ಪುತ್ತೂರು: ಮುಂಡೂರು ಗ್ರಾ.ಪಂ ವಾರ್ಡ್-188ರಲ್ಲಿ ವಿವಿಧ ಕಾಮಗಾರಿಗಳ ಗುದ್ದಲಿ ಪೂಜೆ, ಉದ್ಘಾಟನೆ ಹಾಗೂ ಅಭಿನಂದನಾ ಕಾರ್ಯಕ್ರಮ ಜೂ.27ರಂದು ನಡೆಯಿತು.
ಪೆರಿಯಡ್ಕ-ಕುರೆಮಜಲು-ಪುತ್ತಿಲ ರಸ್ತೆ ಬದಿಯಲ್ಲಿ ಅಳವಡಿಸಲಾದ ಸುಮಾರು 54 ಬೀದಿ ದೀಪಗಳನ್ನು ಮುಂಡೂರು ಗ್ರಾ.ಪಂ ಅಧ್ಯಕ್ಷ ಎಸ್.ಡಿ ವಸಂತ ಅವರು ಉದ್ಘಾಟಿಸಿದರು. ನಂತರ ಪುತ್ತಿಲದಲ್ಲಿ ಕಾಂಕ್ರೀಟ್ ರಸ್ತೆಗೆ ಗುದ್ದಲಿ ಪೂಜೆ ನೆರವೇರಿಸಿದರು.
ಹಿಂದೂ ಸಂಘಟನೆಗಳ ಮುಖಂಡ ಅರುಣ್ ಕುಮಾರ್ ಪುತ್ತಿಲ, ಮುಂಡೂರು ಗ್ರಾ.ಪಂ ಮಾಜಿ ಅಧ್ಯಕ್ಷ ಸಂಜೀವ ಪೂಜಾರಿ ಕುರೆಮಜಲು, ಮೂರ್ತೆದಾರರ ಸಹಕಾರ ಸಂಘದ ಹೊನ್ನಪ್ಪ ಪೂಜಾರಿ, ಮುಂಡೂರು ಹಾಲು ಸೊಸೈಟಿಯ ನಿರ್ದೇಶಕ ಅನಿಲ್ ಕುಮಾರ್ ಕನ್ನರ್ನೂಜಿ, ಮುಂಡೂರು ಗ್ರಾ.ಪಂ ಸದಸ್ಯರಾದ ಅಶೋಕ್ ಕುಮಾರ್ ಪುತ್ತಿಲ, ಬಾಲಕೃಷ್ಣ ಪೂಜಾರಿ, ಪ್ರೇಮಲತಾ ಗುತ್ತಿನಪಾಲು, ಸ್ವಾತಿ ಜನಾರ್ದನ, ಸಾವಿತ್ರಿ, ಬಿ.ಟಿ ಮಹೇಶ್ಚಂದ್ರ ಸಾಲ್ಯಾನ್ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.