರಶೇಖರ್ ಮಡಿವಾಳ, ರಾಜಗೋಪಾಲ ಹೆಗ್ಡೆ, ಯು.ಟಿ. ಮಹಮ್ಮದ್ ತೌಶಿಫ್, ರಮೇಶ್ ಬಂಡಾರಿ, ಕೆ.ವಿ. ಪ್ರಸಾದ್, ಸಿ.ಎ, ಬೇಂಕ್ ಮಾಜಿ ಅಧ್ಯಕ್ಷ ಕೆ.ವಿ. ಪ್ರಸಾದ್, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ರಾಮಚಂದ್ರ ಮಣಿಯಾಣಿ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಎನ್. ಉಮೇಶ್ ಶೆಣೈ, ಸ್ಥಳೀಯ ಪ್ರಮುಖರಾದ ಯು.ಜಿ. ರಾಧ, ಶ್ರೀಮತಿ ಉಷಾ ಮುಳಿಯ, ಜಯಂತ ಪುರೋಳಿ, ಗುತ್ತಿಗೆದಾರ ಬಿ.ಕೆ. ಆನಂದ, ಅಟೋ ರಿಕ್ಷಾ ಚಾಲಕ ಸಂಘದ ಪದಾಧಿಕಾರಿಗಳಾದ ಅಬ್ದುಲ್ ಲತೀಫ್, ಪ್ರಸಾದ್ ಪಚ್ಚಾಡಿ, ರಾಜೇಶ್ ಹತ್ತುಕಲಸೆ, ನವೀನ್ ಪಂಚಶ್ರೀ, ಹರೀಶ್ ಪಟ್ಲ, ಸುರೇಶ್ ಮಡಿವಾಳ, ಕೃಷ್ಣಪ್ಪ ಗಾಣಿಗ, ದಯಾನಂದ ಕಾಮತ್, ಕೆ. ಜಗದೀಶ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಕಾರ‍್ಯಕ್ರಮದಲ್ಲಿ ಬಿ.ಎಂ.ಎಸ್. ಅಟೋ ರಿಕ್ಷಾ ಚಾಲಕರ ಸಂಘದವರು ಸಿಹಿ ತಿಂಡಿ ಹಂಚಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.